• ಹೋಮ್
  • ವಿಜಯ ಟೈಮ್ಸ್‌
    • ಪ್ರಮುಖ ಸುದ್ದಿ
    • ರಾಜ್ಯ
    • ದೇಶ-ವಿದೇಶ
    • ರಾಜಕೀಯ
  • ಕವರ್‌ ಸ್ಟೋರಿ
  • ಲೈಫ್ ಸ್ಟೈಲ್
  • ಆರೋಗ್ಯ
  • ಕ್ರೀಡೆ
  • ಮನರಂಜನೆ
    • ವೈರಲ್ ಸುದ್ದಿ
Menu
  • ಹೋಮ್
  • ವಿಜಯ ಟೈಮ್ಸ್‌
    • ಪ್ರಮುಖ ಸುದ್ದಿ
    • ರಾಜ್ಯ
    • ದೇಶ-ವಿದೇಶ
    • ರಾಜಕೀಯ
  • ಕವರ್‌ ಸ್ಟೋರಿ
  • ಲೈಫ್ ಸ್ಟೈಲ್
  • ಆರೋಗ್ಯ
  • ಕ್ರೀಡೆ
  • ಮನರಂಜನೆ
    • ವೈರಲ್ ಸುದ್ದಿ
Vijaya Times logo
  • ಹೋಮ್
  • ವಿಜಯ ಟೈಮ್ಸ್‌
    • ಪ್ರಮುಖ ಸುದ್ದಿ
    • ರಾಜ್ಯ
    • ದೇಶ-ವಿದೇಶ
    • ರಾಜಕೀಯ
  • ಕವರ್‌ ಸ್ಟೋರಿ
  • ಲೈಫ್ ಸ್ಟೈಲ್
  • ಆರೋಗ್ಯ
  • ಕ್ರೀಡೆ
  • ಮನರಂಜನೆ
    • ವೈರಲ್ ಸುದ್ದಿ
Menu
  • ಹೋಮ್
  • ವಿಜಯ ಟೈಮ್ಸ್‌
    • ಪ್ರಮುಖ ಸುದ್ದಿ
    • ರಾಜ್ಯ
    • ದೇಶ-ವಿದೇಶ
    • ರಾಜಕೀಯ
  • ಕವರ್‌ ಸ್ಟೋರಿ
  • ಲೈಫ್ ಸ್ಟೈಲ್
  • ಆರೋಗ್ಯ
  • ಕ್ರೀಡೆ
  • ಮನರಂಜನೆ
    • ವೈರಲ್ ಸುದ್ದಿ
Visit Channel
Home ಪ್ರಮುಖ ಸುದ್ದಿ

ಧರ್ಮಸ್ಥಳ ಪ್ರಕರಣಕ್ಕೆ ಮತ್ತೊಂದು ತಿರುವು: ಬಂಗ್ಲೆಗುಡ್ಡ ಶೋಧದಲ್ಲಿ ಅಸ್ಥಿಪಂಜರ-ತಲೆಬುರುಡೆ ಪತ್ತೆ

Shwetha Mohan by Shwetha Mohan
in ಪ್ರಮುಖ ಸುದ್ದಿ, ರಾಜ್ಯ, ವಿಜಯ ಟೈಮ್ಸ್‌, ವೈರಲ್ ಸುದ್ದಿ
ಧರ್ಮಸ್ಥಳ ಪ್ರಕರಣಕ್ಕೆ ಮತ್ತೊಂದು ತಿರುವು: ಬಂಗ್ಲೆಗುಡ್ಡ ಶೋಧದಲ್ಲಿ ಅಸ್ಥಿಪಂಜರ-ತಲೆಬುರುಡೆ ಪತ್ತೆ
0
SHARES
23
VIEWS
Share on FacebookShare on Twitter
  • ಬಂಗ್ಲೆಗುಡ್ಡ ಕಾಡಿನಲ್ಲಿ ಅಸ್ಥಿಪಂಜರ-ತಲೆಬುರುಡೆ ಪತ್ತೆಯಿಂದ ಹೊಸ ದಿಕ್ಕಿನಲ್ಲಿ ತನಿಖೆ
  • ಮಾನವ ಅವಶೇಷ ಪತ್ತೆಯಿಂದ ಪ್ರಕರಣ ಮತ್ತಷ್ಟು ಗಂಭೀರ ಹಂತಕ್ಕೆ
  • ಅರಣ್ಯದಲ್ಲಿ ನಡೆದ ತೀವ್ರ ಶೋಧ ಕಾರ್ಯಾಚರಣೆ (Skeleton-skull found in Banglegudda search)

