vijaya times advertisements
Visit Channel

ಇಸ್ರೋದ ನೂತನ ಅಧ್ಯಕ್ಷ ಸೋಮನಾಥ್‌ ಅವರ ಹಿನ್ನೆಲೆ ಏನು ?

somnath

ಬೆಂಗಳೂರು ಜ 13 : ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆಯ ನೂತನ ಅಧ್ಯಕ್ಷರಾಗಿ  ಸೋಮನಾಥ್‌ ಅವರು ಆಯ್ಕೆಯಾಗಿದ್ದಾರೆ.  ಇಸ್ರೋ ಅಧ್ಯಕ್ಷ ಕೆ.ಶಿವನ್ ಅವರ ಅಧಿಕಾರಾವಧಿ ಮುಕ್ತಾಯಗೊಂಡಿದೆ. ಅವರ ಸ್ಥಾನಕ್ಕೆ ಹಿರಿಯ ವಿಜ್ಞಾನಿ ಎಸ್.ಸೋಮನಾಥ ನೇಮಕಗೊಂಡಿದ್ದಾರೆ. ಇಸ್ರೋ ಅಧ್ಯಕ್ಷರಾಗಿರುವುದರ ಜೊತೆಗೆ, ಬಾಹ್ಯಾಕಾಶ ಇಲಾಖೆಯ ಕಾರ್ಯದರ್ಶಿ ಮತ್ತು ಬಾಹ್ಯಾಕಾಶ ಆಯೋಗದ ಅಧ್ಯಕ್ಷರಾಗಿ ಮುಂದಿನ ಮೂರು ವರ್ಷಗಳ ಕಾಲ ಕಾರ್ಯ ನಿರ್ವಹಿಸಲಿದ್ದಾರೆ.

2018ರಿಂದಲೂ ವಿಕ್ರಮ್ ಸಾರಾಭಾಯ್ ಬಾಹ್ಯಾಕಾಶ ಕೇಂದ್ರದ ನಿರ್ದೇಶಕರಾಗಿ ಸೇವೆ ಸಲ್ಲಿಸುತ್ತಿರುವ ಸೋಮನಾಥ ಲಿಕ್ವಡ್‌ ಪ್ರಪಲ್ಶನ್‌ ಸಿಸ್ಟೆಮ್ಸ್‌ (Liquid Propulsion Systems) ಸೆಂಟರ್‌ನ ನಿರ್ದೇಶಕರಾಗಿ ಸೇವೆ ಸಲ್ಲಿಸಿದ್ದಾರೆ.

ಜುಲೈ 1963 ರಲ್ಲಿ ಜನಿಸಿದ ಸೋಮನಾಥ್, ಕೇರಳ ವಿಶ್ವವಿದ್ಯಾನಿಲಯದಿಂದ ಮೆಕ್ಯಾನಿಕಲ್ ಇಂಜಿನಿಯರಿಂಗ್‌ನಲ್ಲಿ ಪದವಿ ಪಡೆದರುಕೊಲ್ಲಂನ TKM ಕಾಲೇಜ್ ಆಫ್ ಇಂಜಿನಿಯರಿಂಗ್‌ನಿಂದ ಮೆಕ್ಯಾನಿಕಲ್ ಇಂಜಿನಿಯರಿಂಗ್‌ನಲ್ಲಿ ಪದವೀಧರರು ಹಾಗೂ ಬೆಂಗಳೂರಿನ ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಸೈನ್ಸ್‌ನಿಂದ ಏರೋಸ್ಪೇಸ್ ಎಂಜಿನಿಯರಿಂಗ್‌ನಲ್ಲಿ ಚಿನ್ನದ ಪದಕದೊಂದಿಗೆ ಸ್ನಾತಕೋತ್ತರ ಪದವಿ ಪಡೆದಿದ್ದಾರೆ. ಬೆಂಗಳೂರಿನ ಇಂಡಿಯನ್ ಇನ್‍ಸ್ಟಿಟ್ಯೂಟ್ ಆಫ್ ಸೈನ್ಸ್ ಹಳೆಯ ವಿದ್ಯಾರ್ಥಿಯಾಗಿರುವ ಸೋಮನಾಥ 1985ರಲ್ಲಿ ಇಸ್ರೋಗೆ ಸೇರಿದರು ಮತ್ತು ಪೋಲಾರ್ ಸ್ಯಾಟಲೈಟ್ ಲಾಂಚ್ ವೆಹಿಕಲ್ ಮತ್ತು ಜಿಯೋ ಸಿಂಕ್ರೋನೈಸ್ ಸ್ಯಾಟಲೈಟ್ ಲಾಂಚ್ ವೆಹಿಕಲ್ ಯೋಜನೆಗಳಲ್ಲಿ ಕೆಲಸ ಮಾಡಿದ್ದಾರೆ. 2015ರಲ್ಲಿ, ಇಸ್ರೋದ ಲಿಕ್ವಿಡ್ ಪ್ರೊಪಲ್ಷನ್ ಸಿಸ್ಟಮ್ಸ್ ಸೆಂಟರ್ (LPSC), ತಿರುವನಂತಪುರಂನ ನಿರ್ದೇಶಕರಾಗಿ ಕಾರ್ಯನಿರ್ವಹಿಸಿದ್ದಾರೆ. ಜೂನ್ 2010 ರಿಂದ 2014 ರವರೆಗೆ GSLV Mk-III ನ ಯೋಜನಾ ನಿರ್ದೇಶಕರಾಗಿದ್ದರು. ಅವರು VSSC ಯಲ್ಲಿನ ‘ಸ್ಟ್ರಕ್ಚರ್ಸ್’ ಘಟಕದ ಉಪ ನಿರ್ದೇಶಕರಾಗಿ ಕಾರ್ಯನಿರ್ವಹಿಸಿದ್ದಾರೆ.

