• ಹೋಮ್
  • ವಿಜಯ ಟೈಮ್ಸ್‌
    • ಪ್ರಮುಖ ಸುದ್ದಿ
    • ರಾಜ್ಯ
    • ದೇಶ-ವಿದೇಶ
    • ರಾಜಕೀಯ
  • ಕವರ್‌ ಸ್ಟೋರಿ
  • ಲೈಫ್ ಸ್ಟೈಲ್
  • ಆರೋಗ್ಯ
  • ಕ್ರೀಡೆ
  • ಮನರಂಜನೆ
    • ವೈರಲ್ ಸುದ್ದಿ
Menu
  • ಹೋಮ್
  • ವಿಜಯ ಟೈಮ್ಸ್‌
    • ಪ್ರಮುಖ ಸುದ್ದಿ
    • ರಾಜ್ಯ
    • ದೇಶ-ವಿದೇಶ
    • ರಾಜಕೀಯ
  • ಕವರ್‌ ಸ್ಟೋರಿ
  • ಲೈಫ್ ಸ್ಟೈಲ್
  • ಆರೋಗ್ಯ
  • ಕ್ರೀಡೆ
  • ಮನರಂಜನೆ
    • ವೈರಲ್ ಸುದ್ದಿ
Vijaya Times logo
  • ಹೋಮ್
  • ವಿಜಯ ಟೈಮ್ಸ್‌
    • ಪ್ರಮುಖ ಸುದ್ದಿ
    • ರಾಜ್ಯ
    • ದೇಶ-ವಿದೇಶ
    • ರಾಜಕೀಯ
  • ಕವರ್‌ ಸ್ಟೋರಿ
  • ಲೈಫ್ ಸ್ಟೈಲ್
  • ಆರೋಗ್ಯ
  • ಕ್ರೀಡೆ
  • ಮನರಂಜನೆ
    • ವೈರಲ್ ಸುದ್ದಿ
Menu
  • ಹೋಮ್
  • ವಿಜಯ ಟೈಮ್ಸ್‌
    • ಪ್ರಮುಖ ಸುದ್ದಿ
    • ರಾಜ್ಯ
    • ದೇಶ-ವಿದೇಶ
    • ರಾಜಕೀಯ
  • ಕವರ್‌ ಸ್ಟೋರಿ
  • ಲೈಫ್ ಸ್ಟೈಲ್
  • ಆರೋಗ್ಯ
  • ಕ್ರೀಡೆ
  • ಮನರಂಜನೆ
    • ವೈರಲ್ ಸುದ್ದಿ
Visit Channel
Home ಪ್ರಮುಖ ಸುದ್ದಿ

ಸ್ವಾತಂತ್ರ್ಯೋತ್ಸವಕ್ಕೆ ಸಿಲಿಕಾನ್ ಸಿಟಿ ಸಜ್ಜು: ವಿಧಾನಸೌಧದ ಮುಂದೆ ‘ಫ್ರೀಡಂ ಹಬ್ಬ’ಕ್ಕೆ ಭರದ ಸಿದ್ಧತೆ

Teju Srinivas by Teju Srinivas
in ಪ್ರಮುಖ ಸುದ್ದಿ, ಮಾಹಿತಿ, ವಿಜಯ ಟೈಮ್ಸ್‌
ಸ್ವಾತಂತ್ರ್ಯೋತ್ಸವಕ್ಕೆ ಸಿಲಿಕಾನ್ ಸಿಟಿ ಸಜ್ಜು: ವಿಧಾನಸೌಧದ ಮುಂದೆ ‘ಫ್ರೀಡಂ ಹಬ್ಬ’ಕ್ಕೆ ಭರದ ಸಿದ್ಧತೆ
0
SHARES
8
VIEWS
Share on FacebookShare on Twitter

ಸಿಲಿಕಾನ್‌ ಸಿಟಿಯಲ್ಲಿ ಸ್ವಾತಂತ್ರ್ಯೋತ್ಸವದ ಸಂಭ್ರಮ; ‘ಸ್ವಾತಂತ್ರ್ಯ ಹೋರಾಟದ ಇತಿಹಾಸ ಪರಿಚಯಿಸುವ ‘ಫ್ರೀಡಂ ಜರ್ನಿ’ ಜೊತೆಗೆ ಮಕ್ಕಳಿಗೆ ವಿಧಾನಸೌಧ ಪ್ರವಾಸದ ಅವಕಾಶ

