ಬೆಂಗಳೂರು, ಮಾ. 10: ರಾಮಮಂದಿರ ನಿರ್ಮಾಣ ಹಾಗೂ ರಾಮನ ವಿಚಾರಕ್ಕೆ ಸಂಬಂಧಿಸಿದಂತೆ ಮಾಜಿ ಸಿದ್ದರಾಮಯ್ಯ ಹಾಗೂ ಬಿಜೆಪಿ ನಡುವಿನ ವಾಗ್ವಾದ ಮುಂದುವರೆದಿದೆ.
ರಾಮನನ್ನು ಬಿಜೆಪಿಯವರಿಗೆ ಗುತ್ತಿಗೆ ಕೊಟ್ಟಿಲ್ಲ, ನನ್ನ ಹೆಸರಿನಲ್ಲೇ ರಾಮನಿದ್ದಾನೆ ಎಂದು ವಿಧಾನಸಭೆ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಹೇಳಿಕೆಗೆ ಬಿಜೆಪಿ ತಿರುಗೇಟು ನೀಡಿದೆ.
ಈ ಕುರಿತು ಟ್ವೀಟ್ ಮಾಡಿರುವ ಬಿಜೆಪಿ ರಾಜ್ಯ ಘಟಕ, ಮಾನ್ಯ ಸಿದ್ದರಾಮಯ್ಯನವರೇ ನಿಮ್ಮ ಹೇಳಿಕೆಗಳು ಕಾಂಗ್ರೆಸ್ ಮನಸ್ಥಿತಿಯನ್ನು ಬಿಂಬಿಸುತ್ತದೆ.
ಒಂದು ಕುಟುಂಬ ಸಂಬಂಧವಿಲ್ಲದಿದ್ದರೂ ಗಾಂಧಿ ಹೆಸರನ್ನು
ತನ್ನವರಿಗೆ ಅಂಟಿಸಿಕೊಂಡು ತಾವೇ ಗಾಂಧಿ ಎಂದು ಬಿಂಬಿಸಿದೆ. ಹೆಸರಿನಲ್ಲಿ ಗಾಂಧಿ ಇದ್ದರೂ ಮಾಡಿದ್ದೆಲ್ಲ ಗಾಂಧಿ ತತ್ವಕ್ಕೆ ವಿರುದ್ಧವಾದುದ್ದನ್ನೇ ನಿಮ್ಮದೂ ಅದೇ ರಾಗ ಎಂದು ಟೀಕಿಸಿದೆ.