ಅವರು ಆಸ್ಟ್ರೋನಾಟಿಕಲ್ ಸೊಸೈಟಿ ಆಫ್ ಇಂಡಿಯಾ (ASI)ದಿಂದ ಚಿನ್ನದ ಪದಕ, ಪರ್ಫಾರ್ಮೆನ್ಸ್ ಎಕ್ಸಲೆನ್ಸ್ ಅವಾರ್ಡ್-2014 ಮತ್ತು ಇಸ್ರೋದಿಂದ GSLV Mk-III ಸಾಕ್ಷಾತ್ಕಾರಕ್ಕಾಗಿ ಟೀಮ್ ಎಕ್ಸಲೆನ್ಸ್ ಅವಾರ್ಡ್-2014 ಪಡೆದಿದ್ದಾರೆ

Latest News

ಪ್ರಮುಖ ಸುದ್ದಿ

220 ಕ್ಕೂ ಅಧಿಕ ಪಿಎಫ್ಐ ಕಾರ್ಯಕರ್ತರ  ಮೇಲೆ  ಪಿಎಆರ್‌ ಕಾಯ್ದೆ ಅಸ್ತ್ರ ; ಏನಿದು ಪಿಎಆರ್?

(PAR Act on PFI workers) ಸ್ಥಿರ ಹಾಗೂ ಚರಾಸ್ತಿ ಮೌಲ್ಯವೆಷ್ಟು ಎಂಬುದನ್ನು ನಮೂದಿಸಿ, ತಾಲೂಕು ದಂಡಾಧಿಕಾರಿಗಳು, ಬಂಧಿತ ವ್ಯಕ್ತಿಯಿಂದ ಮುಚ್ಚಳಿಕೆ ಪಡೆಯುತ್ತಾರೆ.

ದೇಶ-ವಿದೇಶ

ಪಾಕಿಸ್ತಾನಕ್ಕೆ ಎಫ್-16 : ಜೈಶಂಕರ್ ಹೇಳಿಕೆಗೆ ಅಮೇರಿಕಾ  ಪ್ರತಿಕ್ರಿಯೆ

ಸದ್ಯ ಅಮೇರಿಕಾ ಪ್ರವಾಸದಲ್ಲಿರುವ ಭಾರತದ ವಿದೇಶಾಂಗ ಸಚಿವ ಎಸ್‌.ಜೈಶಂಕರ್  ಭಯೋತ್ಪಾದನೆಯ ವಿರುದ್ಧ ಹೋರಾಡಲು ಎಫ್-16 ಯುದ್ದ ವಿಮಾನಗಳನ್ನು ಪಾಕಿಸ್ತಾನಕ್ಕೆ ನೀಡಲಾಗುತ್ತಿದೆ ಎಂಬ ಅಮೇರಿಕಾದ ವಾದವನ್ನು  ತೀವ್ರವಾಗಿ ಟೀಕಿಸಿದ್ದರು.

ಲೈಫ್ ಸ್ಟೈಲ್

ಇಲ್ಲಿವೆ ನೋಡಿ ವಿಚಿತ್ರ ಸಾಕುಪ್ರಾಣಿಗಳು: ಇವುಗಳ ಬಗ್ಗೆ ಕೇಳಿದರೆ ಅಚ್ಚರಿಯಾಗುವುದು ಖಂಡಿತ!

ಸಾಕುಪ್ರಾಣಿಗಳೆಂದರೆ ತಕ್ಷಣ ನೆನಪಿಗೆ ಬರುವುದು, ನಾಯಿ, ಬೆಕ್ಕು, ಮೊಲ, ಗಿಳಿ, ಪಾರಿವಾಳಗಳು ಅಲ್ಲವೇ? ಆದರೆ, ಜಗತ್ತಿನಲ್ಲಿ ಬೇರೆ ಬೇರೆ ಕಡೆ ಎಂತೆಂತಹ ವಿಚಿತ್ರ ಪ್ರಾಣಿಗಳನ್ನು ತಮ್ಮ ಸಾಕುಪ್ರಾಣಿಗಳನ್ನಾಗಿ ಮಾಡಿಕೊಂಡಿದ್ದಾರೆ

Priyank
ರಾಜಕೀಯ

‘ಲಂಚ ಕೊಡಬೇಕಾಗಿಲ್ಲ’ ಅಭಿಯಾನವನ್ನು ವಿಧಾನಸೌಧದಲ್ಲೂ ಮಾಡಿ – ಪ್ರಿಯಾಂಕ್ ಖರ್ಗೆ ಆಗ್ರಹ

ಸರ್ಕಾರಕ್ಕೆ ನಿಜಕ್ಕೂ ಇಚ್ಛಾಶಕ್ತಿ ಇದ್ದಿದ್ದರೆ ತಮ್ಮ ಮೇಲಿನ ಹಗರಣ ಆರೋಪಗಳನ್ನು ನ್ಯಾಯಾಂಗ (No bribe campaign) ತನಿಖೆಗೆ ವಹಿಸುತ್ತಿದ್ದರು.