ದೆಹಲಿ, ಪಂಜಾಬ್, ಹರಿಯಾಣ, ಮಹಾರಾಷ್ಟ್ರ ಪೊಲೀಸ್(Police) ಮತ್ತು ರಾಜಸ್ಥಾನದಾದ್ಯಂತ ಪಂಜಾಬಿ ಗಾಯಕ(Punjabi Singer), ರಾಜಕಾರಣಿ ಸಿಧು ಮೂಸ್ ವಾಲಾ(Sidhu Moose wala killers showing off).
ಹಂತಕರನ್ನು ಪೊಲೀಸರು ಹುಡುಕುತ್ತಿರುವಾಗ(Sidhu Moose wala killers showing off), ಹಂತಕರು ತಮ್ಮ ಆಮದು(Import) ಮಾಡಿಕೊಂಡ ಬಂದೂಕುಗಳನ್ನು ತೋರಿಸುತ್ತಾ ತಮ್ಮ ಕಾರುಗಳಲ್ಲಿ ನಿರ್ಭಯವಾಗಿ ತಿರುಗಾಡುತ್ತಿರುವ ವೀಡಿಯೋ(Video) ಪೊಲೀಸರಿಗೆ ದೊರಕಿದೆ.

ಮೂಸ್ ವಾಲಾ ಅವರನ್ನು ಹತ್ಯೆಗೈದ ಬಳಿಕ ಹಂತಕರು ತಮ್ಮ ಕಾರಿನಲ್ಲಿ ವೀಡಿಯೊಗಳನ್ನು ಮಾಡಿಕೊಂಡಿರುವುದು ಈಗ ಪೊಲೀಸರಿಗೆ ಲಭಿಸಿದೆ. https://vijayatimes.com/employee-gets-unexpected-salary/
ಸಿಧು ಮೂಸ್ ವಾಲಾ ಅವರ ಹಂತಕರಲ್ಲಿ ಒಬ್ಬನಾದ ಅಂಕಿತ್ ಸಿರ್ಸಾ ಮತ್ತು ಅವನ ಸಹಾಯಕ ಸಚಿನ್ ಭಿವಾನಿಯನ್ನು ಬಂಧಿಸಿದ ಕೆಲವೇ ಗಂಟೆಗಳ ನಂತರ ಈ ವೀಡಿಯೋ ಹೊರಬಿದ್ದಿದೆ.
ಮೇ 29 ರಂದು ಮೂಸ್ ವಾಲಾ ಅವರನ್ನು ಗುಂಡಿಕ್ಕಿ ಕೊಂದ ಅಂಕಿತ್, ಪ್ರಿಯವ್ರತ್, ಸಚಿನ್, ಕಪಿಲ್ ಮತ್ತು ದೀಪಕ್ ಮುಂಡಿ ತಮ್ಮ ಕಾರಿನಲ್ಲಿ ಪಂಜಾಬಿ ಹಾಡುಗಳನ್ನು ಕೇಳುತ್ತ, ಗನ್ ಹಿಡಿದು ವೀಡಿಯೊಗಳನ್ನು ಮಾಡಿದ್ದಾರೆ.
ತಮ್ಮ ಬಂದೂಕುಗಳನ್ನು ತೋರಿಸುತ್ತ ಶೋಕಿ ಮಾಡುತ್ತಿರುವ ವೀಡಿಯೊಗಳು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ. ಸದ್ಯ ದೆಹಲಿ ಪೊಲೀಸ್ ವಿಶೇಷ ದಳವು ಸಚಿನ್, ಅಂಕಿತ್, ಪ್ರಿಯವ್ರತ್ ಮತ್ತು ಕಪಿಲ್ ಅನ್ನು ಇದುವರೆಗೆ ಬಂಧಿಸಿದೆ. ದೀಪಕ್ ಮುಂಡಿ ಪೊಲೀಸರ ಕಣ್ತಪ್ಪಿಸಿ ಪರಾರಿಯಾಗಿದ್ದಾನೆ.
ದೀಪಕ್ಗಾಗಿ ಪೊಲೀಸರು ವಿಶೇಷ ತಂಡದೊಂದಿಗೆ ತಮ್ಮ ಬೇಟೆ ಮುಂದುವರಿಸಿದ್ದಾರೆ. ವಿಶೇಷ ಕೋಶದ ಎನ್ಡಿಆರ್ ತಂಡವು ಲಾರೆನ್ಸ್ ಬಿಷ್ಣೋಯ್-ಗೋಲ್ಡಿ ಬ್ರಾರ್ ಗ್ಯಾಂಗ್ ಮೈತ್ರಿಯ ಇಬ್ಬರು ಮೋಸ್ಟ್ ವಾಂಟೆಡ್ ಕ್ರಿಮಿನಲ್ಗಳಾದ ಅಂಕಿತ್ ಮತ್ತು ಸಚಿನ್ ಭಿವಾನಿ ಅವರನ್ನು ಸೋಮವಾರ ಬಂಧಿಸಿದೆ.

ಸಚಿನ್ ಭಿವಾನಿ ಎಂಬಾತ ಸಿಧು ಮೂಸ್ ವಾಲಾ ಅವರನ್ನು ಹತ್ಯೆ ಮಾಡಿದ ನಾಲ್ವರಿಗೆ ಆಶ್ರಯ ನೀಡಿದ್ದ ಎನ್ನಲಾಗಿದೆ. ಮೇ 29 ರ ಭಾನುವಾರದಂದು ಪಂಜಾಬಿನ ಮಾನ್ಸಾ ಜಿಲ್ಲೆಯ ಜವಾಹರ್ಕೆ ಗ್ರಾಮದಲ್ಲಿ ಪಂಜಾಬಿ ಗಾಯಕ ಸಿಧು ಮೂಸ್ ವಾಲಾ ಅವರನ್ನು ದುಷ್ಕರ್ಮಿಗಳು ಗುಂಡಿಕ್ಕಿ ಕೊಂದರು.