Bengaluru : ಕರ್ನಾಟಕ(Karnataka) ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷವೂ(Congress Party) ಕೇರಳದಲ್ಲಿ(Kerala) ಆರಂಭಿಸಿರುವ ಭಾರತ್ ಜೋಡೋ ಯಾತ್ರೆಯು(Bharat Jodo Yatre) ಕರ್ನಾಟಕ ರಾಜ್ಯದತ್ತ ತಿರುಗುತ್ತಿದ್ದಂತೆ, ಕಾಂಗ್ರೆಸ್ ಪಕ್ಷ ಹಾಕಿದ್ದ ರಾಹುಲ್ ಗಾಂಧಿ ಪೋಸ್ಟರ್ ಅನ್ನು ವಿರೋಧಿಗಳು ಹರಿದು ಹಾಕಿದ್ದಾರೆ(Siddaramaiah Warns BJP leaders).

ಈ ಘಟನೆ ರಾಜ್ಯ ಕಾಂಗ್ರೆಸ್ ಕಾರ್ಯಕರ್ತರು ಹಾಗೂ ನಾಯಕರ ಕೆಂಗಣ್ಣಿಗೆ ಗುರಿಯಾಯಿತು.
ಈ ಘಟನೆಗೆ ಪ್ರತಿಕ್ರಿಯಿಸಿದ ಮಾಜಿ ಮುಖ್ಯಮಂತ್ರಿ, ಕಾಂಗ್ರೆಸ್ ಹಿರಿಯ ನಾಯಕ ಸಿದ್ದರಾಮಯ್ಯ(Siddaramaiah), ರಾಹುಲ್ ಗಾಂಧಿ ಪೋಸ್ಟರ್ಗಳನ್ನು ಧ್ವಂಸಗೊಳಿಸುತ್ತಿರುವ ಬಿಜೆಪಿ ನಾಯಕರಿಗೆ(BJP Leaders) ಶುಕ್ರವಾರ ಎಚ್ಚರಿಕೆ ನೀಡಿದ್ದಾರೆ.
ಇದನ್ನೂ ಓದಿ : https://vijayatimes.com/health-tips-for-bone-disease/
ಗುಂಡ್ಲುಪೇಟೆ(Gundlupete) ಪ್ರದೇಶದಲ್ಲಿ ಪಕ್ಷದ ಭಾರತ್ ಜೋಡೋ ಯಾತ್ರೆಯನ್ನು ಸ್ವಾಗತಿಸಲು ರಾಹುಲ್ ಗಾಂಧಿ ಮತ್ತು ಕಾಂಗ್ರೆಸ್ ನಾಯಕರ ಪೋಸ್ಟರ್ ಹರಿದ ಒಂದು ದಿನದ ನಂತರ ಈ ವಾಗ್ದಾಳಿ ಹೊರಬಿದ್ದಿದೆ.
ಗುಂಡ್ಲುಪೇಟೆಯಲ್ಲಿ ಹಾದು ಹೋಗುವ ಹೆದ್ದಾರಿಯಲ್ಲಿ ಹಾಕಲಾಗಿದ್ದ ಪೋಸ್ಟರ್ಗಳನ್ನು ಬಿಜೆಪಿ ಕಾರ್ಯಕರ್ತರು ಹರಿದು ಹಾಕಿದ್ದಾರೆ ಎಂದು ಕಾಂಗ್ರೆಸ್ ಮುಖಂಡರು ಆರೋಪಿಸಿದ್ದರು.

ನಮ್ಮ ಪೋಸ್ಟರ್, ಫ್ಲೆಕ್ಸ್ಗಳನ್ನು ಬಿಜೆಪಿಯವರು ಹಾಳು ಮಾಡುತ್ತಿದ್ದಾರೆ ಎಂದು ಸಿದ್ದರಾಮಯ್ಯ ಆರೋಪಿಸಿದ್ದಾರೆ.
ಇದನ್ನು ಮುಂದುವರಿಸಲು ಪ್ರಯತ್ನಿಸಿದರೆ, ಬಿಜೆಪಿ ನಾಯಕರು ಯಾರೂ ಕರ್ನಾಟಕದಲ್ಲಿ ಮುಕ್ತವಾಗಿ ತಿರುಗಾಡುವುದನ್ನು ಮುಂದಿನ ದಿನಗಳಲ್ಲಿ ನೋಡುವುದಿಲ್ಲ, ನಮ್ಮ ಕಾಂಗ್ರೆಸ್ ಕಾರ್ಯಕರ್ತರಿಗೆ ರಾಜ್ಯದಲ್ಲಿ ಆ ರೀತಿಯ ಶಕ್ತಿ ಇದೆ ಎಂದು ನಾನು ಎಚ್ಚರಿಸಲು ಬಯಸುತ್ತೇನೆ(Siddaramaiah Warns BJP leaders).
https://youtu.be/2o9yHWezIEQ ಅಂಗನವಾಡಿ ಕೇಂದ್ರಕ್ಕೆ ಇಲ್ಲ ಶಾಶ್ವತ ಕಟ್ಟಡ
ಗುರುವಾರ ಮತ್ತು ಹಿಂದಿನ ದಿನ ಪೊಲೀಸರೊಂದಿಗೆ ಈ ಬಗ್ಗೆ ಮಾತನಾಡಿದ್ದೇನೆ ಎಂದು ಹೇಳಿದರು. ಬಿಜೆಪಿಗರು ಈ ರೀತಿಯ ಕೆಲಸಗಳನ್ನು ಮಾಡಲು ಪ್ರಯತ್ನಿಸುತ್ತಿದ್ದಾರೆ.
ಇನ್ನು ಆರು ತಿಂಗಳಲ್ಲಿ ಸರ್ಕಾರ ಬದಲಾಗಲಿದೆ ಎಂದು ಪೊಲೀಸ್ ಇಲಾಖೆಗೆ ಹೇಳಲು ಬಯಸುತ್ತೇನೆ.

ಕಾಂಗ್ರೆಸ್ ಮತ್ತೆ ಅಧಿಕಾರಕ್ಕೆ ಬರಲಿದ್ದು, ಪೊಲೀಸರಿಗೂ ಎಚ್ಚರಿಕೆ ನೀಡುತ್ತಿದ್ದೇನೆ ಎಂದು ಸಿದ್ದರಾಮಯ್ಯ ಹೇಳಿದರು.
ಪಕ್ಷದ ಭಾರತ್ ಜೋಡೋ ಯಾತ್ರೆ ಶುಕ್ರವಾರ ಕರ್ನಾಟಕಕ್ಕೆ ಪ್ರವೇಶಿಸಿದ್ದು, ಸಿದ್ದರಾಮಯ್ಯ ಸೇರಿದಂತೆ ಪಕ್ಷದ ನಾಯಕರು ರಾಜ್ಯದ ಗಡಿಯಲ್ಲಿ ರಾಹುಲ್ ಗಾಂಧಿ ಅವರನ್ನು ಸ್ವಾಗತಿಸಿ, ಯಾತ್ರೆಯಲ್ಲಿ ಪಾಲ್ಗೊಂಡರು.