Bengaluru: ಉಪ ಚುನಾವಣೆಯ (By-election) ಗೆಲುವಿನ ಬೆನ್ನಲ್ಲೇ ಡಿಸೆಂಬರ್ 5ರಂದು ಹಾಸನದಲ್ಲಿ (Hassan) ನಡೆಯಬೇಕಿದ್ದ ಮುಖ್ಯಮಂತ್ರಿ ಸಿದ್ದರಾಮಯ್ಯರ (Chief Minister Siddaramaiah) ಸ್ವಾಭಿಮಾನಿ ಸಮಾವೇಶದ ದಿಕ್ಕು ದೆಸೆಯೇ ಬದಲಾಗಿದೆ. ‘ಸಿದ್ದರಾಮೋತ್ಸವ 2.0’ (‘Siddharamotsava 2.0’) ಎಂದೇ ಆರಂಭವಾಗಿದ್ದ ಈ ಸಮಾವೇಶ ಮುಖ್ಯಮಂತ್ರಿಗಳ ಪವರ್ ಶೋ ಎಂದೇ ಬಿಂಬಿತವಾಗುತ್ತಿತ್ತು. ಸಿದ್ದರಾಮಯ್ಯ ಬಣದ ಸಚಿವರೇ ಮುಂದೆ ನಿಂತು ಈ ಕಾರ್ಯಕ್ರಮದ ಪೂರ್ವಸಿದ್ಧತೆಗಳನ್ನು ಮಾಡುತ್ತಿದ್ದರು. ಆದರೆ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆಗೆ (AICC President Mallikarjuna Kharge) ಬರೆದ ಅನಾಮಧೇಯ ಪತ್ರದ ನಂತರ ಎಲ್ಲ ಬದಲಾಯಿತು. ನಂತರ ಪಕ್ಷದ ವತಿಯಿಂದಲೇ ಕಾರ್ಯಕ್ರಮ ಮಾಡುವಂತೆ ರಾಹುಲ್ ಗಾಂಧಿ (Rahul Gandhi) ಸೂಚನೆ ನೀಡಿದರು. ಈ ಎಲ್ಲಾ ಬೆಳವಣಿಗೆ ಬಳಿಕ ಇಡೀ ಕಾರ್ಯಕ್ರಮವನ್ನು ಡಿಸಿಎಂ, (DCM) ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಓವರ್ ಟೇಕ್ ಮಾಡಿದ್ದಾರೆ.

ಈ ಮೊದಲು ಹಾಸನದ ಸಿದ್ದರಾಮಯ್ಯರ ಸಮಾವೇಶ 6 ಜಿಲ್ಲೆಗಳನ್ನು ಗುರಿಯಾಗಿಸಿ ಮಾಡಲಾಗುತ್ತಿದೆ ಎನ್ನಲಾಗಿತ್ತು. ಆದರೆ ಈಗ ಡಿಕೆ ಶಿವಕುಮಾರ್ (DK Sivakumar) ಆರು ಜಿಲ್ಲೆಗಳು ಅಲ್ಲ, ಹಾಸನ ಜಿಲ್ಲೆ ಮಾತ್ರ ಕೇಂದ್ರೀಕರಿಸಿ ಸಮಾವೇಶ ಮಾಡುತ್ತಿದ್ದೇವೆ ಎಂದಿದ್ದಾರೆ.ಅಷ್ಟೆ ಅಲ್ಲದೆ ಸಿದ್ದರಾಮಯ್ಯ ಬಣಕ್ಕೆ ಬಿಗ್ ಶಾಕ್ ಕೊಟ್ಟಿರುವ ಕನಕಪುರ ಬಂಡೆ, ಇದು ಪಕ್ಷದ ಸಮಾವೇಶ ಎಂದು ಹೇಳಿದ್ದಾರೆ. ನಿನ್ನೆ ಹಾಸನದಲ್ಲಿ ಖದ್ದು ಸಮಾವೇಶದ ಸ್ಥಳ ಪರಿಶೀಲಿಸಿದ್ದಾರೆ (Checked the location) . ಸ್ವಾಭಿಮಾನಿ ಸಮಾವೇಶ ಎಂದಿದ್ದ ಹೆಸರನ್ನು ಜನಕಲ್ಯಾಣ ಸಮಾವೇಶ ಎಂದು ಬದಲಿಸಲಾಯಿಸಿದ್ದಾರೆ.ಸ್ವಾಭಿಮಾನಿ ಹೆಸರಲ್ಲಿ ಬೃಹತ್ ಶಕ್ತಿಪ್ರದರ್ಶನ ಮೂಲಕ ತಮ್ಮ ವರ್ಚಸ್ಸು ಹೆಚ್ಚಿಸಿಕೊಳ್ಳಲು ಸಜ್ಜಾಗಿದ್ದ ಸಿದ್ದರಾಮಯ್ಯರಿಗೆ ಡಿಕೆ ಶಿವಕುಮಾರ್ ಕೌಂಟರ್ ಕೊಟ್ಟಿದ್ದಾರೆ.
ಹಾಸನಕ್ಕೆ ಬೇಟಿ ನೀಡಿ ತಯಾರಿ ಬಗ್ಗೆ ಪರಿಶೀಲನೆ ನಡೆಸಿದ ಬಳಿಕ ಮಾತನಾಡಿದ ಡಿಕೆ ಶಿವಕುಮಾರ್, ಇದು ಕೇವಲ ಹಾಸನಕ್ಕೆ ಸೀಮಿತವಾದ ಕಾರ್ಯಕ್ರಮ (Program limited to Hassan) . ಇಂತಹ ಕಾರ್ಯಕ್ರಮ ಎಲ್ಲಾ ಕಡೆ ನಡೆಯಲಿದೆ. ವಿಪಕ್ಷಗಳ ನಾಯಕರು (Leaders of Opposition) ನಮ್ಮನ್ನು ಟೀಕೆ ಮಾಡುತ್ತಿದ್ದರು. ಆದರೆ ಟೀಕೆಗಳು ಸಾಯುತ್ತವೆ, ಕೆಲಸಗಳು ಉಳಿಯುತ್ತವೆ ಎಂದು ಜನರು ಉಪ ಚುನಾವಣೆಯಲ್ಲಿ ತೋರಿಸಿಕೊಟ್ಟಿದ್ದಾರೆ. ಬಿಜೆಪಿ (BJP) ಜನರ ಭಾವನೆ ಜೊತೆ ರಾಜಕೀಯ ಮಾಡುತ್ತಿದೆ. ನಾವು ಜನರ ಬದುಕಿನ ಜೊತೆ ರಾಜಕೀಯ ಮಾಡುತ್ತೇವೆ. ಜನರಿಗಾಗಿ ನಮ್ಮ ಸರ್ಕಾರ ಬಂದ ನಂತರ ಹಲವು ಯೋಜನೆ ಜಾರಿ ಮಾಡಲಾಗಿದೆ. ಇದನ್ನು ಜನರಿಗೆ ಹೇಳಬೇಕಾಗಿದೆ ಹಾಗಾಗಿಯೇ ಈ ಸಮಾವೇಶ ನಡೆಸಲಾಗುತ್ತಿದೆ ನುಡಿದಂತೆ ನಡೆದು ಬಂದ ನಮ್ಮ ಕಾರ್ಯಸಾಧನೆಯ ಬಗ್ಗೆ ಜನರಿಗೆ ತಿಳಿಸಬೇಕಿದೆ ಎಂದಿದ್ದಾರೆ.