Dakshina Kannada: ಧರ್ಮಸ್ಥಳ ಪ್ರಕರಣದ ಸುತ್ತಮುತ್ತ ನಡೆಯುತ್ತಿರುವ ತನಿಖೆ ಮತ್ತೆ ಚರ್ಚೆಗೆ ಕಾರಣವಾಗಿದೆ. ಈಗಾಗಲೇ ಈ ಪ್ರಕರಣ ಮುಗಿದಂತಾಗಿತ್ತು ಎನ್ನುವ ಭಾವನೆ ಮೂಡಿದ್ದರೂ,

ಬಂಗ್ಲೆಗುಡ್ಡದ(Banglegudda) ಕಾಡಿನಲ್ಲಿ ನಡೆದ ಇತ್ತೀಚಿನ ಶೋಧದಿಂದ ಅಚ್ಚರಿ ಬೆಳವಣಿಗೆಗಳು ಬಯಲಾಗಿವೆ. ಧರ್ಮಸ್ಥಳದಲ್ಲಿ(Dharmasthala) ಹಲವು ದಿನಗಳಿಂದ ನಡೆಯುತ್ತಿದ್ದ ಶೋಧ ಕಾರ್ಯ ಇದೀಗ ಮತ್ತೊಂದು ತಿರುವು ಪಡೆದು ಎಲ್ಲರ ಗಮನ ಸೆಳೆದಿದೆ.

ಇನ್ನು ಎಸ್‌ಐಟಿ ಅಧಿಕಾರಿಗಳು (SIT) ಸೆಪ್ಟೆಂಬರ್ 17 ರಂದು ಬಂಗ್ಲೆಗುಡ್ಡದ ಕಾಡಿನಲ್ಲಿ ತೀವ್ರ ಶೋಧ ಕಾರ್ಯ ಕೈಗೊಂಡರು. ಈ ವೇಳೆ ಮಣ್ಣಿನ ಮೇಲ್ಭಾಗದಲ್ಲೇ ಮಾನವನ ಅಸ್ಥಿಪಂಜರ,

ತಲೆಬುರುಡೆ ಹಾಗೂ ಮೂಳೆಗಳು ಪತ್ತೆಯಾಗಿವೆ. ಪ್ರಾರಂಭದಲ್ಲಿ ಕೇವಲ ಮೂಳೆಗಳು ಸಿಕ್ಕಿದ್ದರೂ, ಬಳಿಕ ಅಸ್ಥಿಪಂಜರ ಸಂಪೂರ್ಣವಾಗಿ ಪತ್ತೆಯಾಗಿರುವುದು ತನಿಖೆಗೆ ಹೊಸ ಆಯಾಮ ನೀಡಿದೆ.

ಸೌಜನ್ಯ(Sowjanya) ಮಾವ ವಿಠಲಗೌಡ(Vitthal Gowda) ಇತ್ತೀಚೆಗೆ ಬಂಗ್ಲೆಗುಡ್ಡದಲ್ಲಿ ಶವಗಳ ರಾಶಿ ಇದೆ” ಎಂದು ಗಂಭೀರ ಆರೋಪ ಮಾಡಿದ್ದರು. ಅವರ ಹೇಳಿಕೆಯ ಬಳಿಕ ಪ್ರಕರಣದಲ್ಲಿ ಹೊಸ ಸಂಚಲನ ಉಂಟಾಯಿತು.

