Islamabad: ರಂಜಾನ್ ತಿಂಗಳಲ್ಲಿ ದ್ವೇಷಕಾರ ಮಾಹಿತಿಗಳು, ವಿಡಿಯೋ, ಫೋಟೋಗಳು, ಸಂದೇಶ ಹರಡದಂತೆ ತಡೆಯಲು ಪಾಕಿಸ್ತಾನ (Pakistan) ಸರ್ಕಾರ ಮುಂದಾಗಿದ್ದು ಜುಲೈ 13ರಿಂದ 18ರ ವರೆಗೆ ಪಾಕಿಸ್ತಾನದಲ್ಲಿ ಸೋಶಿಯಲ್ ಮೀಡಿಯಾಗೆ ನಿರ್ಬಂಧ ವಿಧಿಸಲಾಗಿದೆ.ಕಳೆದ ನಾಲ್ಕು ತಿಂಗಳಿಂದ ಎಕ್ಸ್( ಟ್ವಿಟರ್) ನಿಷೇಧಿಸಿರುವ ಪಾಕಿಸ್ತಾನ ಇದೀಗ ಎಲ್ಲಾ ಸಾಮಾಜಿಕ ಮಾಧ್ಯಮಗಳನ್ನು 6 ದಿನಗಳ ಬ್ಯಾನ್ ಮಾಡಿದೆ. ಫೇಸ್ಬುಕ್, ವ್ಯಾಟ್ಸಾಪ್, ಇನ್ಸ್ಟಾಗ್ರಾಂ, ಟಿಕ್ಟಾಕ್, ಯೂಟ್ಯೂಬ್ (Facebook, WhatsApp, Instagram, Tiktok, YouTube)ಸೇರಿದಂತೆ ಎಲ್ಲಾ ಸೋಶಿಯಲ್ ಮೀಡಿಯಾ ಮುಂದಿನ 6 ದಿನ ಸಂಪೂರ್ಣ ಬಂದ್ ಮಾಡಿದ್ದು ರಂಜಾನ್ ತಿಂಗಳ ಪಾವಿತ್ರ್ಯತೆ ಕಾಪಾಡಲು ಇದು ಅತ್ಯವಶ್ಯಕ ಎಂದು ಮರಿಯಮ್ ನವಾಜ್ ಹೇಳಿದ್ದಾರೆ.

ಪಾಕಿಸ್ತಾನದ ಪಂಜಾಬ್ ಪ್ರಾಂತ್ಯದ ಮುಖ್ಯಮಂತ್ರಿ ಮರಿಯಮ್ ನವಾಜ್ (Maryam Nawaz) ಸೋಶಿಯಲ್ ಮೀಡಿಯ ಬ್ಯಾನ್ ಬಗ್ಗೆ ಈ ಹಿಂದೆಯೂ ಆಸಕ್ತಿ ಹೊಂದಿದ್ದರು. ಪಂಜಾಬ್ ಪ್ರಾಂತ್ಯದಲ್ಲಿ ರಂಜಾನ್ ತಿಂಗಳಲ್ಲಿ ದ್ವೇಷಕಾರ ಮಾಹಿತಿಗಳು, ಸಂದೇಶಗಳು, ವಿಡಿಯೋಗಳನ್ನು ಹರಡುವುದು ಹೆಚ್ಚಾಗುತ್ತಿದೆ. ಇದರಿಂದ ರಂಜಾನ್ ತಿಂಗಳಲ್ಲಿ ಶಾಂತಿ ಸುವ್ಯವಸ್ಥೆಗೆ ಅಡ್ಡಿಯಾಗುತ್ತಿದೆ. ಜೊತೆಗೆ ಪವಿತ್ರ ತಿಂಗಳಲ್ಲಿ ಈ ರೀತಿಯ ಘಟನೆಗೆ ಅವಕಾಶ ನೀಡದಂತೆ ತಡೆಯಲು ಈ ಕ್ರಮಕೈಗೊಂಡಿದೆ. ಜುಲೈ (July) 4ರ ತಡ ರಾತ್ರಿ ಪಂಜಾಬ್ ಪ್ರಾವಿನ್ಸ್ ಮುಖ್ಯಮಂತ್ರಿ ಈ ಆದೇಶ ಹೊರಡಿಸಿದ್ದಾರೆ. ಹಾಗಾಗಿ ಪಾಕಿಸ್ತಾನಿ ಪ್ರಜೆಗಳು 6 ದಿನಗಳ ಕಾಲ ಸೋಷಿಯಲ್ ಮೀಡಿಯಾ ಬಳಸುವಂತಿಲ್ಲ.
ಇನ್ನು ಇತ್ತೀಚೆಗೆ ಪಾಕಿಸ್ತಾನದ ಉಪ ಪ್ರಧಾನಿ ಇಶಾಖ್ ಧಾರ್ ಸಂಪೂರ್ಣವಾಗಿ ಸಾಮಾಜಿಕ ಮಾಧ್ಯಮಗಳನ್ನು ನಿಷೇಧಿಸುವ ಮಾತನಾಡಿದ್ದರು. ಸೋಶಿಯಲ್ ಮೀಡಿಯಾ (Social Media) ದಿಂದ ಪಾಕಿಸ್ತಾನದ ಭದ್ರತೆಗೆ ಅಪಾಯ ಹೆಚ್ಚಿದೆ. ಭಯೋತ್ಪಾದಕೆ, ಗಡಿ ಪ್ರದೇಶದಲ್ಲಿನ ಸಮಸ್ಯೆಗಳು ತೀವ್ರಗೊಳ್ಳುತ್ತಿರುವುದಕ್ಕೆ ಸಾಮಾಜಿಕ ಮಾಧ್ಯಮಗಳು ಕಾರಣವಾಗುತ್ತಿದೆ ಎಂದು ಹರಿಹಾಯ್ದಿದ್ದಾರೆ.
ಇದನ್ನೆಲ್ಲ ನೋಡುತ್ತಿದ್ದರೆ ಶಾಂತಿಯ ಕಾರಣವನ್ನು ನೀಡಿ ಸೋಷಿಯಲ್ ಮೀಡಿಯಾಗಳಿಂದ ಜನರನ್ನು ದೂರವಿರುಸುವ ಪ್ರಯತ್ನ ಮಾಡಿದ್ದಾರೆ ಎಂದೆನಿಸುತ್ತದೆ.ಇದೀಗ ಹಂತ ಹಂತವಾಗಿ ಪಾಕಿಸ್ತಾನದಲ್ಲಿ ಸೋಶಿಯಲ್ ಮೀಡಿಯಾ ಕೂಡ ಸದ್ಯದಲ್ಲೇ ಸಂಪೂರ್ಣ ನಿಷೇಧವಾಗುವ ಲಕ್ಷಣಗಳು ಗೋಚರಿಸುತ್ತಿದೆ.