  • 18 ಸಾವಿರಕ್ಕೂ ಹೆಚ್ಚು ಮಂದಿ ನೋಂದಣಿ; 3 ಸಾವಿರಕ್ಕೂ ಅಧಿಕ ಸಿಬ್ಬಂದಿಯಿಂದ ಭದ್ರತೆ, 25 ತುಕಡಿಗಳಿಂದ ಪಥಸಂಚಲನ(Silicon City gears up for Independence Day)
  • 120ಕ್ಕೂ ಹೆಚ್ಚು ಮಳಿಗೆಗಳು, ಜನಪದ ನೃತ್ಯ, ಸಂಗೀತ ಕಾರ್ಯಕ್ರಮಗಳೊಂದಿಗೆ ಸಾರ್ವಜನಿಕರಿಗೆ ಭರ್ಜರಿ ಮನರಂಜನೆ

Bengaluru : ದೇಶದ 80ನೇ ಸ್ವಾತಂತ್ರ್ಯೋತ್ಸವದ ಸಂಭ್ರಮಕ್ಕೆ ಸಿಲಿಕಾನ್ ಸಿಟಿ ಬೆಂಗಳೂರು ಸಜ್ಜಾಗಿದೆ. ಆಗಸ್ಟ್‌ 15ರಂದು ವಿಧಾನಸೌಧದ ಮುಂಭಾಗದಲ್ಲಿ ಸಾರ್ವಜನಿಕರಿಗಾಗಿ ಆಯೋಜಿಸಿರುವ (Silicon City gears up for Independence Day)

ಫ್ರೀಡಂ ಹಬ್ಬ’ಕ್ಕೆ (Freedom Festival) ಅಗತ್ಯ ಸಿದ್ಧತೆಗಳನ್ನು ಪೂರ್ಣಗೊಳಿಸಲಾಗಿದೆ ಎಂದು ಗ್ರೇಟರ್‌ ಬೆಂಗಳೂರು ಪ್ರಾಧಿಕಾರದ (GBA) ಮುಖ್ಯ ಆಯುಕ್ತ ಮಹೇಶ್ವರ್‌ ರಾವ್‌ ತಿಳಿಸಿದ್ದಾರೆ.

Silicon City gears up for Independence Day

ಸ್ವಾತಂತ್ರ್ಯ ದಿನಾಚರಣೆಯನ್ನು ಕೇವಲ ಧ್ವಜಾರೋಹಣಕ್ಕೆ ಸೀಮಿತಗೊಳಿಸದೆ, ದೇಶದ ಇತಿಹಾಸ, ಸಂಸ್ಕೃತಿ, ಕಲೆ ಮತ್ತು ವೈವಿಧ್ಯತೆಯನ್ನು ಪರಿಚಯಿಸುವ ರೀತಿಯಲ್ಲಿ ದಿನವಿಡೀ ವಿವಿಧ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ.

ಈಗಾಗಲೇ ಸುಮಾರು 18 ಸಾವಿರಕ್ಕೂ ಹೆಚ್ಚು ಮಂದಿ ಕಾರ್ಯಕ್ರಮದಲ್ಲಿ ಭಾಗವಹಿಸಲು ನೋಂದಣಿ ಮಾಡಿಕೊಂಡಿದ್ದು, ಸಾರ್ವಜನಿಕರಲ್ಲಿ ಹಬ್ಬದ ಬಗ್ಗೆ ಹೆಚ್ಚಿನ ನಿರೀಕ್ಷೆ ಮೂಡಿದೆ.

ವಿಧಾನಸೌಧದ ಮುಂಭಾಗದಲ್ಲಿ ನಡೆಯಲಿರುವ ಈ ಕಾರ್ಯಕ್ರಮಕ್ಕೆ ಸಾವಿರಾರು ಜನರು ಆಗಮಿಸುವ ನಿರೀಕ್ಷೆಯಿದ್ದು, ಅದಕ್ಕೆ ಅನುಗುಣವಾಗಿ ಭದ್ರತೆ, ಸಂಚಾರ, ವೈದ್ಯಕೀಯ ಹಾಗೂ ಸಾರ್ವಜನಿಕ ಸೌಲಭ್ಯಗಳ ವ್ಯವಸ್ಥೆ ಮಾಡಲಾಗಿದೆ.

