ಸಿದ್ದರಾಮಯ್ಯ ವಿರುದ್ಧ ಹಳ್ಳಿಹಕ್ಕಿ ಕಿಡಿ: ಕುರುಬ ಸಮುದಾಯದಿಂದ ಬಹಿಷ್ಕರಿಸುವ ಎಚ್ಚರಿಕೆ

ಮೈಸೂರು, ಜ. 20: ಕುರುಬರ ಹೋರಾಟಕ್ಕೆ ಆರ್.ಎಸ್.ಎಸ್. ಫಂಡ್ ನೀಡಲಾಗಿದೆ ಎಂಬ ಮಾಜಿ ಸಿಎಂ ಸಿದ್ದರಾಮಯ್ಯ ಹೇಳಿಕೆಗೆ ತಿರುಗೇಟು ನೀಡಿರುವ ಬಿಜೆಪಿ ಎಂಎಲ್ಸಿ ಎಚ್. ವಿಶ್ವನಾಥ್, ಸಮುದಾಯದ ಸ್ವಾಮೀಜಿ ವಿರುದ್ಧ ನೀಡಿರುವ ಹೇಳಿಯನ್ನು ಹಿಂಪಡೆಯಬೇಕು
ಇಲ್ಲವಾದರೆ ಸಮಾಜದಿಂದ ಬಹಿಷ್ಕಾರ ಹಾಕಬೇಕಾಗುತ್ತದೆ ಎಂದು ಎಚ್ಚರಿಸಿದ್ದಾರೆ.

ಮೈಸೂರಿನಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಬಿಳಿ ಬಟ್ಟೆ ಹಾಕಿರೊ ಸಿದ್ದರಾಮಯ್ಯಗೆ ಜನರ ಕಷ್ಟ ಸುಖಗಳು ಅರ್ಥ ಆಗುತ್ತಿಲ್ವಾ?.
ಇಡೀ ಸಮುದಾಯವನ್ನು ಅವಮಾನ ಮಾಡುತ್ತಿದ್ದೀರಾ,
ಮಠ ಕಟ್ಟಲು ಭಿಕ್ಷೆ ಎತ್ತಿದ್ದೆವೆ.

ನಿಮ್ಮಿಂದ ಈ ಮಠಕ್ಕೆ 10. ಪೈಸೆ ಇದ್ಯಾ ಬಹಳ ಲಘವಾಗಿ ಮಠವನ್ನ ಸಮಾಜವನ್ನು, ಸ್ವಾಮಿಗಳ ಬಗ್ಗೆ ಮಾತಾಡೋದು ಶೋಭೆ ತರುವಂತದಲ್ಲ. ಜನರನ್ನ ದಿಕ್ಕುತಪ್ಪಿಸಬೇಡಿ, ಸಮುದಾಯದ ಋಣ ನಿಮ್ಮ ಮೇಲಿದೆ. ಸಮಾಜದಿಂದಲೇ ನೀವು ಇಷ್ಟೆಲ್ಲ ಆಗಿದ್ದು. ಉತ್ತರ ಕರ್ನಾಟಕದ ಕುರುಬರ ಕಷ್ಟ ನಿಮಗೆ ಅರ್ಥವಾಗುತ್ತಿಲ್ಲ ಎಂದು ಟೀಕಿಸಿದರು.

ಬಿಳಿ ಬೆಟ್ಟ ಹಾಕೀರೋ ಸಿದ್ದರಾಮಯ್ಯ ಗೆ ಇದು ಅರ್ಥ ಆಗಲ್ಲ. ನೀವು ಮುಖ್ಯಮಂತ್ರಿ ಆಗಬೇಕಾದರೆ ನಮ್ಮ ಸಮಾಜ ಕಾರಣ. ನಿಮಗೆ ಇಷ್ಟ ಇದ್ರೆ ಹೋರಾಟಕ್ಕೆ ಬನ್ನಿ. ಜನರನ್ನ ದಿಕ್ಕು ತಪ್ಪಿಸಬೇಡಿ. ಸಿದ್ದರಾಮಯ್ಯ ತಮ್ಮ ಇಬ್ಬಂದಿತನವನ್ನು ನಿಲ್ಲಿಸಬೇಕು. ಸಿದ್ದರಾಮಯ್ಯ ಅವರಿಗೆ ಬಹುಪರಾಕ್ ಹೇಳುವವರು ಬೇಕು. ಏಕಮಯ ದ್ವಿತೀಯ ಬಹುಪಾರಕ್ ಹೇಳಬೇಕು ಅವರಿಗೆ. ಹೀಗಾಗಿ ಸ್ವಾಮೀಜಿ ವಿರುದ್ಧದ ಹೇಳಿಕೆಯನ್ನು ವಾಪಸ್ಸು ಪಡೆಯಬೇಕು. ಇಲ್ಲವಾದರೆ ಸಮಾಜದಿಂದ ಬಹಿಷ್ಕಾರ ಹಾಕಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು.

