ಬೆಂಗಳೂರು : ಮಾತುಕತೆ ಮೂಲಕ ಅಂಗನವಾಡಿ ಕಾರ್ಯಕರ್ತೆಯರ ಸಮಸ್ಯೆ ಬಗೆಹರಿಸುವ (siddhu support Anganwadi workers) ಪ್ರಯತ್ನವನ್ನೇ ಮಾಡದೆ,
ಏಕಾಏಕಿ ಪ್ರತಿಭಟನಾನಿರತ ಮೇಲೆ ಬಲಪ್ರಯೋಗ ಮಾಡುವುದು, ಬಂಧಿಸುವುದು ರಾಜ್ಯ ಬಿಜೆಪಿ ಸರ್ಕಾರದ ಧಾರ್ಷ್ಟ್ಯವನ್ನು ತೋರುತ್ತದೆ ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ ಅವರು ಬಿಜೆಪಿ ಸರ್ಕಾರದ ವಿರುದ್ದ ವಾಗ್ದಾಳಿ ನಡೆಸಿದ್ದಾರೆ.

ಈ ಕುರಿತು ಟ್ವೀಟ್ ಮಾಡಿ ವಾಗ್ದಾಳಿ ನಡೆಸಿರುವ ಅವರು, “ಆರುವ ಮೊದಲು ದೀಪ ಜೋರಾಗಿ ಉರಿಯುತ್ತದೆಯಂತೆ, ಬಿಜೆಪಿ ಸರ್ಕಾರವೂ ಹಾಗೆ”. ಕಳೆದ (siddhu support Anganwadi workers) ಮೂರು ದಿನಗಳಿಂದ ಚಳಿ, ಬಿಸಿಲು ಎನ್ನದೆ ಅಂಗನವಾಡಿ ಕಾರ್ಯಕರ್ತೆಯರು ಪ್ರತಿಭಟನೆ ನಡೆಸುತ್ತಿದ್ದಾರೆ,
ಕನಿಷ್ಠ ಪಕ್ಷ ಅವರ ಸಮಸ್ಯೆಯನ್ನು ಆಲಿಸುವ ಸೌಜನ್ಯವಾದರೂ ರಾಜ್ಯ ಬಿಜೆಪಿ ಸರ್ಕಾರಕ್ಕೆ ಬೇಡವೇ? ತಮ್ಮ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಅಂಗನವಾಡಿ ಕಾರ್ಯಕರ್ತೆಯರು ನಡೆಸುತ್ತಿರುವ ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದ ಶಿವಮೊಗ್ಗ ಜಿಲ್ಲೆಯ ನೀಲಮ್ಮ ಅವರ ಸಾವಿಗೆ ರಾಜ್ಯ ಸರ್ಕಾರದ ಹೊಣೆಗೇಡಿತನ ಕಾರಣ.
ಮೃತರ ಕುಟುಂಬಕ್ಕೆ ಕೂಡಲೇ ಸೂಕ್ತ ಪರಿಹಾರ ನೀಡಬೇಕು ಎಂದು ಒತ್ತಾಯಿಸುತ್ತೇನೆ ಎಂದಿದ್ದಾರೆ.

ಇನ್ನು ಕೇಂದ್ರ ಸರ್ಕಾರ ಜಾರಿಗೆ ತಂದಿರುವ ನೂತನ ಶಿಕ್ಷಣ ನೀತಿಯಂತೆ ಅಂಗನವಾಡಿ ಶಿಕ್ಷಕಿಯರ ಕನಿಷ್ಠ ವಿದ್ಯಾರ್ಹತೆಯನ್ನು ಪಿಯುಸಿ ಅಥವಾ ಅದಕ್ಕೆ ತತ್ಸಮಾನ ಎಂದು ನಿಗದಿ ಮಾಡಲಾಗಿದೆ.
ಅದೇ ರೀತಿ ಅಂಗನವಾಡಿ ಸಹಾಯಕಿಯರ ವಿದ್ಯಾರ್ಹತೆಯನ್ನು ಎಸ್ಎಸ್ಎಲ್ಸಿ ಎಂದು ನಿಗದಿ ಮಾಡಲಾಗಿದೆ.
ಅದರಂತೆ ರಾಜ್ಯ ಸರ್ಕಾರ ಅಂಗನವಾಡಿ ಶಿಕ್ಷಕಿ ಮತ್ತು ಸಹಾಯಕಿಯರ ನೇಮಕಾತಿ ಮಾನದಂಡ ಬದಲಾವಣೆ ಮಾಡಿ ಆದೇಶ ಹೊರಡಿಸಿತ್ತು.
ರಾಜ್ಯ ಸರ್ಕಾರದ ಈ ನಿರ್ಧಾರದ ವಿರುದ್ದ ಸಿಡಿದೆದ್ದ ಅಂಗನವಾಡಿ ಸಹಾಯಕಿಯರು, ಸರ್ಕಾರದ ಈ ನೀತಿಯಿಂದ ನಮಗೆ ಅನ್ಯಾಯವಾಗುತ್ತದೆ.
ಈ ನೀತಿಯಿಂದಾಗಿ ಅನೇಕರು ಕೆಲಸ ಕಳೆದುಕೊಳ್ಳುತ್ತಾರೆ, ಇನ್ನು ಕೆಲವರು ಬಡ್ತಿಯನ್ನೇ ಪಡೆಯುವುದಿಲ್ಲ. ಜೀವನಪೂರ್ತಿ ಕೇವಲ ಸಹಾಯಕಿಯರಾಗಿಯೇ ದುಡಿಮೆ ಮಾಡಬೇಕಾಗುತ್ತದೆ. ಅಂಗನವಾಡಿ ಶಿಕ್ಷಕಿಯರಿಗೆ ಪಿಯುಸಿ ವಿದ್ಯಾರ್ಹತೆ ನಿರ್ಧರಿಸಿರುವುದು ಒಳ್ಳೆಯದು.
ಇದನ್ನು ಓದಿ: 18 ವರ್ಷದೊಳಗಿನ ಮಕ್ಕಳಿಗೆ ಕಾಂಡೋಮ್ ಮಾರಾಟ ನಿಷೇಧ