Health Tips : ದೈಹಿಕ ಆರೋಗ್ಯ(Physical Health) ಉತ್ತಮವಾಗಿರಲು ಮಾನಸಿಕ ಆರೋಗ್ಯವು ಅತಿಮುಖ್ಯ ಪಾತ್ರ ವಹಿಸುತ್ತದೆ. ಆದರೆ ನಾವು ಮಾನಸಿಕ ಆರೋಗ್ಯಕ್ಕೆ(Mental Health) ಹೆಚ್ಚಿನ ಒತ್ತು ನೀಡುತ್ತಿಲ್ಲ. ಹೀಗಾಗಿ ಅನೇಕರು ಮಾನಸಿಕ ಆರೋಗ್ಯವನ್ನು ಕಳೆದುಕೊಂಡು, ಅದರಿಂದ ದೈಹಿಕ ಆರೋಗ್ಯವನ್ನು ಕಳೆದುಕೊಳ್ಳುತ್ತಿದ್ದಾರೆ.

ಪ್ರಸಕ್ತ ಕಾಲದಲ್ಲಿ ಬಹುತೇಕ ಜನರ ಮನಸ್ಸು ಪ್ರಸನ್ನತೆಯನ್ನು ಕಳೆದುಕೊಂಡು ಪ್ರಕ್ಷುಬ್ಧವಾಗುತ್ತಿದೆ. ಅಸಮಾಧಾನ, ಅತೃಪ್ತಿ, ನಿರಾಶೆ-ಹತಾಶೆಗಳು ಹೆಚ್ಚುತ್ತಿವೆ. ಮನಶಾಂತಿ-ನೆಮ್ಮದಿ ಕಡಿಮೆಯಾಗುತ್ತಿದೆ. ಇದಕ್ಕೆ ಕಾರಣಗಳೆಂದರೆ :
- ಕೀಳರಿಮೆ-ಒಂಟಿತನಗಳು
- ಉದ್ಯೋಗ ಸಮಸ್ಯೆಗಳು
- ಜೀವನಶೈಲಿ ಒತ್ತಡ ಸಂಬಂಧಿ ರೋಗಗಳು
- ಅತಿಯಾದ ಕೆಲಸದ ಒತ್ತಡ
- ದುಷ್ಚಟ ದುರಭ್ಯಾಸಗಳು
- ಆರ್ಥಿಕ ಸಮಸ್ಯೆಗಳು
- ಕೌಟುಂಬಿಕ ಸಮಸ್ಯೆಗಳು
- ಮಕ್ಕಳ ವಿದ್ಯಾಭ್ಯಾಸ
- ಅತಿಯಾದ ಮಹತ್ವಾಕಾಂಕ್ಷೆ
ಉತ್ತಮ ಮಾನಸಿಕ ಆರೋಗ್ಯಕ್ಕೆ ಕೆಲ ಸೂತ್ರಗಳು :

- ಉತ್ತಮ ಮಾನಸಿಕ ಆರೋಗ್ಯಕ್ಕಾಗಿ ಪ್ರತಿದಿನ ಉತ್ತಮ ಆಹಾರ ಸೇವಿಸುವುದು ಮುಖ್ಯ. ಹಿತ-ಮಿತವಾದ ಶಿಸ್ತಿನ ಆಹಾರ ನಮ್ಮ ಮಾನಸಿಕ ಆರೋಗ್ಯವನ್ನು ಸುಧಾರಿಸುತ್ತದೆ.
- ಮನೆಯವರೊಡನೆ, ನೆರೆಹೊರೆ, ಬಂಧು-ಮಿತ್ರರು, ಸಹಪಾಠಿ- ಸಹೋದ್ಯೋಗಿಗಳೊಡನೆ ಪ್ರೀತಿ-ಸ್ನೇಹ ವಿಶ್ವಾಸದಿಂದಿರಿ.
- ಲಭ್ಯವಿರುವುದರಲ್ಲಿ ತೃಪ್ತಿ ಇರಲಿ ಸರಳ ಜೀವನದಿಂದ ನೆಮ್ಮದಿ.
