ಚಳಿಗಾಲದಲ್ಲಿ ಸಾಮಾನ್ಯವಾಗಿ ಎಲ್ಲರೂ ಬೆಚ್ಚಗಿರಲು ಇಷ್ಟಪಡುತ್ತಾರೆ. ಹಾಗಾಗಿ ಮೈತುಂಬಾ ಬೆಚ್ಚಗಿನ ಬಟ್ಟೆ ಧರಿಸುತ್ತಾರೆ ಜೊತೆಗೆ ಮಲಗುವಾಗ ಕಾಲಿಗೂ ಸಹ ಸಾಕ್ಸ್ ಧರಿಸುತ್ತಾರೆ. ಆದರೆ ಕೆಲವರು ಕೇವಲ ಚಳಿಗಾಲ ಮಾತ್ರವಲ್ಲದೆ ಎಲ್ಲಾ ದಿನವೂ ಸಾಕ್ಸ್ ಧರಿಸುವ ಅಭ್ಯಾಸವನ್ನು ಹೊಂದಿರುತ್ತಾರೆ. ಆದರೆ ಈ ಅಭ್ಯಾಸದಿಂದ ಹಲವು ಕಾಯಿಲೆಗಳು ಕೂಡ ಬರುವ ಸಾಧ್ಯತೆಯಿದೆ ಅದು ಯಾವುದು ಎಂದು ನೋಡುವುದಾದರೆ.

ಹೃದಯ ಸಂಬಂಧಿ ಸಮಸ್ಯೆ: ಬಿಗಿಯಾದ ಸಾಕ್ಸ್ ಧರಿಸಿ ಮಲಗಿದರೆ ಪಾದಗಳಲ್ಲಿನ ಶಾಖ ಹಾಗೆಯೇ ಉಳಿಯುತ್ತದೆ ಎಂದು ಹೆಚ್ಚಿನವರು ಭಾವಿಸುತ್ತಾರೆ. ತಜ್ಞರ ಪ್ರಕಾರ, ಹೀಗೆ ಮಾಡುವುದರಿಂದ ಹೃದಯದ ಆರೋಗ್ಯಕ್ಕೆ ಸಂಬಂಧಿಸಿದ ಸಮಸ್ಯೆಗಳಿಗೆ ಕಾರಣವಾಗಬಹುದು. ಬಿಗಿಯಾದ ಸಾಕ್ಸ್ ಧರಿಸುವುದರಿಂದ ರಕ್ತನಾಳಗಳ ಮೇಲೆ ಒತ್ತಡ ಹೆಚ್ಚಾಗುತ್ತದೆ ಮತ್ತು ಇದರಿಂದಾಗಿ ರಕ್ತದ ಹರಿವಿನ ಮೇಲೆ ಪರಿಣಾಮ ಬೀರುತ್ತದೆ ಎಂದು ಹೇಳಲಾಗುತ್ತದೆ. ಅಂತಹ ಪರಿಸ್ಥಿತಿಯಲ್ಲಿ, ಹೃದಯವು ಪಂಪ್ ಮಾಡಲು ಇನ್ನೂ ಹೆಚ್ಚಿನ ಪ್ರಯತ್ನವನ್ನು ಮಾಡಬೇಕಾಗುತ್ತದೆ. ಹೃದ್ರೋಗಗಳು ನಿಮ್ಮಿಂದ ದೂರವಿರಲು ಸಡಿಲವಾದ ಅಥವಾ ಹಗುರವಾದ ಸಾಕ್ಸ್ಗಳನ್ನು ಧರಿಸಿ.