ಇದಕ್ಕೆ ಮೊದಲು ‘ಮಾಸ್ಕ್‌ಮ್ಯಾನ್’ ಚಿನ್ನಯ್ಯ ಧರ್ಮಸ್ಥಳದಲ್ಲಿ ನೂರಾರು ಶವಗಳನ್ನು ಹೂತಿದ್ದೇನೆ” ಎಂದು ಹೇಳಿ ಸುದ್ದಿಯಾಗಿದ್ದನು. ಈಗ ಆತ ಜೈಲಿನಲ್ಲಿ ಇದ್ದರೂ,

Skeleton-skull found in Banglegudda search
ವಿಠಲಗೌಡರ ಆರೋಪವು ಎಸ್‌ಐಟಿ ತನಿಖೆಗೆ ಹೊಸ ದಿಕ್ಕು ತೋರಿಸಿದೆ.ಅರಣ್ಯ ಇಲಾಖೆಯಿಂದ ಅನುಮತಿ ದೊರಕುತ್ತಿದ್ದಂತೆ, ಮೂರು ಪ್ರತ್ಯೇಕ ತಂಡಗಳನ್ನು ರಚಿಸಿದ ಎಸ್‌ಐಟಿ

ಧರ್ಮಸ್ಥಳದ ನೇತ್ರಾವತಿ ಸ್ನಾನಘಟ್ಟದ ಹತ್ತಿರ ಕಾಡಿನೊಳಗೆ ಪ್ರವೇಶಿಸಿತು. ಈ ಶೋಧ ಕಾರ್ಯದಲ್ಲಿ 15 ಅರಣ್ಯ ಸಿಬ್ಬಂದಿ, ಗ್ರಾಮ ಪಂಚಾಯತ್‌ನ 8 ಸಿಬ್ಬಂದಿ ಹಾಗೂ ಪೌರಕಾರ್ಮಿಕರು ಭಾಗವಹಿಸಿದ್ದರು.

ಒಟ್ಟಿನಲ್ಲಿ ಸುಮಾರು 30ಕ್ಕೂ ಹೆಚ್ಚು ಮಂದಿ ಶೋಧ ಕಾರ್ಯಕ್ಕೆ ಕೈಜೋಡಿಸಿದ್ದಾರೆ.

ಐದು ಸ್ಥಳಗಳಲ್ಲಿ ಮೇಲ್ಮೈನಲ್ಲೇ ಶೋಧ ನಡೆಸಿದಾಗ ತಲೆಬುರುಡೆ ಹಾಗೂ ಮೂಳೆಗಳು ಪತ್ತೆಯಾಗಿವೆ. ಈ ವಸ್ತುಗಳನ್ನು ಸಂಗ್ರಹಿಸಿದ ಅಧಿಕಾರಿಗಳು ಅವುಗಳನ್ನು ಬಕೆಟ್‌ನಲ್ಲಿ ಹಾಕಿ,

ಪಿವಿಸಿ ಪೈಪ್‌ನಲ್ಲಿ ಸೀಲ್‌ ಮಾಡಿ ಕಾಡಿನಿಂದ ಹೊರಗೆ ತಂದಿದ್ದಾರೆ. ಸಾಮಾನ್ಯವಾಗಿ ಇಂತಹ ಶೋಧ ಕಾರ್ಯಕ್ಕೆ ಎಸಿ (Assistant Commissioner) ಹಾಗೂ ತಹಶೀಲ್ದಾರ್ ಹಾಜರಿರಬೇಕಿತ್ತು.