‘ಫ್ರೀಡಂ ಹಬ್ಬ’ದ ಪ್ರಮುಖ ಆಕರ್ಷಣೆಯಾಗಿ ವರ್ಣರಂಜಿತ ಸ್ವಾತಂತ್ರ್ಯೋತ್ಸವ ಪಥಸಂಚಲನ ನಡೆಯಲಿದೆ. ಸುಮಾರು 25 ತುಕಡಿಗಳು ಹಾಗೂ ವಿವಿಧ ಕಲಾತಂಡಗಳು ಪಥಸಂಚಲನದಲ್ಲಿ ಭಾಗವಹಿಸಲಿವೆ.

ದೇಶದ ವಿವಿಧ ಸಂಸ್ಕೃತಿಗಳು, ಕರ್ನಾಟಕದ ವಿವಿಧ ಪ್ರದೇಶಗಳು ಹಾಗೂ ವಿಭಿನ್ನ ವೃತ್ತಿಗಳನ್ನು ಪ್ರತಿನಿಧಿಸುವ ಕಲಾವಿದರು ಜನಪದ ನೃತ್ಯ, ಸಂಗೀತ ಮತ್ತು ಸಾಂಸ್ಕೃತಿಕ ಪ್ರದರ್ಶನಗಳ ಮೂಲಕ ಕಾರ್ಯಕ್ರಮಕ್ಕೆ ಮೆರುಗು ನೀಡಲಿದ್ದಾರೆ. (Silicon City gears up for Independence Day)

ಮಕ್ಕಳಿಗಾಗಿ ವಿಶೇಷ ‘ಮಕ್ಕಳ ಮೇಳ’ವನ್ನು ಆಯೋಜಿಸಲಾಗಿದ್ದು, ಸ್ವಾತಂತ್ರ್ಯ ಹೋರಾಟದ ಕುರಿತು ಮಕ್ಕಳಲ್ಲಿ ಅರಿವು ಮೂಡಿಸುವ ಜತೆಗೆ ಕಲಿಕೆಯನ್ನು ಮನರಂಜನೆಯೊಂದಿಗೆ ಬೆಸೆಯುವ ಪ್ರಯತ್ನ ಮಾಡಲಾಗಿದೆ.

ಇದರೊಂದಿಗೆ ಮಕ್ಕಳಿಗೆ ವಿಧಾನಸೌಧದ ಒಳಾಂಗಣವನ್ನು ಪರಿಚಯಿಸುವ ಉದ್ದೇಶದಿಂದ ಮಾರ್ಗದರ್ಶಿತ ಪ್ರವಾಸಕ್ಕೂ ಅವಕಾಶ ಕಲ್ಪಿಸಲಾಗಿದೆ.

20ರಿಂದ 25 ಮಕ್ಕಳ ಗುಂಪುಗಳಿಗೆ ತಲಾ 15 ನಿಮಿಷಗಳ ಕಾಲ ವಿಧಾನಸೌಧ ವೀಕ್ಷಣೆಗೆ ಅವಕಾಶ ನೀಡಲಾಗುತ್ತದೆ.

ಕನ್ನಡ ಸೇರಿದಂತೆ ವಿವಿಧ ಭಾರತೀಯ ಭಾಷೆಗಳಲ್ಲಿ ಸಂಗೀತ ಕಾರ್ಯಕ್ರಮಗಳು ನಡೆಯಲಿದ್ದು, ಸಂಜೆ ನಡೆಯುವ ಕಾರ್ಯಕ್ರಮವು ಸಾರ್ವಜನಿಕರ ಸಾಮೂಹಿಕ ಗಾಯನದೊಂದಿಗೆ ಅಂತ್ಯಗೊಳ್ಳಲಿದೆ.

