ಆರೋಗ್ಯವೇ ಭಾಗ್ಯ ಎಂಬ ಪ್ರಸಿದ್ಧ ಗಾದೆಯನ್ನು ಕೇಳದವರೇ ಇಲ್ಲ, ಎಷ್ಟೇ ಹೆಚ್ಚಿನ (Simple Tips For Good Health) ಐಶ್ವರ್ಯವಿದ್ದರೂ ಆರೋಗ್ಯವಿಲ್ಲದ ಜೀವನದಲ್ಲಿ ನೆಮ್ಮದಿಯಿಲ್ಲ.
ಉತ್ತಮ ಆರೋಗ್ಯವನ್ನು ಕಾಪಾಡಿಕೊಂಡು ಬರಲು ಬಹಳ ಹಿಂದಿನಿಂದಲೂ ವ್ಯಾಯಾಮ, ಉತ್ತಮ ಆಹಾರ, ಉದ್ವೇಗವಿಲ್ಲದ ಜೀವನ,
ಸಾಕಷ್ಟು ನಿದ್ದೆಗಳ ಅವಶ್ಯಕತೆಯನ್ನು ತಿಳಿಸುತ್ತಾ ಬಂದಿದ್ದರೂ ಆಧುನಿಕ ಜೀವನ (Simple Tips For Good Health) ನಮ್ಮನ್ನು ಉತ್ತಮ ಆರೋಗ್ಯದಿಂದ ಕೊಂಚ ವಿಮುಖವಾಗಿಸಿದೆ.

ಇಂದು ಸುಲಭವಾಗಿ ಎಲ್ಲರ ಕೈಗೆಟಕುವ ಸೌಲಭ್ಯಗಳು ನಮ್ಮನ್ನು ವ್ಯಾಯಾಮದಿಂದ ದೂರವಾಗಿಸಿವೆ. ಸಿದ್ಧ ಆಹಾರಗಳಿಂದ ಉತ್ತಮ ಆರೋಗ್ಯ (Health) ಮರೀಚಿಕೆಯಾಗುತ್ತಿದೆ. ಹಾಗಾಗಿ, ಉತ್ತಮ ಆರೋಗ್ಯವನ್ನು ಉಳಿಸಿಕೊಳ್ಳಲು ಸುಲಭವಾದ ಸಲಹೆಗಳನ್ನು ಈ ಕೆಳಗೆ ನೀಡಲಾಗಿದೆ.
ಸೂರ್ಯೋದಯಕ್ಕೆ ಮುನ್ನ ನಿದ್ದೆಯಿಂದ ಎಚ್ಚರಾಗಿ : ರಾತ್ರಿ ಸುಮಾರು ಹನ್ನೊಂದು ಗಂಟೆಗೆ ಪವಡಿಸಿ ಬೆಳಿಗ್ಗೆ ಸುಮಾರು ಐದರಿಂದ ಆರು ಗಂಟೆಯ ಒಳಗೇ ಎಚ್ಚರಾಗಿ ತಣ್ಣಗಿನ ಹಾಗೂ ತಾಜಾ ಹವೆಯನ್ನು ಸೇವಿಸುವ ಮೂಲಕ ಉತ್ತಮ ಆರೋಗ್ಯ ಪಡೆಯಬಹುದು.
ಎಳೆಯ ಸೂರ್ಯನ ಕಿರಣಗಳು ದೇಹಕ್ಕೆ ಅಗತ್ಯವಾದ ವಿಟಮಿನ್ ಡಿ ನೀಡುತ್ತವೆ. ಬೆಳಗ್ಗಿನ ವಾಯು ವಿಹಾರದಿಂದ ದೇಹದ ಜೀವರಾಸಾಯನಿಕ ಕ್ರಿಯೆ ಉತ್ತಮಗೊಳ್ಳುತ್ತದೆ, ರಕ್ತಪರಿಚಲನೆ ಹೆಚ್ಚಾಗಿ ಆರೋಗ್ಯ ವೃದ್ಧಿಸುತ್ತದೆ.
ಇದನ್ನೂ ಓದಿ : https://vijayatimes.com/judge-to-prajwal-revanna/
ಅಗತ್ಯಕ್ಕಿಂತ ಹೆಚ್ಚಿನ ನಿದ್ರೆ ಬೇಡ : ವಯಸ್ಸಿಗೆ ಹಾಗೂ ಶಾರೀರಿಕ ಮತ್ತು ಮಾನಸಿಕ ಚಟುವಟಿಕೆ ಅನುಸರಿಸಿ ಸುಮಾರು ಆರರಿಂದ ಎಂಟು ಗಂಟೆಗಳ ಕಾಲದ ನಿದ್ರೆ ನಮಗೆ ಅಗತ್ಯ.
