Visit Channel

ಸಿಂಗಾಪೂರ್ ದೇಶದಲ್ಲಿ ನಗ್ನ ಫೋಟೋ, ಅಶ್ಲೀಲ ಚಿತ್ರಗಳನ್ನು ಕಳಿಸುವರಿಗೆ ಎಂಥ ಶಿಕ್ಷೆ ಗೊತ್ತಾ.?

singapore

ಸಾಮಾಜಿಕ ಜಾಲತಾಣದಲ್ಲಿ ತೀರ ಟ್ರೇಡಿಂಗ್ನಲ್ಲಿ ಹೆಸರು ಮಾಡುವಲ್ಲಿ ಇಂದಿನ ಯುವಕ- ಯುವತಿಯರು ದಾಪುಗಲು ಇಟ್ಟಿದ್ದಾರೆ ಎಂಬುದು ಅಶ್ಚರ್ಯಕರ ಸುದ್ದಿಯೇ ಆಗಿದೆ. ಅವರಿಗಿಂತ ನನಗೆ ಹೆಚ್ಚು ಫಾಲೋವರ್ಸ್ ಇರಬೇಕು, ಹೆಚ್ಚು ಟ್ರೆಂಡಿಂಗ್ ಇರಬೇಕು ಎಂಬ ಕಾತುರದಿಂದಲೇ ಆನ್ ಲೈನ್ ನಲ್ಲಿ ಸಕ್ರಿಯರಾಗುವ ಮೂಲಕ ತಮ್ಮದೇ ವಿಭಿನ್ನ ಶೈಲಿಯಲ್ಲಿ ಜನರನ್ನು ಸೆಳೆಯುವ ಮಾಂತ್ರಿಕರು ಇಂದು ಹುಟ್ಟಿಕೊಂಡಿದ್ದಾರೆ. ಸಾಮಾಜಿಕ ಜಾಲತಾಣ ಅಂದಾಗ ಅಲ್ಲಿ ಒಳ್ಳೆಯದನ್ನು ಪೋಸ್ಟ್ ಮಾಡಬಹುದು, ಕೆಟ್ಟದ್ದನ್ನು ಕೂಡ ಪೋಸ್ಟ್ ಮಾಡಬಹುದು. ಈ ಒಂದು ಆಯ್ಕೆ ಆಯಾ ವ್ಯಕ್ತಿಗಳಿಗೆ ಅನ್ವಯವಾಗಿದ್ದು. ಆದರೆ ಇತ್ತೀಚಿನ ದಿನಗಳಲ್ಲಿ ಸಾಮಾಜಿಕ ಜಾಲತಾಣವನ್ನು ಕೆಲವರು ತಮ್ಮ ನಗ್ನ ಫೋಟೋಗಳನ್ನು, ವಿಡಿಯೋಗಳನ್ನು ಪೋಸ್ಟ್ ಮಾಡುವ ಮೂಲಕ ಜನರನ್ನು ಸೆಳೆಯುವ ಸಾಲಿನಲ್ಲಿ ಪ್ರಮುಖ ರಾಗುತ್ತಿದ್ದಾರೆ. ಈ ಮೂಲಕ ಕೆಲವರು ಟ್ರೋಲ್ ಗೆ ಒಳಗಾದರೆ, ಇನ್ನೂ ಕೆಲವರು ಅದೇ ಬಿಸಿನೆಸ್ ರೀತಿಯಲ್ಲಿ ಮಾಡುತ್ತಿದ್ದಾರೆ. ಸದ್ಯ ಇದೇ ರೀತಿಯಲ್ಲಿ ಸಿಂಗಪೂರ್’ನ 22 ನೇ ವಯಸ್ಸಿನ ಯುವಕ ಟೈಟಸ್ ಲೋ ಎಂಬಾತ ಸಿಂಗಾಪುರದ ಅತ್ಯಂತ ಯಶಸ್ವಿಯಾಗಿರುವ ‘ಓನ್ಲಿ ಫ್ಯಾನ್ಸ್’ ಜಾಲತಾಣದ ಪ್ರಮುಖ ವ್ಯಕ್ತಿ. ಆನ್‌ಲೈನ್ ಪ್ಲಾಟ್‌ಫಾರ್ಮ್‌ನಲ್ಲಿ ಸಾವಿರಾರು ಜನರು ಇತನಿಗೆ ಚಂದಾದಾರರಾಗಿದ್ದಾರೆ. ಅಲ್ಲಿ ಬಳಕೆದಾರರು ಮೂಲ ವಿಷಯವನ್ನು ಖರೀದಿಸಬಹುದು ಅಥವಾ ಮಾರಾಟವನ್ನು ಕೂಡ ಮಾಡಬಹುದು. ನಗ್ನ ಫೋಟೋಗಳು ಮತ್ತು ವೀಡಿಯೊಗಳನ್ನು ಪೋಸ್ಟ್ ಮಾಡಲು ಟೈಟಸ್ ಲೋ ಸ್ವತಃ ಬಳಸುವುದರೊಂದಿಗೆ, ಈ ವೆಬ್ಸೈಟ್ ಆತನ ವಯಸ್ಕರಿಗೆ ಮೀಸಲಾಗಿದೆ ಎಂಬುದನ್ನು ಸ್ಪಷ್ಟಪಡಿಸಿದೆ. ಆದರೆ ಕಳೆದ ವರ್ಷ ಡಿಸೆಂಬರ್‌ನಲ್ಲಿ ಟೈಟಸ್ ನನ್ನು ಬಂಧಿಸಲಾಯಿತು ಮತ್ತು ಅಶ್ಲೀಲ ವಸ್ತುಗಳನ್ನು ಮಾರಾಟ ಮಾಡುತ್ತಿದ್ದ ಎಂದು ಆರೋಪ ಹೊರಿಸಲಾಯಿತು. ಈ ಒಂದು ಆರೋಪವನ್ನು ಎದುರಿಸಿದ ಸಿಂಗಾಪುರದ ‘ಓನ್ಲಿ ಫ್ಯಾನ್ಸ್’ ಸೃಷ್ಟಿಕರ್ತ ಟೈಟಸ್ ಲೋ ತನ್ನ ಜೈಲುವಾಸದ ಅಭಿಪ್ರಾಯ ಹಾಗೂ ಜೀವನದ ಮೇಲೆ ಬಿದ್ದ ಪರಿಣಾಮದ ಬಗ್ಗೆ ಹಂಚಿಕೊಂಡಿದ್ದಾನೆ.

