• ಹೋಮ್
  • ವಿಜಯ ಟೈಮ್ಸ್‌
    • ಪ್ರಮುಖ ಸುದ್ದಿ
    • ರಾಜ್ಯ
    • ದೇಶ-ವಿದೇಶ
    • ರಾಜಕೀಯ
  • ಕವರ್‌ ಸ್ಟೋರಿ
  • ಲೈಫ್ ಸ್ಟೈಲ್
    • ಆರೋಗ್ಯ
  • ಕ್ರೀಡೆ
  • ಮನರಂಜನೆ
    • ವೈರಲ್ ಸುದ್ದಿ
Menu
  • ಹೋಮ್
  • ವಿಜಯ ಟೈಮ್ಸ್‌
    • ಪ್ರಮುಖ ಸುದ್ದಿ
    • ರಾಜ್ಯ
    • ದೇಶ-ವಿದೇಶ
    • ರಾಜಕೀಯ
  • ಕವರ್‌ ಸ್ಟೋರಿ
  • ಲೈಫ್ ಸ್ಟೈಲ್
    • ಆರೋಗ್ಯ
  • ಕ್ರೀಡೆ
  • ಮನರಂಜನೆ
    • ವೈರಲ್ ಸುದ್ದಿ
Vijaya Times logo
  • ಹೋಮ್
  • ವಿಜಯ ಟೈಮ್ಸ್‌
    • ಪ್ರಮುಖ ಸುದ್ದಿ
    • ರಾಜ್ಯ
    • ದೇಶ-ವಿದೇಶ
    • ರಾಜಕೀಯ
  • ಕವರ್‌ ಸ್ಟೋರಿ
  • ಲೈಫ್ ಸ್ಟೈಲ್
    • ಆರೋಗ್ಯ
  • ಕ್ರೀಡೆ
  • ಮನರಂಜನೆ
    • ವೈರಲ್ ಸುದ್ದಿ
Menu
  • ಹೋಮ್
  • ವಿಜಯ ಟೈಮ್ಸ್‌
    • ಪ್ರಮುಖ ಸುದ್ದಿ
    • ರಾಜ್ಯ
    • ದೇಶ-ವಿದೇಶ
    • ರಾಜಕೀಯ
  • ಕವರ್‌ ಸ್ಟೋರಿ
  • ಲೈಫ್ ಸ್ಟೈಲ್
    • ಆರೋಗ್ಯ
  • ಕ್ರೀಡೆ
  • ಮನರಂಜನೆ
    • ವೈರಲ್ ಸುದ್ದಿ
Visit Channel
Home ರಾಜಕೀಯ

ಸರ್ಕಾರಕ್ಕೆ ಸೂಟುಬೂಟುದಾರಿಗಳ ಜೊತೆಯಲ್ಲಿ ಹರಕಲು ಬಟ್ಟೆಯ ಬಡವನೂ ನೆನಪಲ್ಲಿ ಇರಬೇಕು : ಸಿದ್ದರಾಮಯ್ಯ

Rashmitha Anish by Rashmitha Anish
in ರಾಜಕೀಯ, ರಾಜ್ಯ
ಸರ್ಕಾರಕ್ಕೆ ಸೂಟುಬೂಟುದಾರಿಗಳ ಜೊತೆಯಲ್ಲಿ ಹರಕಲು ಬಟ್ಟೆಯ ಬಡವನೂ ನೆನಪಲ್ಲಿ ಇರಬೇಕು : ಸಿದ್ದರಾಮಯ್ಯ
0
SHARES
39
VIEWS
Share on FacebookShare on Twitter

Karnataka: ಆಯವ್ಯಯ ಪತ್ರ ಮಂಡಿಸುವ ಸರ್ಕಾರಕ್ಕೆ ಸೂಟುಬೂಟುದಾರಿಗಳ ಜೊತೆಯಲ್ಲಿ ಹರಕಲು ಬಟ್ಟೆಯ ಬಡವನೂ ನೆನಪಲ್ಲಿ ಇರಬೇಕು.  ಒಬ್ಬ ಬಡವ ಖರೀದಿಸುವ (Siddaramaiah tweets about Tax) ಒಂದು ಬೆಂಕಿಪೆಟ್ಟಿಗೆ,

ಮಕ್ಕಳಿಗೆ ಖರೀದಿಸುವ ಒಂದೈದು ರೂಪಾಯಿಯ ಬಿಸ್ಕಿಟ್ ಪೊಟ್ಟಣದ ಬೆಲೆಯಲ್ಲಿಯೂ ತೆರಿಗೆ ಸೇರಿರುತ್ತದೆ ಎನ್ನುವುದನ್ನು ನಾವು ಮರೆಯಬಾರದು ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ(Siddaramaiah) ಅವರು ರಾಜ್ಯ ಸರ್ಕಾರದ ವಿರುದ್ದ  ವಾಗ್ದಾಳಿ ನಡೆಸಿದ್ದಾರೆ.