ಹಬ್ಬದ ಮತ್ತೊಂದು ವಿಶೇಷ ಆಕರ್ಷಣೆಯಾಗಿ ‘ಫ್ರೀಡಂ ಜರ್ನಿ’ ಆಯೋಜಿಸಲಾಗಿದೆ. ಭಾರತದ ಸ್ವಾತಂತ್ರ್ಯ ಹೋರಾಟದ ವಿವಿಧ ಹಂತಗಳನ್ನು ಪರಿಚಯಿಸುವ

ಒಂಬತ್ತು ವಿಭಾಗಗಳ ಈ ಪ್ರದರ್ಶನವು ಜನರಿಗೆ ದೇಶದ ಸ್ವಾತಂತ್ರ್ಯ ಹೋರಾಟದ ಇತಿಹಾಸವನ್ನು ದೃಶ್ಯರೂಪದಲ್ಲಿ ತಿಳಿಸಲಿದೆ.

ಮಹಾತ್ಮ ಗಾಂಧಿ ಪ್ರತಿಮೆ ಬಳಿ ‘ವಾಕಿಂಗ್ ಮ್ಯೂಸಿಯಂ–ಇಂಡಿಯಾಸ್ ಫ್ರೀಡಂ ಜರ್ನಿ’ (‘Walking Museum – India’s Freedom Journey’) ವೀಕ್ಷಿಸಲು ಅವಕಾಶವಿರಲಿದೆ. ಇದರ ಜತೆಗೆ ಅಂಬೇಡ್ಕರ್‌ ವೀಧಿಯಲ್ಲಿ 120ಕ್ಕೂ ಹೆಚ್ಚು ಮಳಿಗೆಗಳನ್ನು ತೆರೆಯಲಾಗುತ್ತದೆ.

ಜೀವನಶೈಲಿ ಉತ್ಪನ್ನಗಳು, ಕರಕುಶಲ ವಸ್ತುಗಳು, ಸಾವಯವ ಉಡುಪುಗಳು, ಆಟಿಕೆಗಳು, ಜವಳಿ ಹಾಗೂ ವಿವಿಧ ಆಹಾರ ಉತ್ಪನ್ನಗಳು ಇಲ್ಲಿ ಲಭ್ಯವಿರಲಿವೆ.

ಈ ಮಳಿಗೆಗಳು ದಿನವಿಡೀ ತೆರೆದಿರಲಿದ್ದು, ಹಬ್ಬಕ್ಕೆ ಆಗಮಿಸುವ ಸಾರ್ವಜನಿಕರಿಗೆ ಸಾಂಸ್ಕೃತಿಕ ಕಾರ್ಯಕ್ರಮಗಳ ಜತೆಗೆ ಸ್ಥಳೀಯ ಉತ್ಪನ್ನಗಳು ಮತ್ತು ಆಹಾರಗಳನ್ನು ಆಸ್ವಾದಿಸುವ ಅವಕಾಶವೂ ಸಿಗಲಿದೆ.

ಕಾರ್ಯಕ್ರಮಕ್ಕೆ ಭದ್ರತೆ ಅತ್ಯಂತ ಪ್ರಮುಖವಾಗಿರುವ ಹಿನ್ನೆಲೆಯಲ್ಲಿ ವ್ಯಾಪಕ ಪೊಲೀಸ್‌ ಬಂದೋಬಸ್ತ್‌ ಮಾಡಲಾಗಿದೆ.

ಈಗಾಗಲೇ ಸುಮಾರು 18 ಸಾವಿರ ಮಂದಿ ನೋಂದಣಿ ಮಾಡಿಕೊಂಡಿದ್ದು, ನೋಂದಣಿ ಮಾಡಿದವರಿಗೆ ಮಾತ್ರ ಕಾರ್ಯಕ್ರಮಕ್ಕೆ ಪ್ರವೇಶ ಕಲ್ಪಿಸಲಾಗುತ್ತದೆ.

ಕ್ಯೂಆರ್‌ ಕೋಡ್‌ (QR Code) ಆಧಾರಿತ ಪ್ರವೇಶ ವ್ಯವಸ್ಥೆ ಜಾರಿಯಲ್ಲಿದ್ದು, ಒಂದು ಕ್ಯೂಆರ್‌ ಕೋಡ್‌ನಿಂದ ಒಬ್ಬರಿಗೆ ಮಾತ್ರ ಪ್ರವೇಶ ನೀಡಲಾಗುತ್ತದೆ.