ನಿಮ್ಮ ಮಾತಿನಿಂದ ಸ್ವಾಮೀಜಿ ಸಾಕಷ್ಟು ಬೇಸರಗೊಂಡಿದ್ದು, ಕುಗ್ಗಿ ಹೋಗಿದ್ದಾರೆ.‌ ಕುಲಶಾಸ್ತ್ರ ಅಧ್ಯಯನ ಮಾಡಬೇಕು ಸಿದ್ದರಾಮಯ್ಯ ಹೇಳಿಕೆ ವಿಚಾರ ಸಿದ್ದರಾಮಯ್ಯ ನೀನೊಬ್ಬನೆ ಬುದ್ದಿವಂತ ಅಲ್ಲ. ನಮಗೂ ಅದು ಗೊತ್ತಿದೆ, ನೀನು ಹೋರಾಟಕ್ಕೆ ಬರುವುದಾದರೆ ಬಾ, ಇಲ್ಲ ಬಿಡು, ಈ ರೀತಿ ದಾರಿ ತಪ್ಪಿಸುವ ಕೆಲಸ ಮಾಡಬೇಡ ಎಂದು ಏಕವಚನದಲ್ಲಿ ಕಿಡಿಕಾರಿದ ಅವರು, ಇಡೀ ಸಮುದಾಯಕ್ಕೆ ನೀವು ಅವಮಾನ ಮಾಡುತ್ತಿದ್ದೀರಾ.

ಸಿದ್ದರಾಮಯ್ಯ ಆರೋಪಕ್ಕೆ ನನಗೆ ಬಹಳ ನೋವಾಗಿದೆ, ಅವರು ನಮ್ಮ ಸಮುದಾಯದ ಸ್ವಾಮೀಜಿ ಭಕ್ತಿ ಭಾವದಿಂದ ನೋಡುತ್ತಿದ್ದೇವೆ. ಮಠದ ಮೇಲೆ ಇಂತಹ ದೊಡ್ಡ ಆಪಾದನೆ ಸರಿಯಲ್ಲ. ಮಠದ ಧಾರ್ಮಿಕ ಸಂಘಟನೆಯಿಂದಲೇ ಅವರು ಸಿಎಂ ಆಗಿದ್ದು, ನಿಮಗೆ ಮಠನೂ ಗೊತ್ತಿಲ್ಲ ಸ್ವಾಮೀಜಿನೂ ಗೊತ್ತಿಲ್ಲ.

ಮಠದ ಬಗ್ಗೆ ನಿಮಗೆ ಗೌರವ ಇಲ್ಲ, ಸಿದ್ದರಾಮಯ್ಯ ನಮ್ಮ ಸ್ವಾಮಿಗಳ‌ ಮಾನ ಹರಾಜು ಹಾಕುತ್ತಿದ್ದಾರೆ. ಇದು ನಿಮಗೆ ಗೌರವ ತರುತ್ತಾ? ಎಂದು ಪ್ರಶ್ನಿಸಿದರು.

Latest News

ಪ್ರಮುಖ ಸುದ್ದಿ

ತಾಜುದ್ದೀನ್ಜುನೈದೀ ಮತ್ತು  ಶಿವಮೊಗ್ಗ ಸುಬ್ಬಣ್ಣ ನಿಧನಕ್ಕೆ ಗಣ್ಯರ ಸಂತಾಪ

ಪ್ರಖ್ಯಾತ ಗಾಯಕರು, ತಮ್ಮ ಸುಸ್ವರದ ಮೂಲಕ ಕವಿ ಗೀತೆಗಳಿಗೆ ಮೆರುಗು ತಂದುಕೊಟ್ಟಿದ್ದ ಶ್ರೀ ಶಿವಮೊಗ್ಗ ಸುಬ್ಬಣ್ಣ ಅವರ ನಿಧನದ ಸುದ್ದಿ ಕೇಳಿ ಬಹಳ ದುಃಖವಾಗಿದೆ.

ದೇಶ-ವಿದೇಶ

ಒಡಿಶಾದಲ್ಲಿ ಆಘಾತಕಾರಿ ಘಟನೆ ; ಹಾಡಹಗಲೇ ವೃದ್ಧನನ್ನು ಕಂಬಕ್ಕೆ ಕಟ್ಟಿ, ಥಳಿಸಿ ಕೊಂದ ಕುಟುಂಬಸ್ಥರು!

ಕೊರಾಪುಟ್ ಜಿಲ್ಲೆಯ ಬುಡಕಟ್ಟು ಪ್ರದೇಶದಲ್ಲಿ ಹಾಡಹಗಲೇ ವೃದ್ಧನನ್ನು ವಿದ್ಯುತ್ ಕಂಬಕ್ಕೆ ಕಟ್ಟಿ ತಮ್ಮ ಕುಟುಂಬಸ್ಥರೇ ಥಳಿಸಿ ಕೊಂದಿರುವ ಆಘಾತಕಾರಿ ಘಟನೆ ಬೆಳಕಿಗೆ ಬಂದಿದೆ!

ಮಾಹಿತಿ

ಕಿಡ್ನಿ ಸ್ಟೋನ್‌ ಸಮಸ್ಯೆಗೆ ಇಲ್ಲಿದೆ ನೈಸರ್ಗಿಕ ಪರಿಹಾರ ; ಈ ಸರಳ ಪರಿಹಾರ ಪಾಲಿಸಿ

ಕೆಲವು ಮನೆಮದ್ದುಗಳು(Home Remedies) ಆರಂಭಿಕ ಹಂತದ ಕಿಡ್ನಿಸ್ಟೋನ್ ಸಮಸ್ಯೆಗೆ ಪರಿಹಾರ ನೀಡುತ್ತವೆ. ಅಂತಹ ಮನೆಮದ್ದುಗಳ ವಿವರ ಇಲ್ಲಿದೆ ನೋಡಿ.