ಈ ಕುರಿತು ಸರಣಿ ಟ್ವೀಟ್‌(Tweet) ಮಾಡಿರುವ ಅವರು,  ರಾಜ್ಯದ ಬೊಕ್ಕಸದಲ್ಲಿರುವುದು ಜನರ ಬೆವರಗಳಿಕೆಯ ತೆರಿಗೆ(Tax) ಹಣ.

ವರಮಾನ ತೆರಿಗೆ ನೀಡುವವರು ಮಾತ್ರ ತೆರಿಗೆದಾರರು ಎನ್ನುವ ತಪ್ಪು ಕಲ್ಪನೆ ನಮ್ಮಲ್ಲಿ ಬಹಳಷ್ಟು ಜನರಲ್ಲಿದೆ.  

ಸರ್ಕಾರ ಮಂಡಿಸುವ ಆಯವ್ಯಯ ಎಂದರೆ ಅದು ಅಂಕಿ ಅಂಶಗಳ ಕಸರತ್ತು ಅಲ್ಲ, ಸರಳವಾಗಿ ಹೇಳುವುದಾದರೆ ಇದು ರಾಜ್ಯದ ಪ್ರತಿಯೊಬ್ಬ ಪ್ರಜೆಯ ನಿತ್ಯದ ಬದುಕಿನ ಲೆಕ್ಕ,

ಅವನ ಮನೆಯ ಆಯವ್ಯಯದ ಲೆಕ್ಕ.. ಇದರಲ್ಲಿ ಹಿಂದಿನ ಸಾಧನೆಯ ಲೆಕ್ಕವೂ ಇರಬೇಕು, ಮುಂದಿನ ಯೋಜನೆಗಳ ವಿವರವೂ ಇರಬೇಕು ಎಂದಿದ್ದಾರೆ.

Siddaramaiah tweets about Tax

ಇನ್ನೊಂದು ಟ್ವೀಟ್‌ನಲ್ಲಿ,  2018-19ರ ನನ್ನ ಕೊನೆಯ ಬಜೆಟ್ ನಲ್ಲಿ ಹಿಂದಿನ ಐದು ವರ್ಷಗಳ ಸಾಧನೆಗಳ ಸಂಪೂರ್ಣ ವಿವರಗಳನ್ನು ನೀಡಿದ್ದೆ. ಸದನದಲ್ಲಿ ಮಂಡಿಸಿರುವ ಆ ವಿವರ ಅಧಿಕೃತ ದಾಖಲೆಯಾಗಿದೆ.

ಈಗ ಮುಖ್ಯಮಂತ್ರಿ ಬೊಮ್ಮಾಯಿ(Basavaraj Bommai) ಅವರು ನಮ್ಮ ಪ್ರಣಾಳಿಕೆಯ ಭರವಸೆಗಳಲ್ಲಿ ಶೇಕಡಾ 30ರಷ್ಟು ಜಾರಿಗೆ ಬಂದಿಲ್ಲ ಎಂದು ಸುಳ್ಳು ಹೇಳುತ್ತಿದ್ದಾರೆ.  

ಕಳೆದ ಬಜೆಟ್ನಲ್ಲಿ ಬಿಜೆಪಿ ಸರ್ಕಾರ 206 ಹೊಸ ಕಾರ್ಯಕ್ರಮಗಳನ್ನು ಹೇಳಿತ್ತು, ಅದರಲ್ಲಿ ಸುಮಾರು 57 ಕಾರ್ಯಕ್ರಮಗಳನ್ನು ಇವತ್ತಿನ ವರೆಗೆ ಜಾರಿಗೆ ಕೊಡಲು ಆಗಿಲ್ಲ.

