Bengaluru : ಇಂದು ಮುಖ್ಯಮಂತ್ರಿ ಸಿದ್ದರಾಮಯ್ಯ (Siddaramaiah will launch AnnaBhagya) ಅವರ ಮಹತ್ವಾಕಾಂಕ್ಷೆ ಯೋಜನೆ ಆಗಿರುವ ಅನ್ನಭಾಗ್ಯ (Anna Bhagya Scheme)
ಯೋಜನೆಗೆ ದಶಕದ ಸಂಭ್ರಮ. ಫಲಾನುಭವಿಗಳ ಖಾತೆಗೆ 5 ಕೆಜಿ ಅಕ್ಕಿ ಬದಲು 170 ರೂ. ಹಣ ಜಮೆ ಮಾಡುವ ಕಾರ್ಯಕ್ರಮಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ಇಂದು (ಜು.10) ಸಂಜೆ 5 ಗಂಟೆಗೆ ಚಾಲನೆ ನೀಡಲಿದ್ದಾರೆ.
ಈ ಕಾರ್ಯಕ್ರಮವು ವಿಧಾನಸೌಧದ (Vidhana Saudha) ಬ್ಯಾಂಕ್ವೆಟ್ ಹಾಲ್ನಲ್ಲಿ ನಡೆಯಲಿದೆ.

ಪ್ರತಿ ಕೆಜಿಗೆ 34 ರೂ.ನಂತೆ ಒಟ್ಟು 170 ರೂ. ವರ್ಗಾವಣೆ ಮಾಡಲಾಗುತ್ತದೆ. 1.28 ಕೋಟಿ ಕುಟುಂಬಗಳ ಬಳಿ ರಾಜ್ಯದಲ್ಲಿ ಬಿಪಿಎಲ್(BPL) ಕಾರ್ಡ್ ಗಳಿವೆ.ಉಚಿತ ಅಕ್ಕಿಯ ಫಲಾನುಭವಿಗಳು ಸುಮಾರು 4.5 ಕೋಟಿ
ಜನರು ಇದ್ದಾರೆ. ಇವರಿಗೆ ಕೆಜಿಗೆ 34 ರೂಪಾಯಿಯಂತೆ ಹಾಕಲು ಸರ್ಕಾರಕ್ಕೆ 733 ಕೋಟಿ ರೂ ಬೇಕು. ಆಧಾರ್(Adhar Card) ಹಾಗೂ ಬ್ಯಾಂಕ್ ಅಕೌಂಟ್ ಲಿಂಕ್ ಸುಮಾರು 1.22 ಕೋಟಿ ಜನರು ಮಾಡಿಸಿದ್ದಾರೆ.
‘ಅನ್ನಭಾಗ್ಯ’ಕ್ಕೆ ದಶಕದ ಸಂಭ್ರಮ
ಸಿಎಂ ಸಿದ್ದರಾಮಯ್ಯ ಕರ್ನಾಟಕದ 22ನೇ ಮುಖ್ಯಮಂತ್ರಿಯಾಗಿ 2013ರ ಮೇ 13 ರಂದು ಅಧಿಕಾರ ಸ್ವೀಕರಿಸಿದ್ರು. ತಾವು ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿದ ದಿನವೇ ಐತಿಹಾಸಿಕ ಅನ್ನಭಾಗ್ಯ
ಯೋಜನೆಯನ್ನು ಘೋಷಣೆ ಮಾಡಿದ್ದರು. ಅನ್ನಭಾಗ್ಯ ಯೋಜನೆಯನ್ನು ಜುಲೈ(July) ತಿಂಗಳಿನಲ್ಲಿ ಜಾರಿಗೊಳಿಸಿದ್ದರು. ಈ ಅನ್ನಭಾಗ್ಯ ಯೋಜನೆಯ ಬಿಪಿಎಲ್ ಮತ್ತು ಅಂತ್ಯೋದಯ ಕಾರ್ಡ್
(Antyodaya Card) ಹೊಂದಿರುವ ವ್ಯಕ್ತಿ (Siddaramaiah will launch AnnaBhagya) ಫಲಾನುಭವಿಗಳಾಗಿದ್ದಾರೆ.

1.08 ಕೋಟಿ ಕುಟುಂಬಗಳು ಅನ್ನಭಾಗ್ಯ ಯೋಜನೆ ಆರಂಭವಾದಾಗ ಯೋಜನೆಯ ಲಾಭ ಪಡೆದಿದ್ದವು. 2.93 ಲಕ್ಷ ಟನ್ ಆಹಾರ ಧಾನ್ಯ 2013ರಲ್ಲಿ ಪ್ರತಿ ತಿಂಗಳು ಬಿಡುಗಡೆಯಾಗುತ್ತಿತ್ತು. 4,300 ಕೋಟಿ
ರೂಪಾಯಿಗಳನ್ನ 2013ರಲ್ಲಿ ಅನ್ನಭಾಗ್ಯ ಯೋಜನೆಗಾಗಿ ಮೀಸಲಿರಿಸಲಾಗಿತ್ತು. ಅನ್ನಭಾಗ್ಯಕ್ಕಾಗಿ 2013-2014ರ ಸಾಲಿನಲ್ಲಿ 3,050 ಕೋಟಿ ವೆಚ್ಚವಾಗಿತ್ತು.
ಇದನ್ನೂ ಓದಿ : ವಿದ್ಯುತ್ ದರ ಏರಿಕೆ ನಂತರ ಮತ್ತೊಂದು ಶಾಕ್ ! ನೀರಿನ ದರ ಶೇ.12-15 ಏರಿಸಲು ಜಲಮಂಡಳಿ ಚಿಂತನೆ
ಅನ್ನಭಾಗ್ಯ ಯೋಜನೆಯ ಬಗ್ಗೆ ಸಾಕಷ್ಟು ಟೀಕೆಗಳು ಕೇಳಿ ಬಂದವು. ಜನರಿಗೆ ಉಚಿತ ಅಕ್ಕಿ ಕೊಡುವುದರಿಂದ ಜನ ಸೋಮಾರಿಗಳಾಗ್ತಾರೆ. ದುಡಿಯುವುದನ್ನು ಮರೆತು ಬಿಡ್ತಾರೆ ಅನ್ನೋ ಮಾತುಗಳು ಕೇಳಿಬಂದಿದ್ದವು.
ಆದ್ರೆ ಸಿಎಂ ಸಿದ್ದರಾಮಯ್ಯ ಅವರು ಈ ಯೋಜನೆಯನ್ನು ಬಲವಾಗಿ ಪ್ರತಿಪಾದಿಸಿದ್ದರು, ಈಗಲೂ ಪ್ರತಿಪಾದಿಸುತ್ತಿದ್ದಾರೆ. ಕರುನಾಡಲ್ಲಿ ಯಾರೂ ಹಸಿವಿನಿಂದ ಬಳಲಬಾರದು. ಪ್ರತಿಯೊಬ್ಬರು ಹಸಿವಿನಿಂದ ಮುಕ್ತರಾಗಬೇಕು
ಅನ್ನೋದನ್ನು ಸಿದ್ದರಾಮಯ್ಯ ಈ ಯೋಜನೆಯ ಮಹತ್ವವನ್ನು ಸಾರುತ್ತಲೇ ಇದ್ದಾರೆ.
ರಶ್ಮಿತಾ ಅನೀಶ್