ಬೆಂಗಳೂರು ಡಿ 21 : ನಿನ್ನೆ ರಾಜ್ಯದ ಹಲವೆಡೆ ಆಕಾಶದಲ್ಲಿ ವಿಚಿತ್ರವಾದ ಕೌತುಕ ಸೃಷ್ಟಿಯಾಗಿತ್ತು. ಈ ಬಗ್ಗೆ ಸಾರ್ವಜನಿಕರು ವಿವಿಧ ರೀತಿಯಲ್ಲಿ ಪ್ರತಿಕ್ರಿಯಿಸಿದ್ದರು. ಆದರೆ ಈ ಬಗ್ಗೆ ವಿಜ್ಞಾನಿಗಳು ಪ್ರತಿಕ್ರಿಯೆ ನೀಡಿದ್ದು, ಆದರೆ ಇದು ಎಲಾನ್ ಮಾಸ್ಕ್ ಮಾಲೀಕತ್ವದಲ್ಲಿ ಬಾಹ್ಯಾಕಾಶ ಸಂಸ್ಥೆ ಅಮೇರಿಕದ ಸ್ಪೇಸ್ ಎಕ್ಸ್ ಉಡಾವಣೆ ಮಾಡಿದ ಸರಣಿ ಉಪಗ್ರಹಗಳು ಎನ್ನುವುದು ತಿಳಿದು ಬಂದಿದೆ. ಕಳೆದ 2018ರಿಂದ ಸರಣಿ ಉಪಗ್ರಹಗಳನ್ನು ಹೀಗೆ ಸೇರಿಸುವಲ್ಲಿ ಸ್ಪೇಸ್ ಎಕ್ಸ್ ಯಶಸ್ವಿಯಾಗಿತ್ತು, ಅದರ ಒಂದು ಭಾಗ ಸೋಮವಾರ ಆಗಸದಲ್ಲಿ ಗೋಚರಿಸಿದೆ. ಆರಂಭದಲ್ಲಿ ಕೆಲವರು ಇದು ನಕ್ಷತ್ರ ಪುಂಜಗಳೇ ಎನ್ನುವ ಸಂಶಯ ಬಂದಿದ್ದರೂ ಸಹ ಒಂದು ರೈಲಿನಷ್ಟು ಉದ್ದನೆಯ ಬೆಳಕಿನ ಸಾಲು ಕಂಡವರು ಇದೊಂದು ವಿಸ್ಮಯ ಎಂದು ಭಾವಿಸಿದ್ದರು.
ಶಿರಸಿಯ ಭೈರುಂಬೆಯಲ್ಲಿರುವ ಖಗೋಳ ವಿಜ್ಞಾನ ಸಂಸ್ಥೆಯ ವಸಂತ ಹೆಗಡೆ ಅವರು ಇದೊಂದು ಉಪಗ್ರಹಗಳ ಸರಣಿಯಾಗಿದ್ದು ಆಕಾಶದಲ್ಲಿ ಹೋಗುವಾಗ ಸೂರ್ಯನ ಕಿರಣಗಳು ಪ್ರತಿಫಲಿಸುವುದರಿಂದ ಬೆಳಕಿನಲ್ಲಿ ಮಿನುಗುತ್ತಿವೆ. ಭೂಮಿಗೆ ತೀರಾ ಹತ್ತಿರದಿಂದ ಹೋಗುತ್ತಿರುವುದರಿಂದ ಬರಿಗಣ್ಣಿಗೆ ಗೋಚರಿಸುತ್ತಿದೆ ಎಂದು ತಿಳಿಸಿದ್ದಾರೆ.