ಜನವರಿ ಅಂತ್ಯದವರೆಗೆ ಬಜೆಟ್ ನಲ್ಲಿ(Budget) ತೋರಿಸಿದ ಹಣದಲ್ಲಿ ಖರ್ಚಾದದ್ದು ಕೇವಲ 56% ಮಾತ್ರ.

ಇದನ್ನೂ ಓದಿ: ಖ್ಯಾತ ಗಾಯಕ ಸೋನು ನಿಗಮ್ ಮತ್ತು ತಂಡದ ಮೇಲೆ ಹಲ್ಲೆ! ಮುಂಬೈ ಪೊಲೀಸ್‌ ಠಾಣೆ ಮೆಟ್ಟಿಲೇರಿದ ಗಾಯಕ

ಒಂದು ತಿಂಗಳಲ್ಲಿ 44% ಹಣ ಖರ್ಚು ಮಾಡಲು ಆಗುತ್ತಾ?  ಯಾವುದೇ ಆಯವ್ಯಯ ಪತ್ರದ ಆತ್ಮ- ಉತ್ತರದಾಯಿತ್ವ ಮತ್ತು ಪಾರದರ್ಶಕತೆ.

ಈ ಎರಡು ಮಾನದಂಡಗಳಲ್ಲಿ ಮುಖ್ಯಮಂತ್ರಿ  ಬೊಮ್ಮಾಯಿ ಅವರು ಮಂಡಿಸಿರುವ ಆಯವ್ಯಯ ಪತ್ರವನ್ನು ನೋಡಿದರೆ ಇದು ಸುಳ್ಳಿನ ಕಂತೆಯಂತೆ ಕಾಣಿಸುತ್ತಿದೆ.

ಹಿಂದಿನ ನಮ್ಮ ಸರ್ಕಾರದ ಆರೂ ಬಜೆಟ್ ನಮ್ಮ ಆಡಳಿತದಂತೆಯೇ ಪಾರದರ್ಶಕವಾಗಿತ್ತು ಮತ್ತು ಜನತೆಗೆ ಉತ್ತರದಾಯಿಯಾಗಿತ್ತು.

ನಮ್ಮ ಐದು ವರ್ಷಗಳ ಸರ್ಕಾರ ವ್ಯಯ ಮಾಡಿದ್ದ ಜನರ ತೆರಿಗೆ ಹಣದ ಪೈಸೆಪೈಸೆ ಲೆಕ್ಕವನ್ನು ಅದೇ ಜನತೆಗೆ ಒಪ್ಪಿಸಿದ್ದೇನೆ. ಜನರಿಗೆ ಸುಳ್ಳು ಹೇಳಿರಲಿಲ್ಲ ಎಂದಿದ್ದಾರೆ.

Siddaramaiah tweets about Tax

ಇನ್ನೊಂದು ಟ್ವೀಟ್‌ನಲ್ಲಿ,  ನಾನು ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕಾರ ಮಾಡಿದ್ದಾಗ ಸಾಂವಿಧಾನಿಕ ಸಂಪ್ರದಾಯದ ಪ್ರಮಾಣದ ಜೊತೆ ಇನ್ನೊಂದು ಪ್ರಮಾಣ ಮಾಡಿದ್ದೆ.

ಅದು ನುಡಿದಂತೆ ನಡೆಯುತ್ತೇನೆ ಎನ್ನುವ ಪ್ರಮಾಣ. ಆ ಪ್ರಮಾಣದಂತೆಯೇ ನಾನು  ನಡೆದುಕೊಂಡಿದ್ದೇನೆ ಎಂಬ ಆತ್ಮತೃಪ್ತಿ ನನಗಿದೆ. ರಾಜ್ಯ ಬಿಜೆಪಿ(BJP) ತನ್ನ ಪ್ರಣಾಳಿಕೆಯ ಶೇಕಡಾ 90ರಷ್ಟು ಭರವಸೆಗಳನ್ನು ಕಳೆದ 4 ವರ್ಷಗಳಿಂದ ಈಡೇರಿಸಿಲ್ಲ,

ನಮ್ಮ ಸರ್ಕಾರ ಪಕ್ಷದ ಪ್ರಣಾಳಿಕೆಯಲ್ಲಿನ 165 ಭರವಸೆಗಳಲ್ಲಿ 158 ಭರವಸೆಗಳನ್ನು ಈಡೇರಿಸಿದೆ. ಸಭಾಧ್ಯಕ್ಷರು ಅವಕಾಶ ನೀಡಿದರೆ ಈ ಎರಡು ಪ್ರಣಾಳಿಕೆಗಳ ಬಗ್ಗೆ ಚರ್ಚೆಗೆ ನಾನು ಸಿದ್ಧನಿದ್ದೇನೆ ಎಂದು  ಸವಾಲು ಹಾಕಿದ್ದಾರೆ.

