ಸಿಹಿಗೆಣಸು ಯಾರಿಗೆ ತಾನೆ ಇಷ್ಟವಿಲ್ಲ ಹೇಳಿ, ಇದು ತಿನ್ನಲು ತುಂಬಾ ರುಚಿಕರವಾಗಿದೆ ಎಂಬುದು ಎಲ್ಲರಿಗೂ ಗೊತ್ತು. ಇದರಲ್ಲಿರುವ ಆರೋಗ್ಯ ಲಾಭಗಳ ಬಗ್ಗೆ ಹೇಳುವುದಾದರೆ, ಇದು ಎಲ್ಲಾ ಕಾಲಕ್ಕೂ ಪುಷ್ಟಿದಾಯಕ ಆಹಾರವಾಗಿದೆ. ಯಥೇಷ್ಟವಾದ ಪೋಷಕಾಂಶಗಳನ್ನು ಹೊಂದಿದೆ.
ಕಬ್ಬಿಣ, ಕ್ಯಾಲ್ಸಿಯಂ, ಮೆಗ್ನೇಶಿಯಂ, ಝಿಂಕ್, ಸೋಡಿಯಂ ,ಪೊಲಿಕ್ ಆಸಿಡ್ ಮುಂತಾದ ಅಂಶಗಳು ಇರುವುದರಿಂದ ದೇಹದ ಆರೋಗ್ಯಕ್ಕೆ ಅತ್ಯುತ್ತಮ ಆಹಾರವಾಗಿದೆ. ಸಿಹಿಗೆಣಸಲ್ಲಿದೆ ಸಕ್ಕರೆ ಕಾಯಿಲೆಯನ್ನು ನಿಯಂತ್ರಿಸುವ ಗುಣ, ಇದು ಭ್ರೂಣದ ಬೆಳವಣಿಗೆಗೆ ಅತ್ಯುತ್ತಮ ಆಹಾರವಾಗಿದೆ.