Bengaluru : ಕರ್ನಾಟಕದ(Karnataka) ಮಾಜಿ ಮುಖ್ಯಮಂತ್ರಿ ಮತ್ತು ಕೇಂದ್ರ ಮಾಜಿ ವಿಧಾನ ಸಚಿವ ಎಸ್ಎಂ ಕೃಷ್ಣ(SMKrishna retired from politics) ಅವರು ಜನವರಿ 5ರಂದು ಸಕ್ರಿಯ ರಾಜಕೀಯಕ್ಕೆ ನಿವೃತ್ತಿ ಘೋಷಿಸಿದ್ದಾರೆ.

ಎಸ್ಎಂ ಕೃಷ್ಣ ಅವರ ಈ ನಿರ್ಧಾರಕ್ಕೆ ಕಾಂಗ್ರೆಸ್ ತಮ್ಮ ಟ್ವೀಟರ್ ಖಾತೆಯಲ್ಲಿ “ಕಾಂಗ್ರೆಸ್ನಲ್ಲಿ ಅಗ್ರಗಣ್ಯ ನಾಯಕರಾಗಿದ್ದ ಎಸ್ಎಂ ಕೃಷ್ಣ ರವರನ್ನು ಬೀದಿಗೆ ತಂದು ಅವಮಾನಿಸಿದ ಕೀರ್ತಿ ಬಿಜೆಪಿಗೆ ಸಲ್ಲುತ್ತದೆ “ಎಂದು ಟ್ವೀಟ್(Tweet) ನಲ್ಲಿ ಪ್ರತಿಕ್ರಿಯೆ ನೀಡಿರುವ ಮೂಲಕ ಆರೋಪಿಸಿದ್ದಾರೆ.
ಅದಲ್ಲದೆ “ಹಿರಿಯ ನಾಯಕ ಮಾಜಿ ಸಿಎಂ ಬಳಿ ಆಡಳಿತಾತ್ಮಕ ಸಲಹೆ ಕೇಳುವ ಮನಸ್ಸು ಬಿಜೆಪಿ(SMKrishna retired from politics) ಗರಿಗೆ ಇಲ್ಲ, ಅವರ ಸಲಹೆ ಬಿಜೆಪಿಗೆ ಬೇಕಾಗಿಯೂ ಇಲ್ಲ,
ಬಿಜೆಪಿ ಸಿದ್ಧಾಂತಗಳು ಕೃಷ್ಣರಿಗೆ ಅಪಥ್ಯವಾದವೇ? ಅಥವಾ ಕೃಷ್ಣರೇ ಬಿಜೆಪಿಗೆ ಅಪಥ್ಯವಾದರೇ? ಎಂದು ಕಾಂಗ್ರೆಸ್ ಪ್ರಶ್ನೆ ಮಾಡಿದೆ.
ಇದನ್ನೂ ಓದಿ : https://vijayatimes.com/siddaramaiah-hit-back-bjp-leaders/
ಎಸ್ಎಂ ಕೃಷ್ಣ ರವರು, ವಯಸ್ಸಿನ ಅರಿವು ನಮಗಿರಬೇಕು, 90ರ ಈ ವಯಸ್ಸಿನಲ್ಲಿ 50 ವರ್ಷದ ರೀತಿಯಲ್ಲಿ ನಟನೆ ಮಾಡಲು ಆಗುವುದಿಲ್ಲ.
ಹೀಗಾಗಿ ನನಗೆ 90 ವರ್ಷ ವಯಸ್ಸು ದಾಟಿರುವುದರಿಂದ ಸಕ್ರಿಯ ರಾಜಕಾರಣದಲ್ಲಿ ಇರಲು ಬಯಸುವುದಿಲ್ಲ.
ನಾನು ಸಾರ್ವಜನಿಕ ಜೀವನದಿಂದ ದೂರ ಇರಬೇಕು ಎಂದು ತೀರ್ಮಾನ ಮಾಡಿದ್ದೇನೆ ಎಂದು ನಿನ್ನೆಯೇ ಈ ಕುರಿತು ಎಸ್‌ಎಂ ಕೃಷ್ಣ ಸುಳಿವು ನೀಡಿದ್ದರು
ಅದರಂತೆ ಇಂದು ರಾಜಕೀಯದಿಂದ ನಿವೃತ್ತಿ ಪಡೆದಿದ್ದಾರೆ.
ಸಂಪೂರ್ಣವಾಗಿ ನಾನು ರಾಜಕೀಯದಿಂದ ನಿವೃತ್ತಿ ಪಡೆಯುತ್ತೇನೆ ಎಂದು ಹೇಳುವುದಿಲ್ಲ. ಪಕ್ಷ ಇಲ್ಲವೆ ,ನಾಯಕರಿಗೆ ಬೇಕಾದ ಸಲಹೆ ನೀಡುವೆ ಎಂದಿದ್ದಾರೆ.
“ಹಳೆ ಮೈಸೂರು(Mysore) ಭಾಗದಲ್ಲಿ ಪಕ್ಷದ ಸಂಘಟನೆಯ ಕುರಿತು ಸಲಹೆ ಕೇಳಿದರೆ ಕೊಡುತ್ತೇನೆ. ಮೀಸಲಾತಿ ವಿಚಾರವಾಗಿಯೂ ಸಲಹೆ ಕೇಳಿದರೆ ನೀಡುವೆ.
ನಾನಾಗಿಯೇ ಸಲಹೆ ಕೊಡಲು ಮುಂದಕ್ಕೆ ಹೋಗುವುದಿಲ್ಲʼʼ ಎಂದು ಅವರು ಈ ಸಂದರ್ಭದಲ್ಲಿ ಸ್ಪಷ್ಟಪಡಿಸಿದ್ದಾರೆ.

ನಿವೃತ್ತಿ ವಿಚಾರವಾಗಿ ಬಿಜೆಪಿಯು ಎಸ್‌ಎಂ ಕೃಷ್ಣರನ್ನು ಕಡೆಗಣಿಸುತ್ತಿದೆಯೇ ಎಂಬ ಪ್ರಶ್ನೆಗೆ ಉತ್ತರಿಸಿದ್ದಾರೆ. ನಾನೇ ನಿವೃತ್ತಿ ಆಗುತ್ತಿರುವಾಗ ಕಡೆಗಣಿಸುವ ಪ್ರಶ್ನೆ ಉದ್ಭವಿಸುದಿಲ್ಲ, ರಾಜಕೀಯದಲ್ಲಿ ಯಾರೂ ಪಿಂಚಣಿ ನೀಡುವುದಿಲ್ಲ. ಹೀಗಾಗಿ, ನಿವೃತ್ತಿ ವಿಷಯವನ್ನು ಹೈಕಮಾಂಡ್ ಗಮನಕ್ಕೆ ತರುವ ಅವಶ್ಯಕತೆ ಇರುವುದಿಲ್ಲ ಈ ಮೂಲಕ ಸ್ಪಷ್ಟಪಡಿಸಿದ್ದಾರೆ.
- ಪಂಕಜಾ. ಎಸ್