Tags: politicalSiddaramaiahtweets

Related News

ಹಳೇ ಮೈಸೂರು ಭಾಗದಲ್ಲಿ ಕಾಂಗ್ರೆಸ್-ಜೆಡಿಎಸ್‌ಗೆ ಆತಂಕ ತಂದ ಬಿಜೆಪಿ ತಂತ್ರಗಾರಿಕೆ‌
ರಾಜಕೀಯ

ಹಳೇ ಮೈಸೂರು ಭಾಗದಲ್ಲಿ ಕಾಂಗ್ರೆಸ್-ಜೆಡಿಎಸ್‌ಗೆ ಆತಂಕ ತಂದ ಬಿಜೆಪಿ ತಂತ್ರಗಾರಿಕೆ‌

March 30, 2023
300 ಯೂನಿಟ್ ಉಚಿತ ವಿದ್ಯುತ್, 2 ಲಕ್ಷ ಉದ್ಯೋಗ ಸೃಷ್ಟಿ ; ಪ್ರಣಾಳಿಕೆ ಬಿಡುಗಡೆ ಮಾಡಿದ ಆಪ್
ರಾಜಕೀಯ

300 ಯೂನಿಟ್ ಉಚಿತ ವಿದ್ಯುತ್, 2 ಲಕ್ಷ ಉದ್ಯೋಗ ಸೃಷ್ಟಿ ; ಪ್ರಣಾಳಿಕೆ ಬಿಡುಗಡೆ ಮಾಡಿದ ಆಪ್

March 30, 2023
ಸಿದ್ದರಾಮಯ್ಯ ವಿರುದ್ಧ ವಿಜಯೇಂದ್ರ ಕಣಕ್ಕೆ;   ಸುಳಿವು ನೀಡಿದ ಯಡಿಯೂರಪ್ಪ..!
ರಾಜಕೀಯ

ಸಿದ್ದರಾಮಯ್ಯ ವಿರುದ್ಧ ವಿಜಯೇಂದ್ರ ಕಣಕ್ಕೆ; ಸುಳಿವು ನೀಡಿದ ಯಡಿಯೂರಪ್ಪ..!

March 30, 2023
ಹೆಬ್ಬಾಳದಲ್ಲಿ ಗದ್ದುಗೆ ಗುದ್ದಾಟ! ದಿಗ್ಗಜರ ನಡುವಿನ ಗುದ್ದಾಟದಲ್ಲಿ ಯಾರಿಗೆ ಸಿಗುತ್ತೆ ಗದ್ದುಗೆ?
ರಾಜಕೀಯ

ಹೆಬ್ಬಾಳದಲ್ಲಿ ಗದ್ದುಗೆ ಗುದ್ದಾಟ! ದಿಗ್ಗಜರ ನಡುವಿನ ಗುದ್ದಾಟದಲ್ಲಿ ಯಾರಿಗೆ ಸಿಗುತ್ತೆ ಗದ್ದುಗೆ?

March 30, 2023

ವಿಜಯ ಟೈಮ್ಸ್‌ - ಬದಲಾವಣೆಯ ಹಾದಿ

Vijaya Times logo

ವಿಜಯ ಟೈಮ್ಸ್‌

  • ಪ್ರಮುಖ ಸುದ್ದಿ
  • ರಾಜಕೀಯ
  • ದೇಶ-ವಿದೇಶ
  • ಮನರಂಜನೆ
Menu
  • ಪ್ರಮುಖ ಸುದ್ದಿ
  • ರಾಜಕೀಯ
  • ದೇಶ-ವಿದೇಶ
  • ಮನರಂಜನೆ

Quick Links

  • About Us
  • Contact Us
  • For Advertisement
Menu
  • About Us
  • Contact Us
  • For Advertisement

Follow Us

Facebook Twitter Instagram Youtube

Download Vijaya Times App

Android
© 2022 Vijaya Times. All rights reserved.