Karnataka:ಚುನಾವಣೆ ಹತ್ತಿರ ಬರುತ್ತಿದ್ದಂತೆ ಪ್ರಮುಖ ನಾಯಕರ ಕೋಪ ತಾಪಗಳೆಲ್ಲಾ ಜ್ವಾಲಾಮುಖಿಯಂತೆ ಸ್ಪೋಟಗೊಳ್ಳುತ್ತಿದೆ. ಪರಿಣಾಮ ಪಕ್ಷ ಬದಲಾವಣೆ, ಪಕ್ಷದ ವಿರುದ್ಧ ಬಂಡಾಯದ ಸಮರ. ಇಂಥಾ ಕೋಪ ತಾಪ (somanna joining congress) ಶಿಸ್ತಿನ ಪಕ್ಷ ಅಂತ ಕರೆಸಿಕೊಳ್ಳೋ ಬಿಜೆಪಿಯನ್ನೂ ಬಿಟ್ಟಿಲ್ಲ. ಬಿಜೆಪಿಯಲ್ಲೂ ಆಂತರಿಕ ಕಲಹ ಪ್ರಾರಂಭವಾಗಿದೆ.
ಅದರಲ್ಲಿ ಗೋವಿಂದರಾಜ ನಗರ ಶಾಸಕ, ವಸತಿ ಸಚಿವ, ಬಿಜೆಪಿಯ ಹಿರಿಯ ನಾಯಕ ವಿ.ಸೋಮಣ್ಣ(V.Somanna) ಅವರ ಸಿಟ್ಟು ರಟ್ಟಾಗಿದೆ.
ಸೋಮಣ್ಣ ಅವರ ಸಿಟ್ಟನ್ನು ಲಾಭದ ರೊಟ್ಟಿ ಮಾಡಿಕೊಳ್ಳಲು ಕಾಂಗ್ರೆಸ್ ಕಾಯುತ್ತಿದ್ದು, ಹಿರಿಯ ನಾಯಕನನ್ನು ಪಕ್ಷಕ್ಕೆ ಬರುವಂತೆ ಆಫರ್ ನೀಡಿದೆ ಅನ್ನೋದು ಈ ಬಾರೀ ಸದ್ದು ಮಾಡುತ್ತಿರೋ ಸುದ್ದಿ.

ಚಾಮರಾಜನಗರ ಉಸ್ತುವಾರಿ ಸಚಿವರಾಗಿರೋ ವಿ. ಸೋಮಣ್ಣ ಅವರು ತಮ್ಮ ಸಿಟ್ಟನ್ನು ಇತ್ತೀಚೆಗೆ ತಮ್ಮ ಜಿಲ್ಲೆಯಲ್ಲಿ ನಡೆದಿರುವ ಬಿಜೆಪಿಯ ವಿಜಯಸಂಕಲ್ಪ ರಥಯಾತ್ರೆಗೆ ಗೈರಾಗಿ ಬಹಿರಂಗವಾಗಿಯೇ ವ್ಯಕ್ತಪಡಿಸಿದ್ದಾರೆ.
ಚಾಮರಾಜನಗರದ ಮಲೈಮಹದೇಶ್ವರ ಬೆಟ್ಟದಲ್ಲಿ ನಡೆದ ಬಿಜೆಪಿ ‘ವಿಜಯ ಸಂಕಲ್ಪ ರಥಯಾತ್ರೆ’ಗೆ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ ನಡ್ಡಾ (JP Nadda) ಚಾಲನೆ ನೀಡಿದ್ರು.
ಅಲ್ಲದೆ ಈ ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ (Basavaraj Bommai), ಮಾಜಿ ಸಿಎಂ ಬಿಎಸ್ ಯಡಿಯೂರಪ್ಪ (BS Yediyurappa) ಸಹ ಭಾಗಿಯಾಗಿದ್ದರು.
ಆದರೆ ಚಾಮರಾಜನಗರ ಉಸ್ತುವಾರಿ ಸಚಿವ ವಿ.ಸೋಮಣ್ಣ (Minister V Somanna) ಈ ಕಾರ್ಯಕ್ರಮಕ್ಕೆ ಹಾಜರಾಗದೆ ಹಲವು ಅನುಮಾನಗಳನ್ನು ಹುಟ್ಟು ಹಾಕಿದರು.