ಚರ್ಮ ಸಮಸ್ಯೆಗಳು: ಅನೇಕ ಬಾರಿ ಜನರು ನಿಯಮಿತವಾಗಿ ಬಳಸುವ ಸಾಕ್ಸ್ಗಳನ್ನು ಸ್ವಚ್ಛಗೊಳಿಸುವುದನ್ನು ನಿರ್ಲಕ್ಷ್ಯ ಮಾಡುತ್ತಾರೆ. ಕಾರಣ, ರಾತ್ರಿ ಅಷ್ಟೇ ಬಳಕೆ ಮಾಡುವುದು, ಮನೆ ಹೊರಗೆ ಸಹ ಹೋಗದೇ ಇರುವುದರಿಂದ, ನೈರ್ಮಲ್ಯದ ಅಗತ್ಯ ಬರುವುದಿಲ್ಲ ಎಂಬ ತಪ್ಪು ಕಲ್ಪನೆಯಲ್ಲಿ ಇರುತ್ತಾರೆ. ಇದರಿಂದ, ಅದೇ ಸಾಕ್ಸ್ನ್ ಹೆಚ್ಚು ಬಾರಿ, ಸ್ವಚ್ಛಗೊಳಿಸದೇ ಬಳಸುತ್ತಿರುತ್ತಾರೆ. ಆದರೆ, ಸಾಕ್ಸ್ನಲ್ಲಿ ಸಂಗ್ರಹವಾಗಿರುವ ಧೂಳು ಮತ್ತು ಮಣ್ಣು ಆರೋಗ್ಯದ ಮೇಲೆ ಕೆಟ್ಟ ಪರಿಣಾಮ ಬೀರುತ್ತದೆ ಮತ್ತು ಇದರಿಂದಾಗಿ ಚರ್ಮಕ್ಕೆ ಸಂಬಂಧಿಸಿದ ಹಲವಾರು ಸಮಸ್ಯೆಗಳು ಉಂಟಾಗಬಹುದು.

ದೇಹತೆ ಉಷ್ಣತೆ ಹೆಚ್ಚಳ: ನಿದ್ದೆ ಮಾಡುವಾಗ ಸಾಕ್ಸ್ ಧರಿಸುವುದರಿಂದ ಅವರಿಗೆ ಉಷ್ಣತೆ ಸಿಗುವುದು ಎಂದು ಜನರು ಭಾವಿಸುತ್ತಾರೆ. ಆದರೆ ಕೆಲವೊಮ್ಮೆ ಈ ಶಾಖವು ಹಾನಿಕಾರಕವೆಂದು ಸಾಬೀತಾಗಿದೆ. ಇದು ದೇಹದ ಉಷ್ಣತೆಯನ್ನು ತುಂಬಾ ಹೆಚ್ಚಿಸಬಹುದು. ಅಗತ್ಯಕ್ಕಿಂತ ದೇಹದ ತಾಪ ಹೆಚ್ಚಾಗುವುದು ಚಂಚಲತೆ ಸೇರಿದಂತೆ ನಾನಾ ಸಮಸ್ಯೆಗಳಿಗೆ ಕಾರಣವಾಗಬಹುದು. ಆದ್ದರಿಂದ ರಾತ್ರಿ ಮಲಗುವಾಗ ಸಾಕ್ಸ್ ಧರಿಸುವ ತಪ್ಪನ್ನು ಮಾಡಬೇಡಿ. ಒಂದು ವೇಳೆ ಧರಿಸಿದ್ದರೂ, ಉಷ್ಣತೆ ಹೆಚ್ಚಾಗುತ್ತಿರುವ ಅನುಭವ ನಿಮಗಾದ ತಕ್ಷಣ ಸಾಕ್ಸ್ ತೆಗೆಯಿರಿ.

ರಕ್ತ ಪರಿಚಲನೆಗೆ ಅಡ್ಡಿ:
ರಾತ್ರಿ ಮಲಗುವಾಗ ಬಿಗಿಯಾದ ಸಾಕ್ಸ್ ಧರಿಸಿದರೆ ಕಾಲಿನ ಅಡಿಭಾಗ ಮತ್ತು ಪಾದಗಳ ನಡುವಿನ ರಕ್ತ ಸಂಚಾರದ ಮೇಲೆ ಪರಿಣಾಮ ಬೀರುತ್ತದೆ ಎಂದು ಹೇಳಲಾಗುತ್ತದೆ. ಇದರಿಂದ ನೀವು ಜುಮ್ಮೆನಿಸುವಿಕೆ ಅಥವಾ ಒತ್ತಡವನ್ನು ಅನುಭವಿಸಬಹುದು. ವರದಿಗಳ ಪ್ರಕಾರ, ಇದು ಪಾದಗಳಲ್ಲಿ ಬಿಗಿತವನ್ನು ಉಂಟುಮಾಡಬಹುದು. ಆದ್ದರಿಂದ ರಾತ್ರಿ ಮಲಗುವಾಗ ಸಾಕ್ಸ್ ಧರಿಸಬೇಡಿ, ಬದಲಾಗಿ, ಸ್ವಲ್ಪ ಎಣ್ಣೆಯನ್ನು ಕಾಲಿನಡಿ ಹಚ್ಚಿಕೊಂಡು ಮಲಗಬಹುದು