Bengaluru: ರಾಜ್ಯ ಆರೋಗ್ಯ ಇಲಾಖೆ (State Health Department) ಜನರ ಆರೋಗ್ಯ ಕಾಪಾಡುವ ಉದ್ದೇಶದಿಂದ ಹಲವು ಆಹಾರ ಹಾಗೂ ವಸ್ತುಗಳಿಗೆ ಕಡಿವಾಣ ಹಾಕಲು ಮುಂದಾಗಿದೆ. ಇಡ್ಲಿ ಬೇಯಿಸಲು ಪ್ಲಾಸ್ಟಿಕ್ ಹಾಳೆ (Plastic sheet) ಬಳಕೆ ಆರೋಗ್ಯಕ್ಕೆ ಹಾನಿಕರ ಎನ್ನುವುದು ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಇಲಾಖೆ (Department of Food Safety and Quality) ನಡೆಸಿದ ಪರೀಕ್ಷೆಯಿಂದ ದೃಢಪಟ್ಟಿದೆ. ಇದರ ಬೆನ್ನಲ್ಲೇ ಟ್ಯಾಟೂ, ಲಿಪ್ ಸ್ಟಿಕ್, ಕಳಪೆ ಪೌಡರ್, ಐ ಲೈನರ್, ಕಾಜಲ್ನಿಂದ ಎಚ್ಐವಿ (HIV) ಹಾಗೂ ಚರ್ಮ ರೋಗ, ಕ್ಯಾನ್ಸರ್ ಬರುವ ಸಾಧ್ಯತೆ ಇದೆ ಎಂದು ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ (Dinesh Gundurao) ಅವರು ಶುಕ್ರವಾರ ಮಾಹಿತಿ ನೀಡಿದ್ದಾರೆ.

ಟ್ಯಾಟೂ , ಲಿಪ್ಸ್ಟಿಕ್ ಅಂತಹ ಸೌಂದರ್ಯ ಸಾಧನಗಳ ನಂತರದಲ್ಲಿ ಇದೀಗ ಮೆಹಂದಿ (Mehndi) ಸರದಿ, ಇದರಿಂದ ಚರ್ಮ ರೋಗ, ಕ್ಯಾನ್ಸರ್ ಬರುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ. ಅದರಲ್ಲೂ ಕಳಪೆ ಗುಣಮಟ್ಟದ ಮೆಹಂದಿಯಿಂದ ಚರ್ಮ ರೋಗಗಳು (Skin diseases) ಬರುತ್ತಿವೆ ಎಂಬ ಆತಂಕ ಹೆಚ್ಚುತ್ತಿದೆ. ಕೆಲವು ಮೆಹಂದಿಗಳಲ್ಲಿ ಅಪಾಯಕಾರಿ ಅಂಶಗಳು ಇರುವುದರಿಂದ ಚರ್ಮದ ಮೇಲೆ ಅಲರ್ಜಿ, ಕೆರೆತ, (Allergy, scratch) ಗಾಯಗಳಂತಹ ಸಮಸ್ಯೆಗಳು ಕಾಣಿಸಿಕೊಳ್ಳುತ್ತಿವೆ.
ಇನ್ನು ಈ ಸಮಸ್ಯೆಗಳನ್ನು ತಡೆಗಟ್ಟಲು ಕಳಪೆ ಮೆಹಂದಿ ಮಾರಾಟದ ಮೇಲೆ ಕಡಿವಾಣ ಹಾಕಲು ಸರ್ಕಾರ ಚಿಂತನೆ ನಡೆಸಿದೆ. ಈಗಾಗಲೇ ಮೆಹಂದಿಯಿಂದ ಉಂಟಾಗುವ ಚರ್ಮ ಸಮಸ್ಯೆಗಳ ಕುರಿತು ಸಾವಿರಾರು ದೂರುಗಳು ದಾಖಲಾಗಿವೆ. ಇದಲ್ಲದೆ, ಬ್ರಾಂಡೆಡ್ ಪೌಡರ್, ಐ ಲೈನರ್ ಮತ್ತು ಕಾಜಲ್ ಹೆಸರಿನಲ್ಲಿ ಕೂಡ ಕಳಪೆ ಗುಣಮಟ್ಟದ (Poor quality) ವಸ್ತುಗಳನ್ನು ಮಾರಾಟ ಮಾಡಲಾಗುತ್ತಿದೆ. ಈ ಬಗ್ಗೆಯೂ ಕ್ರಮ ಕೈಗೊಳ್ಳಲು ಇಲಾಖೆ ಸಜ್ಜಾಗಿದೆ.