ಸೋಮಣ್ಣ ಅವರ ಗೈರು ಹಾಜರಿ ಹತ್ತು ಹಲವು ಪ್ರಶ್ನೆಗಳನ್ನೂ ಹುಟ್ಟು ಹಾಕಿದೆ.
ಅಲ್ಲದೆ ಈ ಬೆಳವಣಿಗೆಗಳ ನಡುವೆ ಸೋಮಣ್ಣ ಅವರಿಗೆ ಕಾಂಗ್ರೆಸ್ (Congress) ಪಕ್ಷಕ್ಕೆ ಬರುವಂತೆ ಆಹ್ವಾನ ನೀಡಿದೆ ಅನ್ನೋ ಮಾಹಿತಿ ಲಭ್ಯವಾಗಿದೆ.
ಸೋಮಣ್ಣ ಅವರು ವಿಜಯ ಸಂಕಲ್ಪ ಯಾತ್ರೆಗೆ ಅನುಪಸ್ಥಿತರಾಗಿರುವುದಕ್ಕೆ ಬೇರೆ ಅರ್ಥ ಕಲ್ಪಿಸುವ ಅಗತ್ಯ ಇಲ್ಲ.
ಅವರಿಗೆ ಆರೋಗ್ಯ ಸರಿ ಇರಲಿಲ್ಲ. ಇದರ ಹೊರತಾಗಿ ಬೇರೆ ಯಾವ ಕಾರಣವೂ ಇಲ್ಲ.
ಕಾರ್ಯಕ್ರಮಕ್ಕೆ ಬರದೇ ಇದ್ರೆ ಅದನ್ನು ಅಸಮಾಧಾನ ಅಥವಾ ಮುಸಕಿನ ಗುದ್ದಾಟ ಎಂದು ವ್ಯಾಖ್ಯಾನ ಮಾಡಬಾರದು ಎಂದು ಬಿಜೆಪಿ ಹಿರಿಯ ನಾಯಕ ಈಶ್ವರಪ್ಪ (Eshwarappa)ಸ್ಪಷ್ಟನೆ ನೀಡಿ ಪ್ರಕರಣವನ್ನು ಶಾಂತಗೊಳಿಸಲು ಯತ್ನಿಸಿದರು.
ವಿ.ಸೋಮಣ್ಣ ಮುನಿಸು ಯಾಕೆ?
ವಿ. ಸೋಮಣ್ಣ ಬಿಜೆಪಿಯ ಹಿರಿಯ ನಾಯಕ. ಪಕ್ಷದ ಏಳಿಗೆಗೆ ದುಡಿದವರು. ಅಲ್ಲದೆ ತಮ್ಮ ಕ್ಷೇತ್ರ ಗೋವಿಂದರಾಜ (somanna joining congress) ನಗರದ ಜೊತೆಗೆ ಚಾಮರಾಜನಗರ(Chamarajanagar) ಉಸ್ತುವಾರಿಯಾಗಿಯೂ ಅನೇಕ ಅಭಿವೃದ್ಧಿ ಕಾರ್ಯಗಳನ್ನು ಮಾಡಿದ್ದಾರೆ.
ಆದ್ರೆ ಚಾಮರಾಜನಗರ ಜಿಲ್ಲಾ ಬಿಜೆಪಿ ಅಧ್ಯಕ್ಷರು ಮತ್ತು ಪಕ್ಷದ ವಿವಿಧ ಹುದ್ದೆಗಳ ನೇಮಕಾತಿಯನ್ನು ತಮ್ಮನ್ನು ಪರಿಗಣಿಸಿಲ್ಲ ಎಂಬ ಅಸಮಾಧಾನ ವಿ.ಸೋಮಣ್ಣ ಅವರಿಗೆ ಇದೆಯಂತೆ.
ಅಲ್ಲದೆ ಸೋಮಣ್ಣ ಅವರು ಚಾಮರಾಜನಗರದಲ್ಲಿ ಈ ಬಾರಿ ಸ್ಪಧಿFಸಬೇಕೆಂಬ ಆಸೆ ಹೊಂದಿದ್ದರಂತೆ.ಆದ್ರೆ ಅದಕ್ಕೆ ಸೂಕ್ತ ಸ್ಪಂದನೆ ದೊರೆತಿಲ್ಲ.
ರುದ್ರೇಶ್ ಎಂಟ್ರಿ, ನಿಜಗುಣ ರಾಜು ಸ್ಪರ್ಧೆ !