ಯಾವುದೇ ಅಹಿತಕರ ಘಟನೆ ನಡೆಯದಂತೆ ಸಿವಿಲ್‌ ಪೊಲೀಸ್‌ (Civil Police) ಹಾಗೂ ಕೆಎಸ್‌ಆರ್‌ಪಿ (KSRP) ಸೇರಿದಂತೆ 3 ಸಾವಿರಕ್ಕೂ ಹೆಚ್ಚು ಸಿಬ್ಬಂದಿಯನ್ನು ನಿಯೋಜಿಸಲಾಗುತ್ತದೆ.

ವಿಧಾನಸೌಧ ಪ್ರವೇಶಿಸುವವರಿಗೆ ಬಣ್ಣದ ಟ್ಯಾಗ್‌ಗಳನ್ನು ನೀಡಲಾಗುತ್ತದೆ.

ಕಾರ್ಯಕ್ರಮದ ದಿನ ಬೆಳಗ್ಗೆ 11 ಗಂಟೆಯಿಂದ ಅಂಬೇಡ್ಕರ್‌ ವೀಧಿಯಲ್ಲಿ ಸಂಚಾರವನ್ನು ಸಂಪೂರ್ಣ ಬಂದ್‌ ಮಾಡಲಾಗುತ್ತದೆ.

ಜಿಪಿಒ ವೃತ್ತ, ಕೆ.ಆರ್‌. ವೃತ್ತ ಹಾಗೂ ಕಬ್ಬನ್‌ ಪಾರ್ಕ್‌ ಹೈಕೋರ್ಟ್‌ ಗೇಟ್‌ ಮಾರ್ಗಗಳನ್ನು ಪ್ರವೇಶ ಮತ್ತು ನಿರ್ಗಮನಕ್ಕೆ ಬಳಸುವಂತೆ ಸೂಚಿಸಲಾಗಿದೆ

. ಒಟ್ಟು 18 ಪ್ರವೇಶ ದ್ವಾರಗಳನ್ನು ನಿರ್ಮಿಸಲಾಗಿದೆ. ವಿಧಾನಸೌಧ ಪ್ರವೇಶಕ್ಕೆ ಮಾನ್ಯ ಗುರುತಿನ ಚೀಟಿ ಕಡ್ಡಾಯವಾಗಿದ್ದು, ಗುರುತಿನ ಚೀಟಿ ಇಲ್ಲದವರಿಗೆ ಪ್ರವೇಶ ಇರುವುದಿಲ್ಲ. 12 ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಕ್ಕಳಿಗೆ ನೋಂದಣಿ ಅಗತ್ಯವಿಲ್ಲ.

ಸಾರ್ವಜನಿಕರ ಅನುಕೂಲಕ್ಕಾಗಿ ಕಾರ್ಯಕ್ರಮದ ಸ್ಥಳದಲ್ಲಿ ಹಲವು ಮೂಲಸೌಕರ್ಯಗಳನ್ನು ಕಲ್ಪಿಸಲಾಗಿದೆ. ಹಿರಿಯ ನಾಗರಿಕರು ಹಾಗೂ ವಿಶೇಷ ಚೇತನರಿಗೆ ವಿಶೇಷ ವ್ಯವಸ್ಥೆ ಮಾಡಲಾಗಿದ್ದು,

ವಿಧಾನಸೌಧದ ಆವರಣದಲ್ಲಿ ಕಾರ್ಯಕ್ರಮ ವೀಕ್ಷಿಸಲು ಎಲ್‌ಇಡಿ ಪರದೆಗಳನ್ನು ಅಳವಡಿಸಲಾಗುತ್ತದೆ. ಒಟ್ಟು 80 ಜೈವಿಕ ಶೌಚಾಲಯಗಳನ್ನು (Bio-toilets) ಸ್ಥಾಪಿಸಲಾಗಿದ್ದು,

30 ವಿಧಾನಸೌಧದ ಒಳಭಾಗದಲ್ಲಿ ಹಾಗೂ 50 ಹೊರಭಾಗದಲ್ಲಿ ಇರಲಿವೆ. ಪ್ರಮುಖ ಸ್ಥಳಗಳಲ್ಲಿ ಕುಡಿಯುವ ನೀರಿನ ಕೇಂದ್ರಗಳನ್ನು ಸ್ಥಾಪಿಸಲಾಗುತ್ತದೆ.