ಗಾಢ ನಿದ್ದೆ ಆವರಿಸಿದ ಬಳಿಕ ಎಚ್ಚರಾಗುವವರೆಗಿನ ಅವಧಿ ಎಂದು ಅರ್ಥ. ಸಾಧಾರಣವಾಗಿ ಹೆಚ್ಚಿನವರಿಗೆ, ತಡೆಯಿಲ್ಲದ ಆರು ಘಂಟೆ ಸಾಕು. ಆದರೆ ಹೆಚ್ಚಿನ ಶ್ರಮದಾಯಕ ಹಾಗೂ ಮಾನಸಿಕವಾಗಿ ಒತ್ತಡವಿರುವ ಸಂದರ್ಭಗಳಲ್ಲಿ ಎಂಟು ಘಂಟೆಗಳ ನಿದ್ದೆ ಬೇಕು.
ಆದರೆ ಇದಕ್ಕೂ ಹೆಚ್ಚಿನ ನಿದ್ರೆಯಿಂದ ದೇಹಕ್ಕೆ ಆಲಸಿತನ ಹೆಚ್ಚಿ ಹಲವು ತೊಂದರೆಗಳಿಗೆ ಕಾರಣವಾಗುತ್ತದೆ.
ಎಚ್ಚರಾಗಿರುವಷ್ಟೂ ಹೊತ್ತು ದೇಹದ ಕೊಬ್ಬು ಕರಗುತ್ತಾ ಇರುವುದರಿಂದ ಹೆಚ್ಚುವರಿ ಅವಧಿ ನಿದ್ದೆಯ ಸಮಯದಷ್ಟು ಕೊಬ್ಬು ಕರಗದೇ ಹಾಗೇ ಉಳಿದು ಸ್ಥೂಲಕಾಯಕ್ಕೆ ಕಾರಣವಾಗುತ್ತದೆ.

ಬೆಳಗಿನ ಉಪಾಹಾರವನ್ನು ಎಂದಿಗೂ ತ್ಯಜಿಸಬೇಡಿ : ರಾತ್ರಿಯ ನಿದ್ದೆಯ ಅಷ್ಟೂ ಅವಧಿಯಲ್ಲಿ ದೇಹ ಏನನ್ನೂ ಸೇವಿಸದಿರುವ ಕಾರಣ ಹೊಟ್ಟೆ ಖಾಲಿಯಾಗಿರುತ್ತದೆ.
ಬೆಳಿಗ್ಗೆ ಎದ್ದ ತಕ್ಷಣ ಖಾಲಿಹೊಟ್ಟೆಯಲ್ಲಿ ತಣ್ಣನೆಯ ನೀರು ಕುಡಿದು ಪ್ರಾತಃವಿಧಿಯ ಬಳಿಕ ಅಲ್ಪ ಉಪಾಹಾರ ತೆಗೆದುಕೊಳ್ಳುವ ಮೂಲಕ ಮೆದುಳಿಗೆ ಅಗತ್ಯವಾದ ರಕ್ತ ಸರಬರಾಜು ಪೂರೈಕೆಯಾಗಿ ದಿನವಿಡೀ ಉಲ್ಲಾಸದಿಂದ ಕಳೆಯಲು ಸಾಧ್ಯವಾಗುತ್ತದೆ.
ಒಂದು ವೇಳೆ ಉಪಾಹಾರ ತೆಗೆದುಕೊಳ್ಳದೇ ಇದ್ದರೆ ದೇಹಕ್ಕೆ, ಅದರಲ್ಲೂ ಮುಖ್ಯವಾಗಿ ಮೆದುಳಿಗೆ ಲಭ್ಯವಾಗುವ ರಕ್ತಪರಿಚಲನೆ ಮತ್ತು ಸಕ್ಕರೆಯಂಶ ಕಡಿಮೆಯಾಗಿ ಹಲವು ವಿಧದ ತೊಂದರೆಗಳು ಎದುರಾಗುತ್ತವೆ.
ಜಠರದಲ್ಲಿರುವ ಆಮ್ಲ ಕರಗಲು ಆಹಾರವಿಲ್ಲದೇ ಹೊಟ್ಟೆಯ ಒಳಭಾಗವನ್ನೇ ದಹಿಸಲು ಪ್ರಾರಂಭಿಸುತ್ತದೆ.
