ಹತ್ಯೆಗೀಡಾದ ಖ್ಯಾತ ಪಂಜಾಬಿ ಗಾಯಕ(Punjabi Singer) ಸಿಧು ಮೂಸ್ ವಾಲಾ(Sidhu Moose Wala) ಅವರ ಮರಣೋತ್ತರ ಪರೀಕ್ಷೆಯ(Postmortem Report) ವರದಿಯು ಅವರಿಗೆ ಗುಂಡು ಹಾರಿಸಿದ 15 ನಿಮಿಷಗಳಲ್ಲಿ ಸಾವನ್ನಪ್ಪಿದರು ಮತ್ತು ಗುಂಡಿಟ್ಟ ದುಷ್ಕರ್ಮಿಗಳು ಅವರ ದೇಹಕ್ಕೆ 19 ಗುಂಡುಗಳನ್ನು ಹೊಡೆದಿದ್ದಾರೆ ಎಂದು ವರದಿ ಹೇಳುತ್ತದೆ.
ಸಿಧು ಮೂಸ್ ವಾಲಾ, 28, ಮೇ 29 ರ ಭಾನುವಾರದಂದು ಪಂಜಾಬ್‌ನ(Punjab) ಮಾನ್ಸಾ(Maansa) ಜಿಲ್ಲೆಯಲ್ಲಿ ಗುಂಡೇಟಿಗೆ ಬಲಿಯಾದರು. ಮೂಸ್ ವಾಲಾ ಅವರ ಶವಪರೀಕ್ಷೆಯನ್ನು ನಡೆಸಿದ ನಂತರ, ಐದು ವೈದ್ಯರ ಸಮಿತಿಯು ಅವರ ಸಾವಿಗೆ ಕಾರಣವನ್ನು ಹುಡುಕಿತು. ಸಿಧು ಮೂಸ್ ವಾಲಾ ಅವರ ದೇಹವು ಅವರ ಬಲಭಾಗದಲ್ಲಿ ಗರಿಷ್ಠ ಗುಂಡಿನ ಗಾಯದ ಗುರುತುಗಳನ್ನು ಹೊಂದಿದೆ ಎಂದು ವರದಿಯು ಸ್ಪಷ್ಟಪಡಿಸಿದೆ. ಗುಂಡುಗಳು ಅವರ ಮೂತ್ರಪಿಂಡಗಳು, ಯಕೃತ್ತು, ಶ್ವಾಸಕೋಶಗಳು ಮತ್ತು ಬೆನ್ನುಮೂಳೆಯನ್ನು ದಾಟಿವೆ, ಮತ್ತು ಅವರು ತೀವ್ರವಾಗಿ ಗಾಯಗೊಂಡು ಕೇವಲ15 ನಿಮಿಷಗಳಲ್ಲಿ ಸಾವನ್ನಪ್ಪಿದ್ದಾರೆ.
ಇಡೀ ದೇಹದ ಎಕ್ಸ್ ರೇ ನಡೆಸಲಾಗಿದೆ ಎಂದು ಮರಣೋತ್ತರ ಪರೀಕ್ಷೆ ವರದಿ ತಿಳಿಸಿದೆ. ಪಂಜಾಬ್ ಸರ್ಕಾರವು ಗಾಯಕ-ರಾಜಕಾರಣಿಯ ಭದ್ರತೆಯನ್ನು ಹಿಂತೆಗೆದುಕೊಂಡ ಕೆಲವೇ ದಿನಗಳಲ್ಲಿ ಅಪರಿಚಿತ ಬಂದೂಕುಧಾರಿಗಳು ಮಾನ್ಸಾದ ಜವರಹರ್ಕೆ ಗ್ರಾಮದಲ್ಲಿ ಮೂಸ್ ವಾಲಾಗೆ ಹೊಂಚು ಹಾಕಿ, ಸಂಚು ಹೂಡಿ ಅವರು ಪ್ರಯಾಣಿಸುತ್ತಿದ್ದ ಥಾರ್ ಮೇಲೆ ಗುಂಡು ಹಾರಿಸಿದ್ದಾರೆ. AN-94 ಅಸಾಲ್ಟ್ ರೈಫಲ್ ಸೇರಿದಂತೆ ಕನಿಷ್ಠ ಮೂರು ಶಸ್ತ್ರಾಸ್ತ್ರಗಳನ್ನು ಬಳಸಲಾಗಿದೆ ಮತ್ತು ಮೂವತ್ತು ಖಾಲಿ ಬುಲೆಟ್ ಕೇಸಿಂಗ್‌ಗಳನ್ನು ಸೈಟ್‌ನಿಂದ ವಶಪಡಿಸಿಕೊಳ್ಳಲಾಗಿದೆ.
ಲಾರೆನ್ಸ್ ಬಿಷ್ಣೋಯ್ ಗ್ಯಾಂಗ್‌ನ ಸದಸ್ಯರಾಗಿರುವ ಕೆನಡಾ ಮೂಲದ ದರೋಡೆಕೋರ ಗೋಲ್ಡಿ ಬ್ರಾರ್ ಮೂಸ್ ವಾಲಾ ಅವರ ಹತ್ಯೆಯ ಹೊಣೆಯನ್ನು ಹೊತ್ತುಕೊಂಡಿದ್ದಾನೆ. ಕಳೆದ ವರ್ಷ ನಡೆದ ಅಕಾಲಿ ನಾಯಕ ವಿಕ್ಕಿ ಮಿದ್ದುಖೇರಾ ಹತ್ಯೆಗೆ ಪ್ರತೀಕಾರವಾಗಿ ಗಾಯಕನ ಹತ್ಯೆ ನಡೆದಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಪಂಜಾಬ್ ಮುಖ್ಯಮಂತ್ರಿ ಭಗವಂತ್ ಮಾನ್ ಘಟನೆಯ ತನಿಖೆಗಾಗಿ ಹಾಲಿ ಹೈಕೋರ್ಟ್ ನ್ಯಾಯಾಧೀಶರ ನೇತೃತ್ವದಲ್ಲಿ ನ್ಯಾಯಾಂಗ ಆಯೋಗವನ್ನು ಸ್ಥಾಪಿಸುವುದಾಗಿ ಈ ಹಿಂದೆ ಘೋಷಿಸಿದ್ದರು.
ಮಂಗಳವಾರ ಮೂಸ್ ವಾಲಾ ಅವರ ಹುಟ್ಟೂರಾದ ಮಾನ್ಸಾದ ಮೂಸಾ ಗ್ರಾಮದಲ್ಲಿ ಅಂತ್ಯಕ್ರಿಯೆ ನೆರೆವೇರಿಸಲಾಯಿತು. ವಾಲಾ ಅವರ ಅಂತ್ಯಕ್ರಿಯೆಯ ಮೆರವಣಿಗೆಯಲ್ಲಿ ಜನಸಾಗರ ಹರಿದುಬಂದಿತು. ಗಾಯಕನ ಕುಟುಂಬ ಸದಸ್ಯರು ಅವರಿಗೆ ಕಣ್ಣೀರಿನ ವಿದಾಯ ಹೇಳಿ ಅಂತಿಮ ನಮನ ಸಲ್ಲಿಸಿದರು.