ಸಿಂಗಾಪುರದ ದಂಡ ಸಂಹಿತೆಯ ಅಡಿಯಲ್ಲಿ, ಎಲೆಕ್ಟ್ರಾನಿಕ್ ವಿಧಾನಗಳ ಮೂಲಕ ಯಾವುದೇ ಅಶ್ಲೀಲ ವಸ್ತುಗಳನ್ನು ತಲುಪಿಸುವುದು ಅಥವಾ ಅಂತಹ ವಸ್ತುಗಳನ್ನು ರವಾನಿಸುವ ಯಾವುದೇ ವ್ಯವಹಾರದಲ್ಲಿ ಭಾಗವಹಿಸುವುದು ಅಥವಾ ಲಾಭಾಂಶವನ್ನು ಪಡೆಯುವುದು ಕಾನೂನಿಗೆ ಬಾಹಿರವಾಗಿದೆ. ತಾಂತ್ರಿಕವಾಗಿ ಹೇಳುವುದಾದರೆ, ನಿಮ್ಮ ನಗ್ನ ಫೋಟೋವನ್ನು ಮತ್ತೊಬ್ಬರಿಗೆ ಕಳುಹಿಸುವುದು ಕಾನೂನಿಗೆ ವಿರುದ್ಧವಾಗಿದೆ. ಅದು ಒಪ್ಪಿಗೆಯಾಗಿದ್ದರೂ ಸಹ, ಮಾರ್ಕೆಟಿಂಗ್ ಮಾಡುವಂತಿಲ್ಲ ಎಂದು ಹೇಳಿದೆ. ಟೈಟಸ್ ಲೋ ಹೇಳಿದಂತೆ, ನನಗೆ ನನ್ನ ಜೀವನ ಮತ್ತೆ ಬೇಕು. ಇಲೆಕ್ಟ್ರಾನಿಕ್ ವಿಧಾನಗಳ ಮೂಲಕ ಅಶ್ಲೀಲ ವಸ್ತುಗಳನ್ನು ರವಾನಿಸುವ ಎರಡು ಆರೋಪಗಳು ಮತ್ತು ಅವರಿಗೆ ನೀಡಿದ ಆದೇಶವನ್ನು ಅನುಸರಿಸಲು ವಿಫಲವಾದ ಒಂದು ಆರೋಪದ ಮೇಲೆ ಡಿ.30 ರಂದು ಟೈಟಸ್ ಲೋ ವಿರುದ್ಧ ನ್ಯಾಯಾಲಯದಲ್ಲಿ ಆರೋಪ ಹೊರಿಸಲಾಯಿತು. ವೀಡಿಯೊದಲ್ಲಿ, ಅವರು ತಮ್ಮ ಕೇವಲ ಅಭಿಮಾನಿಗಳ ಪ್ರಯಾಣದ ಬಗ್ಗೆ ಮಾತನಾಡಿದ್ದು, ತನ್ನ ಮೇಲೆ ಎಸಗಿರುವ ಆರೋಪಗಳು, ಸಾಕಷ್ಟು ವದಂತಿಗಳು ಸುಳ್ಳುಗಳಾಗಿವೆ ಎಂದು ಹೇಳಿದರು.

