Viral : ಐಎಫ್ಎಸ್ ಅಧಿಕಾರಿ ಸುಸಂತ ನಂದಾ ಅವರು ಇತ್ತೀಚೆಗೆ ನಾಗರ ಹಾವನ್ನು ವ್ಯಕ್ತಿಯೊಬ್ಬರು ಸೆರೆಹಿಡಿದ ವೀಡಿಯೊವನ್ನು ತಮ್ಮ ಟ್ವಿಟರ್(Snake Catching Video Viral) ಖಾತೆಯಲ್ಲಿ ಹಂಚಿಕೊಂಡಿದ್ದಾರೆ.
ಸ್ಕೂಟರ್ನೊಳಗೆ ಅಡಗಿ ಕುಳಿತ್ತಿದ್ದ ನಾಗರಹಾವನ್ನು ಹೊರತೆಗೆಯಲು ವ್ಯಕ್ತಿಯೊಬ್ಬರು ಹಾವು ಹಿಡಿಯಲು ಯಾವುದೇ ಉಪಕರಣಗಳನ್ನು ಬಳಸದೇ ಬರಿಗೈಯಲ್ಲಿ ಹಾವನ್ನು ಹಿಡಿದಿರುವ ದೃಶ್ಯಾವಳಿ ಇದೀಗ ಸಿಕ್ಕಾಪಟ್ಟೆ ವೈರಲ್(Snake Catching Video Viral) ಆಗಿದೆ.
ಸ್ಕೂಟಿ ಸೇರಿದಂತೆ ಗಾಡಿಗಳು ಹಾವುಗಳಿಗೆ ಉಷ್ಣಾಂಶದಲ್ಲಿ ನಿದ್ರಿಸಲು ಸೂಕ್ತವಾಗಿರುವ ಕಾರಣ,
ಇದನ್ನೂ ಓದಿ : https://vijayatimes.com/gandadagudi-box-office-collection/
ಅವು ಹೆಚ್ಚಾಗಿ ಸ್ಕೂಟರ್, ಕಾರಿನ ಬಾನೆಟ್ ಜಾಗಗಳನ್ನು ಹುಡುಕುತ್ತದೆ. ಹಾವನ್ನು ಹಿಡಿಯುವ ಬಗ್ಗೆ ತರಬೇತಿ ಪಡೆದ ವ್ಯಕ್ತಿಯೇ ಈ ಹಾವನ್ನು ಬರಿಗೈಯಲ್ಲಿ ಹಿಡಿದಿದ್ದಾರೆ.
ನುರಿತ ತಜ್ಞರು ಮಾತ್ರ ಹಾವು(Snake) ಹಿಡಿಯುವುದು ಉತ್ತಮ ಮತ್ತು ಈ ರೀತಿಯ ಸಾಹಸಗಳನ್ನು ನೀವು ಎಂದಿಗೂ ಪ್ರಯತ್ನಿಸಬೇಡಿ ಎಂದು ನಂದಾ ಅವರು ತಾವು ಹಾಕಿರುವ ವೀಡಿಯೊದಲ್ಲಿ ಬರೆದು ಎಚ್ಚರಿಕೆ ಕೊಟ್ಟಿದ್ದಾರೆ.

ಸ್ಕೂಟರ್ನ ಇಂಜಿನ್ ಬಳಿ ನಾಗರ ಹಾವು, ಜೋರಾಗಿ ಉಸಿರಾಡುವಾಗ ಒಳಗೆ ಹಾವಿರುವುದು ತಿಳಿದುಬಂದಿದೆ ಎನ್ನಲಾಗಿದೆ. ಈ ವೀಡಿಯೊವನ್ನು ಒಂದು ದಿನದ ಹಿಂದೆ ಹಂಚಿಕೊಳ್ಳಲಾಗಿದ್ದು, ಟ್ವಿಟರ್ ನಲ್ಲಿ ಹೆಚ್ಚು ಹರಿದಾಡಿದೆ.
ವೀಡಿಯೋ ಪೋಸ್ಟ್ ಆದ ಕೆಲವೇ ಕ್ಷಣಗಳಲ್ಲಿ, ಕ್ಲಿಪ್ ಸುಮಾರು 45,000 ವೀಕ್ಷಣೆಯಾಗಿತ್ತು ಮತ್ತು ಇನ್ನು ಹೆಚ್ಚು ವೀಕ್ಷಣೆ ಪಡೆದುಕೊಂಡುತು.
https://twitter.com/susantananda3/status/1588140715246178307?s=20&t=5V8fcoe9Q0oDZzkBJnZgXQ
ಈ ವೀಡಿಯೊಗೆ ಸುಮಾರು ಹಂಚಿಕೆ, 1,100 ಲೈಕ್ಗಳನ್ನು ಬಂದಿವೆ. ಕೆಲ ನೆಟ್ಟಿಗರು ಹಾವು ಹಿಡಿದ ವ್ಯಕ್ತಿಯ ದೈರ್ಯಕ್ಕೆ, ಸುರಕ್ಷಿತವಾಗಿ ಸೆರೆಹಿಡಿದಿದ್ದಕ್ಕೆ ಧನ್ಯವಾದ ತಿಳಿಸಿದರೆ,
ಇನ್ನು ಕೆಲವರು ಬರಿಗೈಯಲ್ಲಿ ಹಿಡಿಯುವುದು ಹುಚ್ಚು ಸಾಹಸ! ಈ ರೀತಿ ಯಾರ ಪ್ರಯತ್ನಿಸಬೇಡಿ ಎಂದು ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.