ಅಂತಾರಾಷ್ಟ್ರೀಯ ಯೋಗ ದಿನಾಚರಣೆಯ(International Yoga Day) ಅಂಗವಾಗಿ ಪ್ರಧಾನಿ(PrimeMinister) ನರೇಂದ್ರ ಮೋದಿ(Narendra Modi) ಅವರು ಈ ಬಾರಿ ಕರ್ನಾಟಕಕ್ಕೆ(Karnataka) ಭೇಟಿ ನೀಡಿದ್ದಾರೆ. ಈ ಹಿನ್ನಲೆಯಲ್ಲಿ ಈ ಬಾರಿ ಕರ್ನಾಟಕದಲ್ಲಿ ಯೋಗ ದಿನಾಚರಣೆಗೆ ಹೊಸ ಮೆರಗು ಬಂದಿದೆ. ಹಲವು ಗಣ್ಯರು ಯೋಗ ದಿನಾಚರಣೆಯ ಶುಭಾಶಯಗಳನ್ನು ಕೋರಿದ್ದಾರೆ. ಆದರೆ ವಿಪಕ್ಷ ನಾಯಕ ಸಿದ್ದರಾಮಯ್ಯ(Siddaramaiah) ಮಾತ್ರ ಯೋಗ ದಿನಾಚರಣೆಯ ಶುಭಕೋರುತ್ತಾ, ಬಿಜೆಪಿ ಮತ್ತು ಪ್ರಧಾನಿ ಮೋದಿ ಅವರ ಕಾಲೆಳೆದಿದ್ದಾರೆ.
ಶ್ರದ್ಧೆ, ಬದ್ಧತೆ ಮತ್ತು ಸಹೃದಯತೆಯಿಂದ ಬೌದ್ಧಿಕ ಮತ್ತು ದೈಹಿಕ ಆರೋಗ್ಯಕ್ಕಾಗಿ ಯೋಗ ಮಾಡೋಣ. ಯೋಗ ಪ್ರಚಾರಕ್ಕಲ್ಲ, ಆರೋಗ್ಯಕ್ಕಾಗಿ ಎಂದು ಸಿದ್ದರಾಮಯ್ಯ ಟ್ವೀಟ್(Tweet) ಮಾಡಿದ್ದಾರೆ. ಇನ್ನು ಜೆಡಿಎಸ್ ನಾಯಕ(JDS Leader) ಎಚ್.ಡಿ.ಕುಮಾರಸ್ವಾಮಿ(HD Kumarswamy) ಅವರು, ಯೋಗವು ಭಾರತದ ಪ್ರಾಚೀನ ಸಂಪತ್ತು. ಅನನ್ಯತೆಯ ಪ್ರತೀಕ. ನಿತ್ಯ ಜೀವನದಲ್ಲಿ ಯೋಗವನ್ನು ಅಳವಡಿಸಿಕೊಂಡು ಆರೋಗ್ಯವಂತರಾಗಿರೋಣ. ಆರೋಗ್ಯಕರ ಕರ್ನಾಟಕವನ್ನು ನಿರ್ಮಿಸೋಣ ಎಂದು ಟ್ವೀಟ್ ಮಾಡಿದ್ದಾರೆ.
ಇನ್ನು ಯೋಗವು ಸಂಗೀತದಂತೆ. ದೇಹವನ್ನು ಲಯ ಬದ್ಧವಾಗಿಸುವ ಶಕ್ತಿ ಯೋಗದಿಂದ ಮಾತ್ರ ಲಭಿಸಲು ಸಾಧ್ಯ. ಮನಸ್ಸಿನ ರಾಗ ಮತ್ತು ಆತ್ಮದ ತಾಳವನ್ನು ಆರೋಗ್ಯವೆಂಬ ಸ್ವರದೊಂದಿಗೆ ಬೆಸೆದು ಜೀವನವೆಂಬ ಸಂಗೀತವನ್ನು ಸೊಗಸಾಗಿಸುತ್ತೆ ಯೋಗ. ಎಲ್ಲರಿಗೂ ಅಂತಾರಾಷ್ಟ್ರೀಯ ಯೋಗ ದಿನಾಚರಣೆಯ ಶುಭಾಶಯಗಳು ಎಂದು ಕಾಂಗ್ರೆಸ್ ಶಾಸಕ(Congress MLA) ಜಮೀರ್ ಅಹಮ್ಮದ್ ಖಾನ್(Zameer Ahmed Khan) ಟ್ವೀಟ್ ಮಾಡಿದ್ದಾರೆ.
ಶ್ರದ್ಧೆ, ಬದ್ಧತೆ ಮತ್ತು ಸಹೃದಯತೆಯಿಂದ ಬೌದ್ಧಿಕ ಮತ್ತು ದೈಹಿಕ ಆರೋಗ್ಯಕ್ಕಾಗಿ ಯೋಗ ಮಾಡೋಣ.
— Siddaramaiah (@siddaramaiah) June 21, 2022
ಯೋಗ ಪ್ರಚಾರಕ್ಕಲ್ಲ, ಆರೋಗ್ಯಕ್ಕಾಗಿ.
ಸರ್ವರಿಗೂ ಅಂತಾರಾಷ್ಟ್ರೀಯ ಯೋಗ ದಿನದ ಶುಭಾಶಯಗಳು.#InternationalDayofYoga pic.twitter.com/OHF6SoagqJ
ಇನ್ನು ಪ್ರತಿಯೊಬ್ಬ ವ್ಯಕ್ತಿಯ ದೈಹಿಕ, ಮಾನಸಿಕ ಭಾವನಾತ್ಮಕ ಹಾಗೂ ಆಧ್ಯಾತ್ಮಿಕ ಉನ್ನತಿಗಾಗಿ ಯೋಗ ಸಹಕಾರಿ. ಜೀವನದಲ್ಲಿ ಯೋಗ ಅಭ್ಯಾಸವನ್ನು ಅಳವಡಿಸಿಕೊಳ್ಳುವ ಮುಖೇನ ಒಳ್ಳೆಯ ಆರೋಗ್ಯ ಭಾಗ್ಯವನ್ನು ನಮ್ಮದಾಗಿಸಿಕೊಳ್ಳೊಣ ಎಂದು ನಿಖಿಲ್ ಕುಮಾರಸ್ವಾಮಿ ಅವರು ಟ್ವೀಟ್ ಮಾಡಿದ್ದಾರೆ. ಯೋಗವು ದೇಹ, ಮನಸ್ಸು ಮತ್ತು ಆತ್ಮವನ್ನು ಒಂದುಗೂಡಿಸುತ್ತದೆ, ಇದಕ್ಕಾಗಿಯೇ ಯೋಗವನ್ನು ಪರಿಪೂರ್ಣ ವ್ಯಾಯಾಮ ಎಂದು ಕರೆಯಲಾಗುತ್ತದೆ.
ಜೀವನದ ಸವಾಲುಗಳ ನಡುವೆ ನಿಮ್ಮ ಆರೋಗ್ಯ ಮತ್ತು ಯೋಗಕ್ಷೇಮಕ್ಕೆ ಆದ್ಯತೆ ನೀಡಲು ಯೋಗ ದಿನಾಚರಣೆ ಪ್ರೇರೇಪಿಸಲಿ ಎಂದು ರಾಜ್ಯ ಕಾಂಗ್ರೆಸ್(State Congress President) ಅಧ್ಯಕ್ಷ ಡಿ.ಕೆ.ಶಿವಕುಮಾರ್(DK Shivkumar) ಶುಭಕೋರಿದ್ದಾರೆ.