Visit Channel

‘ಸೀತಾರಾಮ್ ಬಿನೋಯ್’ ಸಂಭ್ರಮ..!

WhatsApp Image 2021-08-30 at 10.19.12

ಎಲಿಫೆಂಟ್‌ ಪಾತ್‌ ಫಿಲಂ ಫ್ಯಾಕ್ಟರಿ ಬ್ಯಾನರ್‌ ನಲ್ಲಿ ನಿರ್ಮಿಸಿ, ದೇವಿ ಪ್ರಸಾದ್‌ ಶೆಟ್ಟಿ ನಿರ್ದೇಶಿಸಿರುವ ಚಿತ್ರ ಸೀತಾರಾಮ್‌ ಬಿನೋಯ್‌ ಕೇಸ್‌ ನಂಬರ್‌ 18. ವಿಜಯ ರಾಘವೇಂದ್ರ ಮುಖ್ಯ ಭೂಮಿಕೆಯಲ್ಲಿ ನಟಿಸಿರುವ ಈ ಸಿನಿಮಾ ಅವರ 50ನೇ ಚಿತ್ರವಾಗಿದ್ದು, ಚಿತ್ರದ ಯಶಸ್ಸಿನ ಖುಷಿಯನ್ನು ಚಿತ್ರತಂಡ ಇತ್ತೀಚೆಗಷ್ಟೇ ಹಮ್ಮಿಕೊಂಡಿತ್ತು.

ಕಳೆದ ವರ್ಷದ ಆಗಸ್ಟ್‌ನಲ್ಲಿ ಲಾಕ್‌ ಡೌನ್‌ ತೆರವಾದ ಕೂಡಲೇ ಕೇವಲ ಇಪ್ಪತ್ತು ದಿನಗಳಲ್ಲಿ ಶಿವಮೊಗ್ಗದ ತೀರ್ಥಹಳ್ಳಿ, ಕೋಣಂದೂರಿನ ಸುತ್ತಮುತ್ತ ಚಿತ್ರೀಕರಿಸಲಾಗಿದೆ. ರಾಜ್ಯದಲ್ಲಿ ಪ್ರಥಮ ಬಾರಿಗೆ ಮೊದಲು ಖಾಸಗಿ ವಾಹಿನಿಯಲ್ಲಿ ಬಿಡುಗಡೆಯಾಗಿ ಮರುದಿನದಿಂದ ಚಿತ್ರಮಂದಿರದಲ್ಲಿ ವಿಶೇಷವಾಗಿ ತೆರೆಕಂಡ ಹೆಗ್ಗಳಿಕೆ ಈ ಚಿತ್ರದ್ದು! ಚಿತ್ರ ಮೂರನೇ ವಾರ ಚಿತ್ರಮಂದಿರದಲ್ಲಿ ಯಶಸ್ವಿ ಪ್ರದರ್ಶನ ಕಾಣುತ್ತಿದೆ. ವಿಜಯರಾಘವೇಂದ್ರ ಪೋಲೀಸ್‌ ಇನ್ಸ್ಪಪೆಕ್ಟರ್‌ ಪಾತ್ರದಲ್ಲಿ ನಟಿಸಿದ್ದು, ವಿಜಯರಾಘವೇಂದ್ರ ಅವರ ನಟನೆಯ ಬಗ್ಗೆ ಈಗಾಗಲೇ ಅತ್ಯುತ್ತಮ ಪ್ರತಿಕ್ರಿಯೆ ದೊರಕುತ್ತಿದೆ. ವಿಜಯ ರಾಘವೇಂದ್ರ ಅವರೊಂದಿಗೆ ನಾಗರಾಜ್‌, ಶ್ರೀಹರ್ಷ ಭಟ್‌ ನೀನಾಸಂ, ಸಾತ್ವಿಕ್‌ ಹೆಬ್ಬಾರ್‌, ದೇವಿ ಪ್ರಕಾಶ್‌ ಮತ್ತಿತರರು ನಟಿಸಿದ್ದಾರೆ. ಸಿನಿಮಾಕ್ಕೆ ಹೇಮಂತ್‌ ಛಾಯಾಗ್ರಹಣವಿದ್ದು, ಶಶಾಂಕ್‌ ನಾರಾಯಣ ಸಂಭಾಷಣೆಯ ಜೊತೆಗೆ ಸಂಕಲನ ಮಾಡಿದ್ದಾರೆ. ಗಗನ್‌ ಬಡೇರಿಯ ಸಂಗೀತ, ಭವಾನಿ ಶಂಕರ್‌ ಆನೇಕಲ್ಲು ಕಲಾನಿರ್ದೇಶನ ಮಾಡಿದ್ದಾರೆ.