ಜನರಿಗೆ ಅಗತ್ಯ ನೆರವು ನೀಡಲು ‘ಮೇ ಐ ಹೆಲ್ಪ್‌ ಯೂ?’ ಸ್ವಯಂಸೇವಕರು ವಿಶೇಷ ಟಿ-ಶರ್ಟ್‌ ಧರಿಸಿ ಸ್ಥಳದಲ್ಲಿ ಕಾರ್ಯನಿರ್ವಹಿಸಲಿದ್ದಾರೆ.

ಯಾವುದೇ ತುರ್ತು ಪರಿಸ್ಥಿತಿಯನ್ನು ಎದುರಿಸಲು ಅಗ್ನಿಶಾಮಕ ವಾಹನಗಳು, ಪ್ರಥಮ ಚಿಕಿತ್ಸಾ ಕೇಂದ್ರಗಳು, ಆಂಬ್ಯುಲೆನ್ಸ್‌ಗಳು ಹಾಗೂ ಅರೆವೈದ್ಯಕೀಯ ಸಿಬ್ಬಂದಿಯನ್ನು ನಿಯೋಜಿಸಲಾಗಿದೆ. (Silicon City gears up for Independence Day)

ಮಹಿಳೆಯರ ನೆರವಿಗಾಗಿ ರಾಣಿ ಚೆನ್ನಮ್ಮ ಪಡೆ ಸಹಯೋಗದಲ್ಲಿ ವಿಶೇಷ ಸಹಾಯ ಕೇಂದ್ರಗಳನ್ನು ಸ್ಥಾಪಿಸಲಾಗಿದ್ದು, ಸ್ತನ್ಯಪಾನ ಕೊಠಡಿ, ವಿಶ್ರಾಂತಿ ಹಾಗೂ ಸ್ಯಾನಿಟರಿ ವ್ಯವಸ್ಥೆಯನ್ನೂ ಕಲ್ಪಿಸಲಾಗಿದೆ.

ಕಾರ್ಯಕ್ರಮ ಮುಗಿದ ಬಳಿಕ ಸಾರ್ವಜನಿಕರ ಸಂಚಾರ ಸುಗಮಗೊಳಿಸಲು ಹೆಚ್ಚುವರಿ ಮೆಟ್ರೋ ಸೇವೆಗಳು ಮತ್ತು ವಿವಿಧ ಭಾಗಗಳಿಗೆ ಹೆಚ್ಚುವರಿ ಬಸ್‌ಗಳ ವ್ಯವಸ್ಥೆ ಮಾಡಲಾಗುತ್ತಿದೆ

. ಹೀಗಾಗಿ ಈ ಬಾರಿಯ ಸ್ವಾತಂತ್ರ್ಯೋತ್ಸವ ಬೆಂಗಳೂರಿನಲ್ಲಿ ದೇಶಭಕ್ತಿ, ಸಂಸ್ಕೃತಿ, ಮನರಂಜನೆ ಹಾಗೂ ಸಾರ್ವಜನಿಕರ ಪಾಲ್ಗೊಳ್ಳುವಿಕೆಯೊಂದಿಗೆ ವಿಶೇಷವಾಗಿ ಮೂಡಿಬರಲಿದೆ.

ಇದನ್ನು ಓದಿ:https://vijayatimes.com/tunnel-collapses-in-uttarakhand/

Tags: bengalurufreedom habbaKarnataka Police

Related News

ಗೌರಿ-ಗಣೇಶ ಹಬ್ಬಕ್ಕೆ KSRTCಯಿಂದ 2,400 ಹೆಚ್ಚುವರಿ ಬಸ್‌ಗಳ ವ್ಯವಸ್ಥೆ
ಪ್ರಮುಖ ಸುದ್ದಿ

ಗೌರಿ-ಗಣೇಶ ಹಬ್ಬಕ್ಕೆ KSRTCಯಿಂದ 2,400 ಹೆಚ್ಚುವರಿ ಬಸ್‌ಗಳ ವ್ಯವಸ್ಥೆ

September 12, 2026
ಬೆಂಗಳೂರಿನಲ್ಲಿ ಬಾಲಕಾರ್ಮಿಕ ಪದ್ಧತಿ ಇನ್ನೂ ಜೀವಂತ: ಸ್ಪೆಷಲ್ ಡ್ರೈವ್‌ನಲ್ಲಿ 17 ಬಾಲಕರ ರಕ್ಷಣೆ
ಪ್ರಮುಖ ಸುದ್ದಿ