ಆದರೆ ಮೂಳೆಗಳು ಭೂಮಿಯ ಮೇಲ್ಭಾಗದಲ್ಲೇ ಪತ್ತೆಯಾಗಿದ್ದರಿಂದ ಈ ಬಾರಿ ಕೇವಲ ತನಿಖಾಧಿಕಾರಿಗಳು ಮಾತ್ರ ಸ್ಥಳದಲ್ಲಿದ್ದರು.

ಅಸ್ಥಿಪಂಜರ ಹಾಗೂ ಮೂಳೆಗಳ ಪರೀಕ್ಷೆಗೆ ನ್ಯಾಯ ವೈದ್ಯಕೀಯ ತಜ್ಞರ ತಂಡವನ್ನು ನಿಯೋಜಿಸುವ ಸಾಧ್ಯತೆ ಇದೆ. ಡಿಎನ್‌ಎ ಪರೀಕ್ಷೆಯ ಮೂಲಕ ಇವು ಯಾರಿಗೆ ಸೇರಿವೆ ಎಂಬುದು ಪತ್ತೆಯಾಗುವ ನಿರೀಕ್ಷೆಯಿದೆ.

ಇದು ಧರ್ಮಸ್ಥಳ ಪ್ರಕರಣಕ್ಕೆ ನೇರ ಸಂಬಂಧ ಹೊಂದಿದೆಯೋ ಅಥವಾ ಬೇರೆ ಘಟನೆಗೆ ಸೇರಿದ ಅವಶೇಷಗಳೋ ಎಂಬುದನ್ನು ಮುಂದಿನ ವರದಿಗಳು ಸ್ಪಷ್ಟಪಡಿಸಬಹುದು.

ಒಟ್ಟಿನಲ್ಲಿ, ಬಂಗ್ಲೆಗುಡ್ಡದಲ್ಲಿ ಪತ್ತೆಯಾದ ಅಸ್ಥಿಪಂಜರ ಹಾಗೂ ತಲೆಬುರುಡೆ ಧರ್ಮಸ್ಥಳ ಪ್ರಕರಣಕ್ಕೆ ಹೊಸ ಬಣ್ಣ ತುಂಬಿದೆ.

ಇದನ್ನು ಓದಿ :  ಧರ್ಮ** ಬುರುಡೆ ಪ್ರಕರಣ: ಜೆಡಿಎಸ್ – ಬಿಜೆಪಿ ನಡುವಲ್ಲಿ ಹೆಚ್ಚಿದ ಪೈಪೋಟಿ

ಈಗ ತನಿಖಾಧಿಕಾರಿಗಳ ಮುಂದಿದೆ ದೊಡ್ಡ ಸವಾಲು – ಈ ಪತ್ತೆಗಳಿಂದ ಪ್ರಕರಣದ ಮೂಲ ಸತ್ಯವನ್ನು ಹೊರತರುವದು. ಮುಂದಿನ ದಿನಗಳಲ್ಲಿ ತನಿಖೆಯಿಂದ ಯಾವ ರೀತಿಯ ಬೆಳವಣಿಗೆಗಳು ಬಯಲಾಗುತ್ತವೆ ಎಂಬುದನ್ನು ಕಾದು ನೋಡಬೇಕಾಗಿದೆ. (Skeleton-skull found in Banglegudda search)

Tags: Banglegudda forestDakshina KannadaDharmasthalaSITSkeleton-skullVitthal Gowda

Related News

ಸ್ಕ್ವಾಷ್ ವಿಶ್ವಕಪ್; ಹಾಂಗ್‌ಕಾಂಗ್‌ ವಿರುದ್ಧ ಗೆದ್ದು ಬೀಗಿದ ಭಾರತ
Sports

ಸ್ಕ್ವಾಷ್ ವಿಶ್ವಕಪ್; ಹಾಂಗ್‌ಕಾಂಗ್‌ ವಿರುದ್ಧ ಗೆದ್ದು ಬೀಗಿದ ಭಾರತ

December 15, 2025
ಬೆಂಗಳೂರು ಜನತೆಗೆ ಜಲಮಂಡಳಿಯಿಂದ ಗುಡ್ ನ್ಯೂಸ್: ಜನವರಿಯಿಂದ ಒನ್ ಟೈಮ್ ಸೆಟಲ್‌ಮೆಂಟ್ ಜಾರಿ, ಫೈನ್ ಸಂಪೂರ್ಣ ಮನ್ನಾ
ಪ್ರಮುಖ ಸುದ್ದಿ