ನಿರ್ದೇಶಕರು ಒಳಗೊಂಡಂತೆ ಬಹುಪಾಲು ತಂತ್ರಜ್ಞರು ಮೊಟ್ಟಮೊದಲನೇ ಬಾರಿಗೆ ಮುಖ್ಯ ತಂತ್ರಜ್ಞರಾಗಿ ಕೆಲಸ ಮಾಡಿದ್ದರೂ ತಾಂತ್ರಿಕವಾಗಿಯೂ ಸಿನಿಮಾ ಗೆದ್ದಿರುವುದು ಚಿತ್ರದ ಹೆಗ್ಗಳಿಕೆ. ಸಿನಿಮಾ ಚಿತ್ರಮಂದಿರದ ನಂತರ ಓಟಿಟಿಯಲ್ಲಿ ಬಿಡುಗಡೆ ಮಾಡುವ ತಯಾರಿಗಳೂ ನೆಡೆಯುತ್ತಿದೆ. ವಿಜಯರಾಘವೇಂದ್ರ ಅವರ ಸಿನಿಬದುಕಿನ 50ನೇ ಚಿತ್ರದ ಭಾಗವಾಗಿ ಹಾಗು ಚಿತ್ರ ಅಭೂತಪೂರ್ವ ಯಶಸ್ಸು ಕಂಡಿರುವುದು ಚಿತ್ರತಂಡದ ಖುಷಿಯನ್ನು ಮತ್ತಷ್ಟು ಹೆಚ್ಚಿಸಿದೆ.

Latest News

China Ship
ದೇಶ-ವಿದೇಶ

ಶ್ರೀಲಂಕಾ ಬಂದರಿನಲ್ಲಿ ಚೀನಾದ ಹಡಗು ; ಭಾರತದ ಕಳವಳಕ್ಕೆ 5 ಕಾರಣಗಳು ಇಲ್ಲಿವೆ!

ಮೊದಲಿನಿಂದಲೂ ಈ ಹಡಗು ಶ್ರೀಲಂಕಾ ಬಂದರಿಗೆ ಬರುವುದನ್ನು ಭಾರತ ತೀವ್ರವಾಗಿ ವಿರೋಧಿಸಿತ್ತು. ಭಾರತದ ಕಳವಳಕ್ಕೆ ಪ್ರಮುಖ 5 ಕಾರಣಗಳೆಂದರೆ,

bjp
ರಾಜಕೀಯ

ಕಾಂಗ್ರೆಸ್ಸಿಗರಿಗೇಕೆ ಜಿಹಾದಿಗಳ ಮೇಲೆ ಇಷ್ಟೊಂದು ಪ್ರೀತಿ? : ಬಿಜೆಪಿ ಪ್ರಶ್ನೆ

ಸ್ವಾತಂತ್ರ್ಯದ ಅಮೃತ ಮಹೋತ್ಸವದ ಸಂಭ್ರಮಕ್ಕೆ ಮಸಿ ಬಳಿಯಲು ಯತ್ನಿಸಿದ ದುಷ್ಟ ಶಕ್ತಿಗಳನ್ನು ಮಟ್ಟ ಹಾಕಲಾಗಿದೆ ಎಂದು ಬಿಜೆಪಿ ತಿಳಿಸಿದೆ.

Pingali
ಮಾಹಿತಿ

ನಮ್ಮ ರಾಷ್ಟ್ರಧ್ವಜವನ್ನು ನಿರ್ಮಿಸಿದ ಪಿಂಗಳಿ ವೆಂಕಯ್ಯ, ಮೊದಲು ಬ್ರಿಟಿಷ್ ಸೈನ್ಯದಲ್ಲಿದ್ದರು ; ಇಲ್ಲಿದೆ ಓದಿ ಅಚ್ಚರಿಯ ಮಾಹಿತಿ

ದೇಶಕ್ಕೊಂದು ಧ್ವಜಕೊಟ್ಟು 100 ವರ್ಷ ಕಳೆದರೂ ಪಿಂಗಳಿ ಅವರ ನೆನಪು ಅಜರಾಮರವಾಗಿದೆ. ಪಿಂಗಳಿ ವೆಂಕಯ್ಯ ಅವರ ಬಗ್ಗೆ ಇನ್ನೂ ಹೆಚ್ಚಿನ ಮಾಹಿತಿಯನ್ನು ತಿಳಿದುಕೊಳ್ಳೋಣ ಮುಂದೆ ಓದಿ.