ಬೆಂಗಳೂರಿನಲ್ಲಿ ಬಾಲಕಾರ್ಮಿಕ ಪದ್ಧತಿ ಇನ್ನೂ ಜೀವಂತ: ಸ್ಪೆಷಲ್ ಡ್ರೈವ್‌ನಲ್ಲಿ 17 ಬಾಲಕರ ರಕ್ಷಣೆ

September 12, 2026
80ರ ದಶಕದ ಫೋಟೊಗಳಿಗೆ ಮಾರು ಹೋಗುವ ಮುನ್ನ ಎಚ್ಚರ:ಟ್ರೆಂಡ್ ಹಿಂದೆ ಅಡಗಿದೆ ಸೈಬರ್ ಅಪಾಯ!
ಪ್ರಮುಖ ಸುದ್ದಿ

80ರ ದಶಕದ ಫೋಟೊಗಳಿಗೆ ಮಾರು ಹೋಗುವ ಮುನ್ನ ಎಚ್ಚರ:ಟ್ರೆಂಡ್ ಹಿಂದೆ ಅಡಗಿದೆ ಸೈಬರ್ ಅಪಾಯ!

September 12, 2026
ಬೆಂಗಳೂರಿನ ರಸ್ತೆ ಗುಂಡಿಗಳಿಗೆ ಜೆಟ್ ಪ್ಯಾಚರ್ ಟ್ರೀಟ್‌ಮೆಂಟ್: ₹2 ಕೋಟಿ ಯಂತ್ರದ ಪ್ರಾಯೋಗಿಕ ಕಾರ್ಯಾಚರಣೆ
ಪ್ರಮುಖ ಸುದ್ದಿ

ಬೆಂಗಳೂರಿನ ರಸ್ತೆ ಗುಂಡಿಗಳಿಗೆ ಜೆಟ್ ಪ್ಯಾಚರ್ ಟ್ರೀಟ್‌ಮೆಂಟ್: ₹2 ಕೋಟಿ ಯಂತ್ರದ ಪ್ರಾಯೋಗಿಕ ಕಾರ್ಯಾಚರಣೆ

September 12, 2026

ವಿಜಯ ಟೈಮ್ಸ್‌ - ಬದಲಾವಣೆಯ ಹಾದಿ

Vijaya Times logo

ವಿಜಯ ಟೈಮ್ಸ್‌

  • ಪ್ರಮುಖ ಸುದ್ದಿ
  • ರಾಜಕೀಯ
  • ದೇಶ-ವಿದೇಶ
  • ಮನರಂಜನೆ
  • ಪ್ರಮುಖ ಸುದ್ದಿ
  • ರಾಜಕೀಯ
  • ದೇಶ-ವಿದೇಶ
  • ಮನರಂಜನೆ

Quick Links

  • About Us
  • Contact Us
  • For Advertisement
  • Privacy policy
  • About Us
  • Contact Us
  • For Advertisement
  • Privacy policy

Follow Us

Facebook Twitter Instagram Youtube

Download Vijaya Times App

Android
© 2022 Vijaya Times. All rights reserved.
No Result
View All Result
  • ಹೋಮ್
  • ವಿಜಯ ಟೈಮ್ಸ್‌
    • ಪ್ರಮುಖ ಸುದ್ದಿ
    • ರಾಜ್ಯ
    • ದೇಶ-ವಿದೇಶ
    • ರಾಜಕೀಯ
  • ಕವರ್‌ ಸ್ಟೋರಿ
  • ಲೈಫ್ ಸ್ಟೈಲ್
  • ಆರೋಗ್ಯ
  • ಕ್ರೀಡೆ
  • ಮನರಂಜನೆ
    • ವೈರಲ್ ಸುದ್ದಿ

© 2022 Vijaya Times. All Rights Reserved.