ರಾಕಿಂಗ್ ಸ್ಟಾರ್ ಯಶ್(Rocking Star Yash) ಅವರ ಕೆಜಿಎಫ್(KGF 2) ಚಾಪ್ಟರ್ 2 ಬಿಡುಗಡೆಯಾಗಿ ಒಂದು ತಿಂಗಳು ಕಳೆದರೂ ಕೂಡ ಸಿನಿಮಾ ಬಾಕ್ಸ್ ಆಫೀಸ್‌ನಲ್ಲಿ ಕುದುರೆಯಂತೆ ಓಡುತ್ತಿದೆ.

ಸದ್ಯ ಕೆಜಿಎಫ್ ಸಿನಿಮಾ ಎಲ್ಲಾ ಚಿತ್ರರಂಗದ ಹಲವು ದಾಖಲೆಗಳನ್ನು ಮುರಿದು ತನ್ನದೇ ಹೊಸ ದಾಖಲೆಯನ್ನು ನಿರ್ಮಿಸಿದೆ. ಈ ಮಧ್ಯೆ ತಮ್ಮ ಸರಣಿ ಎಸ್ಕೇಪ್ ಲೈವ್‌ನ ಬಿಡುಗಡೆಗಾಗಿ ಕಾಯುತ್ತಿರುವ ನಟ(Actor) ಸಿದ್ಧಾರ್ಥ್(Siddarth) ಕೆಜಿಎಫ್ ಸಿನಿಮಾ ಕುರಿತು ಮಾತನಾಡಿದ್ದು, ಪ್ರಾದೇಶಿಕ ಚಲನಚಿತ್ರವನ್ನು ಪ್ಯಾನ್-ಇಂಡಿಯಾ ಎಂದು ಕರೆಯುವುದು ಹೇಗೆ ಗೌರವ ಎಂದು ಪ್ರಶ್ನಿಸಿದರು. ಸ್ಥಳೀಯ ಸುದ್ದಿವಾಹಿನಿಗೆ ಮಾತನಾಡಿದ ಸಿದ್ಧಾರ್ಥ್, ಕೆಜಿಎಫ್
ಅಧ್ಯಾಯ 2 ಅನ್ನು ಕನ್ನಡ ಚಿತ್ರ ಅಥವಾ ಭಾರತೀಯ ಚಿತ್ರ ಎಂದು ಕರೆಯುವುದರಲ್ಲಿ ಅರ್ಥವಿದೆ.
ಅದನ್ನು ಹೊರೆತುಪಡಿಸಿ ಪ್ಯಾನ್ ಇಂಡಿಯಾ ಸಿನಿಮಾ ಎಂದು ಯಾಕೆ ಕರೆಯುತ್ತೀರಿ? ಅದು ನಿಜಕ್ಕೂ ಅಗೌರವ ಎಂದು ಹೇಳಿದರು. ನಿರ್ದೇಶಕ ಶಂಕರ್‌ನಿಂದ ಮಹೇಶ್ ಬಾಬುವರೆಗೆ, ಸೆಲೆಬ್ರಿಟಿಗಳು ಮತ್ತು ಪ್ರೇಕ್ಷಕರು ಕೆಜಿಎಫ್ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಪ್ರಶಾಂತ್ ನೀಲ್ ನಿರ್ದೇಶನದ ಕೆಜಿಎಫ್ 2 ಸಿನಿಮಾ ಕೊರೊನಾವೈರಸ್ ಸಾಂಕ್ರಾಮಿಕ ರೋಗದಿಂದಾಗಿ ಹಲವಾರು ಬಾರಿ ಮುಂದೂಡಲ್ಪಟ್ಟಿತ್ತು. ಕಡೆಯದಾಗಿ ಏಪ್ರಿಲ್ 14 2022 ರಂದು ಚಿತ್ರಮಂದಿರಗಳಲ್ಲಿ ಯಶಸ್ವಿಯಾಗಿ ಬಿಡುಗಡೆಯಾಯಿತು.

ಸಿದ್ಧಾರ್ಥ್, ಕೆಜಿಎಫ್ 2 ಸಿನಿಮಾವನ್ನು ಪ್ಯಾನ್-ಇಂಡಿಯಾ ಎಂಬ ಕರೆಯುವುದು ಅಗೌರವ ಮತ್ತು ತಮಾಷೆಯ ಎಂದು ಅನ್ನಿಸುತ್ತದೆ ಎಂದು ಹೇಳಿದರು. ನನಗೆ ಇದು ತುಂಬಾ ತಮಾಷೆಯಾಗಿದೆ. ನಾನು 15 ವರ್ಷಗಳಿಂದ ಬಹು ಭಾಷೆಗಳಲ್ಲಿ ಕೆಲಸ ಮಾಡಿದ್ದೇನೆ ಮತ್ತು ನಾನು ನನ್ನ ಧ್ವನಿಯಲ್ಲಿ ಡಬ್ ಮಾಡಿದ್ದೇನೆ. ನನಗೆ ಯಾರೂ ಡಬ್ಬಿಂಗ್ ಮಾಡಿಲ್ಲ. ನಾನು ತಮಿಳಿನಲ್ಲಿ ತಮಿಳಿಗನಾಗಿ ಮಾತನಾಡಿದ್ದೇನೆ, ತೆಲುಗು ಚಲನಚಿತ್ರಗಳಲ್ಲಿ ಸ್ಥಳೀಯ ತೆಲುಗು ಹುಡುಗನಾಗಿ ಮತ್ತು ಹಿಂದಿ ಚಲನಚಿತ್ರದಲ್ಲಿ ನಟಿಸಿದ್ದೇನೆ.
ಆದ್ದರಿಂದ ನನಗೆ, ನಾನು ಅವುಗಳನ್ನು ಭಾರತೀಯ ಚಲನಚಿತ್ರಗಳೆಂದು ಕರೆಯಲು ಬಯಸುತ್ತೇನೆ ವಿನಃ ಪ್ಯಾನ್ ಇಂಡಿಯಾ ಸಿನಿಮಾ ಎಂದಲ್ಲ ಎಂದು ಹೇಳಿದ್ದಾರೆ. ಕನ್ನಡದ ಹೆಮ್ಮೆಯ ಸಿನಿಮಾ ಕೆಜಿಎಫ್ 2 ಒಳ್ಳೆಯ ಗೆಲುವು ಸಾಧಿಸಿದೆ. ನಿರ್ದೇಶಕ ಪ್ರಶಾಂತ್ ನೀಲ್ ಹಾಗೂ ಇಡೀ ಚಿತ್ರತಂಡದ ಶ್ರಮಕ್ಕೆ ಮತ್ತು ಸಿನಿಪ್ರೇಕ್ಷಕರ ಮೇಲೆ ಬೀರಿರುವ ಪರಿಣಾಮಕ್ಕೆ ಶ್ಲಾಘನೆ ವ್ಯಕ್ತಪಡಿಸಲೇಬೇಕು ಎಂದು ಹೇಳಿದ್ದಾರೆ.