Follow these tips before going to bed at night for glowing skin.
Skin Care: ರಾತ್ರಿ ಮಲಗುವ ಸಮಯದಲ್ಲಿ ಚರ್ಮದ (Skin) ಆರೈಕೆ ಮಾಡುವುದು ತುಂಬಾನೇ ಉತ್ತಮ. ರಾತ್ರಿ ವೇಳೆ ಚರ್ಮಕ್ಕೆ ನಿಯಮಿತವಾಗಿ ಕೆಲವೊಂದು ಕ್ರಮಗಳನ್ನು ರೂಢಿಸಿಕೊಂಡು ಬರುತ್ತಾ ಹೋದರೆ ಚರ್ಮದ ಹೊಳಪು ಮತ್ತು ಕಾಂತಿ ಹೆಚ್ಚಾಗುತ್ತದೆ.
ಮುಖವನ್ನು ಸ್ವಚ್ಛಗೊಳಿಸಬೇಕು.
ಬೆಳಿಗ್ಗೆಯಿಂದ ಸಂಜೆಯವರೆಗೂ ಹೊರಗಡೆ ಸುತ್ತಾಡುವುದರಿಂದ ಮುಖ ಕೊಳಕಾಗುತ್ತದೆ, ಅದಕ್ಕೆ ರಾತ್ರಿ ಮಲಗುವ ಮುನ್ನ ಕಡ್ಡಾಯವಾಗಿ ಮುಖವನ್ನು ತೊಳೆದು ಮಲಗಿ, ಮೇಕಪ್ ಹಚ್ಚಿದ್ದರೆ ಹಾಗೆಯೇ ಮಲಗಬೇಡಿ, ತೊಳೆದು ಮಲಗಿ. ಉಗುರು ಬೆಚ್ಚಗಿನ ನೀರಿನಲ್ಲಿ ಕ್ಲೀನ್ಸರ್ (Cleanser) ನಿಂದ ನಯವಾಗಿ ಮಸಾಜ್ ಮಾಡಿದಂತೆ 30 ಸೆಕೆಂಡ್ ಗಳ ಕಾಲ ಮಾಡಿ ನಂತರ ಮುಖ ತೊಳೆಯಿರಿ.
ಎಫ್ಫೋಲಿಯೇಟ್
ವಾರಕ್ಕೆ ಕನಿಷ್ಠ ಒಂದೆರಡು ಬಾರಿ ಸತ್ತ ಚರ್ಮದ ಕೋಶಗಳನ್ನು ತೆಗೆದುಹಾಕಲು ಮತ್ತು ರಂಧ್ರಗಳನ್ನು ಮುಚ್ಚಲು ರಾಸಾಯನಿಕ ಅಥವಾ ಭೌತಿಕ ಎಕ್ಸ್ಫೋಲಿಯಂಟ್ (Exfoliate)ನ್ನು ಬಳಸಿ. ಚರ್ಮದ ಮೇಲ್ಮೈಯಿಂದ ಸತ್ತ ಚರ್ಮದ ಕೋಶಗಳನ್ನು ತೆಗೆದುಹಾಕಲು ಅನುಸರಿಸುವ ಚರ್ಮದ ಆರೈಕೆ ವಿಧಾನವನ್ನು ಎಕ್ಸ್ಫೊಲಿಯೇಟ್ ವಿಧಾನ ಎನ್ನುತ್ತಾರೆ.
ಚರ್ಮವನ್ನು ಟೋನ್ ಮಾಡಬೇಕು
ಚರ್ಮದ ಪಿಹೆಚ್ ಮಟ್ಟವನ್ನು ಸಮತೋಲನಗೊಳಿಸಲು, ರಂಧ್ರಗಳನ್ನು ಬಿಗಿಗೊಳಿಸಲು ಮತ್ತು ಕಲ್ಮಶಗಳನ್ನು ತೆಗೆದು ಹಾಕಲು ಟೋನರನ್ನು ಬಳಸಿ. ಅಗತ್ಯವಾದ ಅಂಶಗಳನ್ನು ತಲುಪಿಸುವ ಸಾರವನ್ನು ಹಚ್ಚಿದರೆ ಚರ್ಮದ ರಚನೆ, ಟೋನ್(Tone) ಮತ್ತು ಹೈಡ್ರೇಷನ್ ಗೆ ಸಹಾಯ ಮಾಡುತ್ತದೆ.
Skin Care Tips At Home Kannada Health
ಸೆರಮ್/ಚಿಕಿತ್ಸೆ
ಮೊಡವೆ, ವಯಸ್ಸಾದಂತೆ ಕಾಣುವಿಕೆ, ಕಪ್ಪು ಕಲೆಗಳು ಮುಂತಾದ ನಿರ್ದಿಷ್ಟ ಚರ್ಮದ ಸಮಸ್ಯೆಗೆ ರೆಟಿನಾಲ್, ವಿಟಮಿನ್ ಸಿ, (Retinal, Vitamin C) ಅಥವಾ ನಿಯಾಸಿನಾಮೈಡ್ನಂತಹ ಪದಾರ್ಥಗಳನ್ನು ಒಳಗೊಂಡಿರುವ ಸೆರಮ್ ಅಥವಾ ಚಿಕಿತ್ಸಾ ಉತ್ಪನ್ನವನ್ನು ಬಳಸಿ.
ಕಣ್ಣಿನ ಆರೈಕೆ
ಕಣ್ಣಿನ ಸುತ್ತ ಕಪ್ಪಾಗುವಿಕೆ, ಪಫಿನೆಸ್ (Puffiness), ಅಥವಾ ಸೂಕ್ಷ್ಮ ರೇಖೆಗಳುಂಟಾಗು ವುದನ್ನು ತಡೆಯಲು ನಿಯಮಿತವಾಗಿ ಕಣ್ಣಿನ ಸುತ್ತ ಕ್ರೀಮ್ ಹಚ್ಚುತ್ತಾ ಇರಿ.
ಮಾಯಿಶ್ಚರೈಸರ್
ಚರ್ಮಕ್ಕೆ ಹೊಂದಿಕೆಯಾಗುವ, ಚರ್ಮ ಒಣಗದಂತೆ ನೋಡಿಕೊಳ್ಳುವ ಮತ್ತು ಮಲಗಿದ ಮೇಲೆ ಚರ್ಮಕ್ಕೆ ಪೋಷಣೆ ನೀಡುವ ಮಾಯಿಶ್ಚರೈಸರ್ (Moisturiser) ನ್ನು ಬಳಸುತ್ತಿರಿ.