ತೀವ್ರ ಬಡ ಕುಟುಂಬದಿಂದ ಬಂದು, ಮನೆಯಲ್ಲಿದ್ದ ಸಾಕಷ್ಟು ತೊಂದರೆಗಳನ್ನು ಎದುರಿಸುತ್ತ ಬಂದ ಕಾರಣ ನನಗೆ ಜೀವನದಲ್ಲಿ ಯಾವಾಗಲೂ ಸ್ವತಂತ್ರವಾಗಿರಬೇಕೆಂಬ ಇಚ್ಚೆ ಹುಟ್ಟಿಕೊಂಡಿತ್ತು. ಅರೆ ನಗ್ನ, ನಗ್ನ  ಫೋಟೋ ಮತ್ತು ವೀಡಿಯೋಗಳನ್ನು ಕಳಿಸುವುದು ಅಥವಾ ಪ್ರದರ್ಶಿಸುವುದು ಸಿಂಗಾಪುರ್ ನಲ್ಲಿ ಕಾನೂನಿಗೆ ಬಾಹಿರವಾಗಿದೆ. ಸಿಂಗಾಪುರ್ ಕಾನೂನಿನ ಅನುಸಾರ ಸೆಕ್ಸ್ ಹಾಗೂ ಗೇ ಸೆಕ್ಸ್ ತಾಂತ್ರಿಕವಾಗಿ ಒಂದು ಅಪರಾಧ ಎಂದು ಪರಿಗಣಿಸಿದೆ. ಈ ಒಂದು ಕೆಲಸದ ಕುರಿತು ಕಠಿಣ ಕ್ರಮಗಳು ಕೂಡ ಕೈಗೊಳ್ಳಲಾಗುವುದು ಎಂದು ಸಿಂಗಾಪುರ್ ಕಾನೂನು ತಿಳಿಸಿವೆ.

Latest News

Pakistan
ದೇಶ-ವಿದೇಶ

ಪಾಕಿಸ್ತಾನ : ಗರ್ಭಿಣಿ ಮಹಿಳೆ ಮೇಲೆ ಭದ್ರತಾ ಸಿಬ್ಬಂದಿ ಹಲ್ಲೆ ; ಭಾರೀ ಆಕ್ರೋಶ

ನೋಮನ್ ಗ್ರ್ಯಾಂಡ್ ಸಿಟಿ ಅಪಾರ್ಟ್ಮೆಂಟ್ ಕಟ್ಟಡದ ಹೊರಗೆ ಭದ್ರತಾ ಸಿಬ್ಬಂದಿ ಗರ್ಭಿಣಿ ಮಹಿಳೆಯನ್ನು ಥಳಿಸಿದ್ದಾರೆ ಎಂದು ಪಾಕ್ ಮೂಲದ ಜಿಯೋ ನ್ಯೂಸ್ ವರದಿ ಮಾಡಿದೆ.

Culprits
ಪ್ರಮುಖ ಸುದ್ದಿ

ಹಾಲಿನ ವ್ಯಾಪಾರದ ಸೋಗಿನಲ್ಲಿ ಖೋಟಾ ನೋಟು ದಂಧೆ ; ಬಿಜೆಪಿ ಮುಖಂಡ ಸೇರಿ ಮೂವರ ಬಂಧನ

ಆರೋಪಿಯನ್ನು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ. ಈ ಕುರಿತು ಪೊಲೀಸರು ತನಿಖೆ ಮುಂದುವರೆಸಿದ್ದು, ಕುಂದಗೋಳ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.

rss
ರಾಜಕೀಯ

RSS ಭಾರತದಲ್ಲಿನ ತಾಲಿಬಾನ್ ಇದ್ದಂತೆ : ಕಾಂಗ್ರೆಸ್‌

ಆರ್‌ಎಸ್‌ಎಸ್‌ ಎಂದಿಗೂ ಭಾರತೀಯತೆಯನ್ನು ಒಪ್ಪಿಲ್ಲ, ಮುಂದೆಯೂ ಒಪ್ಪುವುದಿಲ್ಲ. ಪ್ರತ್ಯೇಕ ಐಡೆಂಟಿಟಿಯಲ್ಲಿ ಇರಲು ಭಯಸುವ ಆರ್‌ಎಸ್‌ಎಸ್‌, ಭಾರತದಲ್ಲಿನ ತಾಲಿಬಾನ್ ಇದ್ದಂತೆ.