ಇದನ್ನೂ ಓದಿ : https://vijayatimes.com/aap-ban-fire-crackers/
ಪರಿಣಾಮವಾಗಿ ಗ್ಯಾಸ್ ತೊಂದರೆ, ಜಠರದ ಸೋಂಕು ಮೊದಲಾದವು ಎದುರಾಗುತ್ತದೆ. ದೇಹದ ಕೊಬ್ಬು ಕರಗಲೂ ರಕ್ತಸಂಚಾರ ಉತ್ತಮಗೊಳ್ಳುವುದು ಅಗತ್ಯ. ಉಪಾಹಾರವಿಲ್ಲದೇ ಕುಂಠಿತವಾಗುವ ರಕ್ತಪರಿಚಲನೆಯಿಂದ ಕೊಬ್ಬು ಕರಗದೇ ಸ್ಥೂಲಕಾಯ ಆವರಿಸಿಕೊಳ್ಳುತ್ತದೆ.
ದೇಹದ ನೈರ್ಮಲ್ಯ ಕಾಪಾಡಿಕೊಳ್ಳಿ : ಸ್ವಚ್ಛವಿಲ್ಲದ ದೇಹ ಹಲವು ರೋಗಗಳ ಗೂಡಾಗುತ್ತದೆ. ಅದರಲ್ಲಿಯೂ ಊಟದ ಮುನ್ನ ಮತ್ತು ನಂತರ ಕೈಗಳನ್ನು ಸೋಪು ಉಪಯೋಗಿಸಿ ತೊಳೆದುಕೊಳ್ಳುವುದು ಉತ್ತಮ.
ಹೆಚ್ಚಿನವರು ಕೈ ತೊಳೆಯುವಾಗ ಉಗುರಿನ ಕೆಳಗಿನ ಭಾಗವನ್ನು ತೊಳೆಯುವುದರಲ್ಲಿ ಸೋಮಾರಿತನ ತೋರುತ್ತಾರೆ, ಆದರೆ ಸಂಪೂರ್ಣ ಹಸ್ತವನ್ನು ಸ್ವಚ್ಛ ಮಾಡಿಕೊಳ್ಳಬೇಕು.

ದಿನಕ್ಕೊಮ್ಮೆ ಸ್ನಾನ, ಶೌಚದ ಬಳಿಕ ಸೋಪು ಉಪಯೋಗಿಸಿ ಪರಿಶುದ್ಧರಾಗುವುದರ ಮೂಲಕ ಉತ್ತಮ ಆರೋಗ್ಯ ಕಾಪಾಡಿಕೊಳ್ಳಬಹುದು. ಪ್ರತಿದಿನ ಶುಚಿಯಾದ ಒಗೆದ ಬಟ್ಟೆಗಳು, ಒಳ ಉಡುಪುಗಳು,
ಕಾಲುಚೀಲಗಳನ್ನೇ ಉಪಯೋಗಿಸಬೇಕು, ಎರಡನೇ ದಿನ ಅವನ್ನೇ ಉಪಯೋಗಿಸಬಾರದು. ಮನೆ, ಆಫೀಸ್‌ನಲ್ಲಿಯೂ ಪರಿಸರ ಶುಚಿಯಾಗಿಟ್ಟುಕೊಂಡು ಕ್ರಿಮಿ ಕೀಟಗಳು ಬಾಧಿಸದಂತೆ ಎಚ್ಚರಿಕೆ ವಹಿಸಬೇಕು.
https://youtu.be/rksTJlv1t1Y ರಸ್ತೆ ಕಾಣದ ಯಲಹಂಕ ಕ್ಷೇತ್ರ!
ಪ್ರತಿ ದಿನ ಟೊಮೇಟೊ ಹಣ್ಣನ್ನು ತಿನ್ನಿ : ಟೊಮೇಟೊ (Tamoto) ಹಣ್ಣಿಗೆ ಕೆಂಪುಬಣ್ಣ ಬರಲು ಲೈಕೋಪಿನ್ ಎಂಬ ಕಿಣ್ವ ಕಾರಣವಾಗಿದೆ. ಕ್ಯಾನ್ಸರ್ (Cancer) ರೋಗದಿಂದ ಈ ಲೈಕೋಪಿನ್ ರಕ್ಷಣೆ ಒದಗಿಸುತ್ತದೆ.
ಪ್ರತಿದಿನ ಒಂದು ಟೊಮೇಟೊ ಹಣ್ಣನ್ನು ಸೇವಿಸುವುದರಿಂದ ಕ್ಯಾನ್ಸರ್, ಹಲವು ಜಠರ ಸಂಬಂಧಿ ರೋಗಗಳು, ಪಿತ್ತಜನಕಾಂಗ ಮತ್ತು ಕರುಳುಗಳಿಗೆ ಸಂಬಂಧಿಸಿದ ರೋಗಗಳಿಂದ ರಕ್ಷಣೆ ಪಡೆಯಬಹುದು.
- ಪವಿತ್ರ