ಬೆಂಗಳೂರು ಜನತೆಗೆ ಜಲಮಂಡಳಿಯಿಂದ ಗುಡ್ ನ್ಯೂಸ್: ಜನವರಿಯಿಂದ ಒನ್ ಟೈಮ್ ಸೆಟಲ್‌ಮೆಂಟ್ ಜಾರಿ, ಫೈನ್ ಸಂಪೂರ್ಣ ಮನ್ನಾ

December 15, 2025
ಕೋಲ್ಕತ್ತಾ ಸ್ಟೇಡಿಯಂನಲ್ಲಿ ಮೆಸ್ಸಿ ಫ್ಯಾನ್ಸ್ ದಾಂಧಲೆ:ಮೆಸ್ಸಿ ಮೇನಿಯಾ ಅವ್ಯವಸ್ಥೆಯಿಂದ ಅಂತ್ಯ
ದೇಶ-ವಿದೇಶ

ಕೋಲ್ಕತ್ತಾ ಸ್ಟೇಡಿಯಂನಲ್ಲಿ ಮೆಸ್ಸಿ ಫ್ಯಾನ್ಸ್ ದಾಂಧಲೆ:ಮೆಸ್ಸಿ ಮೇನಿಯಾ ಅವ್ಯವಸ್ಥೆಯಿಂದ ಅಂತ್ಯ

December 13, 2025
ಪ್ರತಿ ತಿಂಗಳು ಹೂಡಿಕೆ ಮಾಡುವ SIP ನ ಅಸಲಿ ಸತ್ಯ
ಪ್ರಮುಖ ಸುದ್ದಿ

ಪ್ರತಿ ತಿಂಗಳು ಹೂಡಿಕೆ ಮಾಡುವ SIP ನ ಅಸಲಿ ಸತ್ಯ

December 13, 2025

ವಿಜಯ ಟೈಮ್ಸ್‌ - ಬದಲಾವಣೆಯ ಹಾದಿ

Vijaya Times logo

ವಿಜಯ ಟೈಮ್ಸ್‌

  • ಪ್ರಮುಖ ಸುದ್ದಿ
  • ರಾಜಕೀಯ
  • ದೇಶ-ವಿದೇಶ
  • ಮನರಂಜನೆ
  • ಪ್ರಮುಖ ಸುದ್ದಿ
  • ರಾಜಕೀಯ
  • ದೇಶ-ವಿದೇಶ
  • ಮನರಂಜನೆ

Quick Links

  • About Us
  • Contact Us
  • For Advertisement
  • Privacy policy
  • About Us
  • Contact Us
  • For Advertisement
  • Privacy policy

Follow Us

Facebook Twitter Instagram Youtube

Download Vijaya Times App

Android
© 2022 Vijaya Times. All rights reserved.
No Result
View All Result
  • ಹೋಮ್
  • ವಿಜಯ ಟೈಮ್ಸ್‌
    • ಪ್ರಮುಖ ಸುದ್ದಿ
    • ರಾಜ್ಯ
    • ದೇಶ-ವಿದೇಶ
    • ರಾಜಕೀಯ
  • ಕವರ್‌ ಸ್ಟೋರಿ
  • ಲೈಫ್ ಸ್ಟೈಲ್
  • ಆರೋಗ್ಯ
  • ಕ್ರೀಡೆ
  • ಮನರಂಜನೆ
    • ವೈರಲ್ ಸುದ್ದಿ

© 2022 Vijaya Times. All Rights Reserved.