- ನಿತ್ಯಜೀವನದಲ್ಲಿ ಶಿಸ್ತು-ಅಚ್ಚುಕಟ್ಟುತನವನ್ನು ರೂಢಿಸಿಕೊಳ್ಳಿ. ಪ್ರತಿಯೊಂದು ಕೆಲಸ, ಚಟುವಟಿಕೆಯನ್ನು ಯೋಜನೆ ಮಾಡಿ.
- ಅತಿಯಾದ ಭೋಗ-ಭಾಗ್ಯ ಆಡಂಬರ-ಪ್ರತಿಷ್ಠೆಗಳು ಸುಖಕ್ಕಿಂತ ದುಃಖವನ್ನು ತರುತ್ತವೆ.
- ಆಯ್ದುಕೊಂಡ ಉದ್ಯೋಗವನ್ನು ಪ್ರೀತಿಯಿಂದ ಮಾಡಿ.
ಇದನ್ನೂ ಓದಿ : https://vijayatimes.com/our-party-has-more-democracy/
- ಅನಗತ್ಯ ಸ್ಪರ್ಧೆ ಬೇಡ, ಎಲ್ಲರಿಗಿಂತ ಮೇಲು, ಎಲ್ಲರಿಗಿಂತ ಮುಂದಿರುವ ಅಗತ್ಯವಿಲ್ಲ.
- ನಿತ್ಯ ಶರೀರಕ್ಕೆ ಚಲನೆ ನೀಡುವ ಚಟುವಟಿಕೆಗಳಲ್ಲಿ ತೊಡಗಿಕೊಳ್ಳಿ
- ನಕಾರಾತ್ಮಕ ಘಟನೆಗಳಿಗೆ ಸಕಾರಾತ್ಮಕವಾಗಿ ಸ್ಪಂದಿಸಿ
- ಒಬ್ಬ ಸಂಗಾತಿಯೊಂದಿಗೆ ಮಾತ್ರ ಲೈಂಗಿಕ ಸಂಬಂಧ ವಿರಲಿ. ವಿವಾಹೇತರ ಸಂಬಂಧ ಬೇಡ.
- ಪ್ರತಿದಿನ 6-7 ಗಂಟೆಗಳ ಉತ್ತಮ ನಿದ್ರೆ ಮಾಡಿ. ಮಲಗುವ ಸ್ಥಳದಲ್ಲಿ ಒಳ್ಳೆಯ ಗಾಳ್ಳಿ ಸಂಚಾರ ವಿರಲಿ.
- ನಿಮ್ಮ ಅನುಭವ-ಅನಿಸಿಕೆ ಭಾವನೆಗಳನ್ನು ಆತ್ಮೀಯರಲ್ಲಿ ಹಂಚಿಕೊಳ್ಳಿ.
https://fb.watch/g0SRORpO99/ ರಸ್ತೆ ಮಧ್ಯೆ ತೆಗೆದ ಗುಂಡಿಯನ್ನು ಮುಚ್ಚದ ಅಧಿಕಾರಿಗಳು ; ಸಾರ್ವಜನಿಕರ ಆಕ್ರೋಶ
- ಕಲ್ಪನಾ ಲೋಕದಲ್ಲಿಯೇ ವಿಹರಿಸಬೇಡಿ, ಸಂಪನ್ಮೂಲಗಳ ಇತಿಮಿತಿಯ ಅರಿವಿರಲಿ.
- ಯಾವುದೇ ನೆಪ ಕಾರಣವನ್ನು ಒಡ್ಡಿ ಕೀಳರಿಮೆ ಬೇಡ. ಆದಷ್ಟೂ ಸ್ವಾವಲಂಬಿಯಾಗಿರಿ.
- ನಿತ್ಯ ಆರೋಗ್ಯಕರ ಹವ್ಯಾಸ-ಮನರಂಜನೆಗೆ ಸಮಯ ಮೀಸಲಿಡಿ.
- ಅನಗತ್ಯ ಖರ್ಚುಗಳನ್ನು ಮಾಡಬೇಡಿ. ಆದಾಯ ಖರ್ಚನ್ನು ಬ್ಯಾಲೆನ್ಸ್ ಮಾಡಿ.
- ಮಹೇಶ್.ಪಿ.ಎಚ್