Karnataka : ಕೊನೆಯ ಚುನಾವಣೆಗೆ ಭರ್ಜರಿ ಸಿದ್ಧತೆ ಮಾಡಿಕೊಂಡಿರುವ ಸಿದ್ದರಾಮಯ್ಯ (Siddaramaiah) ಅವರು ಇಷ್ಟು ದಿನ ಹುಡುಕಾಟ ನಡೆಸಿ ಸೀಟು ಖರೀದಿಸಿರುವ ಸಂಗತಿ ನಿಜಕ್ಕೂ ನಾಚಿಕೆಗೇಡು. ಆದರೆ ಶ್ರೀನಿವಾಸ ಗೌಡರ ಜತೆ 17 ಕೋಟಿ ರೂ.ಗೆ ಡೀಲ್ ಮಾಡಿಕೊಂಡಿರುವುದು,ಪ್ರಜಾಪ್ರಭುತ್ವದ ಪಾಲಿನ ದುರಂತ ಎಂದು ರಾಜ್ಯ ಬಿಜೆಪಿ ವಿಪಕ್ಷ ನಾಯಕ ಸಿದ್ದರಾಮಯ್ಯ ವಿರುದ್ದ ವಾಗ್ದಾಳಿ ನಡೆಸಿದೆ.

ಕೋಲಾರ ವಿಧಾನಸಭಾ ಕ್ಷೇತ್ರದಿಂದ ಸ್ಪರ್ಧೆಸಲು ಹಾಲಿ ಜೆಡಿಎಸ್ (JDS) ಶಾಸಕ ಕೆ. ಶ್ರೀನಿವಾಸ್‌ಗೌಡರೊಂದಿಗೆ ಕಾಂಗ್ರೆಸ್(Congress) ನಾಯಕ ಸಿದ್ದರಾಮಯ್ಯ ಅವರು 17 ಕೋಟಿ ರೂ.ಗಳಿಗೆ ಡೀಲ್ ಮಾಡಿಕೊಂಡಿದ್ದಾರೆ ಎಂದು ಆರೋಪಿಸಿರುವ ಬಿಜೆಪಿ, ಈ ಕುರಿತು ಸರಣಿ ಟ್ವೀಟ್‌ಮಾಡಿ ವಾಗ್ದಾಳಿ ನಡೆಸಿದ್ದು,
ಎಲ್ಲರನ್ನೂ ಎಲ್ಲಾ ಸಂದರ್ಭಗಳಲ್ಲೂ ಕೊಳ್ಳುವುದಕ್ಕೆ ಸಾಧ್ಯವಿಲ್ಲ , ಸಿದ್ದರಾಮಯ್ಯನವರೆ (Siddaramaiah) ನೀವು ಅಧಿಕಾರದ ಮದದಲ್ಲಿ ಡಿ.ಕೆ.ರವಿಯವರ ಧ್ವನಿ ಅಡಗಿಸಿದಿರಿ. ಹಣಬಲದಿಂದ ಪ್ರಕರಣವನ್ನು ಅಡಗಿಸಿದ್ದೀರಿ, ಈಗ ಕ್ಷೇತ್ರ ಖರೀದಿಸಿದ್ದೀರಿ,ಆದರೆ ಮತದಾರರ ಖರೀದಿ ಸಾಧ್ಯವಿಲ್ಲ. ಈ ಬಾರಿ ಕೋಲಾರದ ಜನತೆ ನಿಮಗೆ ಕಲಿಸಲಿದ್ದಾರೆ ಎಂದಿದೆ.
ಇದನ್ನೂ ಓದಿ : https://vijayatimes.com/rakhi-sawant-converted-islam/
ಇನ್ನೊಂದು ಟ್ವೀಟ್‌ನಲ್ಲಿ, ಕಳೆದ ಬಾರಿ ಚಾಮುಂಡೇಶ್ವರಿಯಲ್ಲಿ ಸೋತ ಸಿದ್ದರಾಮಯ್ಯ ಅವರು ಬಾದಾಮಿಯಲ್ಲಿ ಹಣಬಲ ಬಳಸಿಯೂ ಅತೀ ಕಡಿಮೆ ಅಂತರದಿಂದ ಬಚಾವಾಗಿ ಬಂದರು. ಪ್ರತಿಬಾರಿ ಹೊಸಹೊಸ ಮಂದಿಗೆ ಮೋಸ ಮಾಡುವ ಅವರು ಈ ಬಾರಿಯ ಆಯ್ಕೆ ಕೋಲಾರ.
ಆದರೆ ಅವರ ಕುಟಿಲ ವಂಚನೆಯನ್ನು ಕೋಲಾರ (Kolara) ಜನತೆ ಆರಂಭದಲ್ಲೇ ನೋಡಿದ್ದಾರೆ. ಹಲವು ಕೆಟ್ಟ ಪರಂಪರೆ ಹುಟ್ಟುಹಾಕಿದ ಕೀರ್ತಿ ಇವರಿಗೆ ಸಲ್ಲುತ್ತದೆ. ಅಸ್ತಿತ್ವಕ್ಕಾಗಿ ಮಾಡುವ ಕಾರ್ಯಗಳೆಲ್ಲವು ಕೊನೆಯ ಹೋರಾಟಗಳಲ್ಲಿ ಇವರ ಎಲ್ಲಾ ನೀತಿಗಳನ್ನೂ ಬದಿಗೊತ್ತಲಾಗುತ್ತದೆ. ಆದರೆ ಈ ಪ್ರಮಾಣದಲ್ಲಿ ಆಗುತ್ತಿರುವುದು ಪ್ರಜಾಸತ್ತಾತ್ಮಕ ವ್ಯವಸ್ಥೆಗೆ ಮಾರಕ ಎಂದು ಟೀಕಿಸಿದೆ.

ಮತ್ತೊಂದು ಟ್ವೀಟ್‌ನಲ್ಲಿ (Tweet) ,ಕಾಂಗ್ರೆಸ್ ಪಕ್ಷದ ಅಧ್ಯಕ್ಷರು ಟಿಕೆಟ್ ಮಾರಾಟಕ್ಕಿಟ್ಟರೆ, ವಿರೋಧ ಪಕ್ಷದ ನಾಯಕರು ಸೀಟನ್ನೇ ಖರೀದಿ ಮಾಡುತ್ತಾರೆ. ಚುನಾವಣಾ ರಾಜಕಾರಣದಲ್ಲಿ ಹಿಂದೆಂದೂ ಕಂಡು ಕೇಳರಿಯದ ಅಕ್ರಮ-ಸಕ್ರಮ ಯೋಜನೆಗಳನ್ನು ಕಾಂಗ್ರೆಸ್ ಪಕ್ಷ ಚಾಲನೆಗೆ ತಂದಿದೆ ಎಂದು ರಾಜ್ಯ ಬಿಜೆಪಿ (State BJP) ಟೀಕಿಸಿದೆ.