Smart Card for Mysore Chamundi Darshan: What’s the Benefit? Here is the information.
Mysore: ನಾಡದೇವತೆ ಚಾಮುಂಡೇಶ್ವರಿ ತಾಯಿಯ ದರ್ಶನ ಪಡೆಯಲು ಸ್ಮಾರ್ಟ್ ಕಾರ್ಡ್ (Smart Card) ವ್ಯವಸ್ಥೆ ಜಾರಿಗೆ ತರಲು ಶ್ರೀ ಚಾಮುಂಡೇಶ್ವರಿ ಕ್ಷೇತ್ರ ಅಭಿವೃದ್ಧಿ ಪ್ರಾಧಿಕಾರವು ಮುಂದಾಗಿದೆ. ಇದರಿಂದಾಗಿ ಭಕ್ತರು ಸರತಿ ಸಾಲಿನಲ್ಲಿ ಹೆಚ್ಚು ಹೊತ್ತು ಕಾಯದೇ ನೇರವಾಗಿ ಚಾಮುಂಡೇಶ್ವರಿ ತಾಯಿಯ ದರ್ಶನ ಪಡೆಯಲು ಸಾಧ್ಯವಾಗಲಿದೆ.
‘ಶಕ್ತಿ ಯೋಜನೆ’ (Shakti Scheme) ಜಾರಿಗೊಂಡ ಬಳಿಕ ಚಾಮುಂಡೇಶ್ವರಿ ತಾಯಿಯ ದರ್ಶನ ಪಡೆಯಲು ಬರುವ ಭಕ್ತರ ಸಂಖ್ಯೆ ಸಾಕಷ್ಟು ಹೆಚ್ಚಾಗಿದೆ. ವಾರಾಂತ್ಯದಲ್ಲಂತೂ ದೇವಿ ದರ್ಶನಕ್ಕೆ ಜನ ಮುಗಿಬೀಳುತ್ತಾರೆ. ಹೀಗಾಗಿ ದರ್ಶನ ಸುಲಭವಾಗಬೇಕೆಂಬ ಉದ್ದೇಶದಿಂದ ‘ಸ್ಮಾರ್ಟ್ ಕಾರ್ಡ್’ ಯೋಜನೆ ಜಾರಿಗೆ ತರಲು ತೀರ್ಮಾನಿಸಲಾಗಿದೆ.
ಏನಿದು ಸ್ಮಾರ್ಟ್ಕಾರ್ಡ್ ಯೋಜನೆ?:
ಚಾಮುಂಡಿ ಬೆಟ್ಟಕ್ಕೆ ಬರುವ ಭಕ್ತಾಧಿಗಳು ಕ್ಯೂಆರ್ ಕೋಡ್ (QR Code)ಬಳಸಿ ಹಣ ಪಾವತಿಸಿ ಸ್ಮಾರ್ಟ್ಕಾರ್ಡ್ ಪಡೆಯಬಹುದು. ವರ್ಷದಲ್ಲಿ ಎಷ್ಟು ಬಾರಿ ದರ್ಶನ ಪಡೆಯಬಹುದು ಎಂಬ ಮಾಹಿತಿ ಕಾರ್ಡ್ನಲ್ಲಿ ನಮೂದಿಸಲಾಗಿರುತ್ತದೆ.
ವಿವಿಧ ದರ ನಿಗದಿ:
• 12 ಸಾವಿರ ರೂಪಾಯಿ ಪಾವತಿಸಿ ಸ್ಮಾರ್ಟ್ಕಾರ್ಡ್ ಪಡೆದರೆ ವರ್ಷದಲ್ಲಿ 12 ಬಾರಿ ಒಬ್ಬರು ಮಾತ್ರ ದರ್ಶನ ಪಡೆಯಲು ನೇರ ಪ್ರವೇಶವಿರುತ್ತದೆ. ಜೊತೆಗೆ ಒಂದು ಲಾಡು ನೀಡಲಾಗುತ್ತದೆ.
• 25 ಸಾವಿರ ರೂಪಾಯಿ ಪಾವತಿಸಿ ಸ್ಮಾರ್ಟ್ ಕಾರ್ಡ್ ಪಡೆದರೆ ಇಬ್ಬರು ವರ್ಷದಲ್ಲಿ 12 ಬಾರಿ ಬೆಟ್ಟಕ್ಕೆ ಬರಬಹುದು. ಅವರಿಗೆ 2 ಲಾಡು ಪ್ರಸಾದವಾಗಿ ಕೊಡಲಾಗುತ್ತದೆ.
• 50 ಸಾವಿರ ರೂಪಾಯಿ ಪಾವತಿಸಿ ಸ್ಮಾರ್ಟ್ ಕಾರ್ಡ್ ಪಡೆದರೆ 5 ಜನರಿಗೆ ನೇರ ಪ್ರವೇಶವಿದ್ದು, ತಲಾ 5 ಲಾಡು, ಅಭಿಷೇಕ ಹಾಗೂ ಪಂಚಾಮೃತ ಪ್ರಸಾದ ನೀಡಲಾಗುತ್ತದೆ.
• 1 ಲಕ್ಷ ರೂಪಾಯಿ ಪಾವತಿಸಿ ಸ್ಮಾರ್ಟ್ ಕಾರ್ಡ್ ಪಡೆದರೆ 10 ಜನರಿಗೆ ಪ್ರವೇಶವಿದ್ದು, ಅವರ ಹೆಸರಿನಲ್ಲಿ ವಿಶೇಷ ಪೂಜಾ ಕಾರ್ಯ ನೆರವೇರಿಸಲಾಗುತ್ತದೆ. ಜೊತೆಗೆ ಪಂಚಾಮೃತ ಪ್ರಸಾದ ಮತ್ತು ತಲಾ 10 ಲಾಡುಗಳನ್ನು ನೀಡಲಾಗುತ್ತದೆ.
Smart Card for Mysore Chamundi Darshan kannada viral
Mysore: Shree Chamundeshwari Kshetra Development Authority has come forward to implement Smart Card system to get darshan of Goddess Chamundeshwari Mother. Due to this, the devotees will be able to have darshan of Mother Chamundeshwari directly without waiting in the queue for a long time.
After the implementation of ‘Shakti Scheme’, the number of devotees coming to have darshan of Mother Chamundeshwari has increased considerably. People flock to see the goddess even on weekends. Therefore, it has been decided to implement the ‘Smart Card’ scheme with the aim of making Darshan easy.
What is Smartcard Scheme?:
Devotees who come to Chamundi hill can pay using QR code and get smart card. The information about how many times a year can be visited is mentioned in the card.
Various Tariffs:
- If you pay 12 thousand rupees and get a smart card, you will have direct access to get darshan only 12 times in a year. A ladu is also served.
- If you pay 25 thousand rupees and get a smart card, two people can visit the hill 12 times in a year. They are given 2 ladus as prasad.
- If you pay 50 thousand rupees and get a smart card, 5 people will have direct access and each will be given 5 ladus, abhisheka and panchamrita prasad.
- If you get a smart card by paying 1 lakh rupees, 10 people will be admitted and special pooja will be performed in their name. Panchamrita prasada and 10 lads each are also served.