ಇತ್ತ KRYDL ಅಧ್ಯಕ್ಷ ಎಂ.ರುದ್ರೇಶ್ ಚಾಮರಾಜಗರದಲ್ಲಿ ಸಕ್ರಿಯರಾಗಿದ್ದಾರೆ. ರುದ್ರೇಶ್ ನೇತೃತ್ವದಲ್ಲಿ ಚುನಾವಣಾ ಪ್ರಚಾರಕ್ಕೆ ಮುಂದಾಗಿರೋದಕ್ಕೆ ಸೋಮಣ್ಣ ಮುನಿಸುಕೊಂಡಿದ್ದಾರೆ ಎನ್ನಲಾಗಿದೆ.
ಎಂ.ರುದ್ರೇಶ್ ಚಾಮರಾಜನಗರ ವಿಧಾನಸಭಾ ಕ್ಷೇತ್ರದ ಬಿಜೆಪಿ ಟಿಕೆಟ್ ಆಕಾಂಕ್ಷಿಯಾಗಿದ್ದಾರೆ.
ಜೊತೆಗೆ ಈ ಕ್ಷೇತ್ರದಲ್ಲಿ ಕಾಡಾ ಅಧ್ಯಕ್ಷ ನಿಜಗುಣ ರಾಜು ಅವರು ಪಕ್ಷದ ಸಾಕಷ್ಟು ಕೆಲಸಗಳನ್ನು ಮಾಡಿದ್ದಲ್ಲದೆ ತಮ್ಮದೇ ವರ್ಚಸ್ಸನ್ನು ಹೊಂದಿದ್ದಾರೆ.
ಕಳೆದ 25 ವರ್ಷಗಳಿಂದ ಪಕ್ಷಕ್ಕಾಗಿ ದುಡಿಯುತ್ತಿದ್ದು, ಉತ್ತಮ ನಾಯಕತ್ವ ಗುಣವನ್ನೂ ಹೊಂದಿದ್ದಾರೆ. ಇವರು ಹೈಕಮಾಂಡ್ ಜೊತೆಗೂ ಉತ್ತಮ ಬಾಂಧವ್ಯ ಹೊಂದಿರುವುದರಿಂದ ಈ ಬಾರಿ ಇವರು ಬಿಜೆಪಿಯ ಟಿಕೆಟ್ ಆಕಾಂಕ್ಷಿಯಾಗಿದ್ದಾರೆ.
ಈ ಎಲ್ಲಾ ಬೆಳವಣಿಗೆಗಳು ಸೋಮಣ್ಣ ಅವರನ್ನು ಇರಿಸಿ ಮುರಿಸಿಗೀಡು ಮಾಡಿದೆ.

ಕ್ಷೇತ್ರ ಬದಲಾವಣೆ ಯಾಕೆ?
ಗೋವಿಂದರಾಜನಗರ ಬಿಜೆಪಿಯ ಭದ್ರಕೋಟೆಯಾಗಿ ಬದಲಾಗಿದೆ. ಹಾಗಾಗಿ ಕ್ಷೇತ್ರವನ್ನು ಪುತ್ರ ಅರುಣ್ ಸೋಮಣ್ಣಗೆ ಬಿಟ್ಟುಕೊಟ್ಟು ತಾವು ಚಾಮರಾಜನಗರಕ್ಕೆ ಹೋಗಲು ಸಚಿವರು ಸಿದ್ಧತೆ ನಡೆಸಿದ್ದರು.
ಆದ್ರೆ ರುದ್ರೇಶ್ ಪ್ರವೇಶ, ನಿಜಗುಣ ಸ್ಪರ್ಧೆಯಿಂದ ಸೋಮಣ್ಣ ಅವರಿಗೆ ಟಿಕೆಟ್ ಸಿಗುತ್ತಾ ಅನ್ನೋ ಪ್ರಶ್ನೆ ಎದುರಾಗಿದೆ.
ಸೋಮಣ್ಣರನ್ನ ಸೈಡ್ಲೈನ್ ಮಾಡ್ತಾ ಬಿಜೆಪಿ?
ಈ ಎಲ್ಲಾ ಬೆಳವಣಿಗೆಗಳಿಂದ ಮುನಿಸಿಕೊಂಡಿರುವ ಸೋಮಣ್ಣ ಅವರನ್ನು ಸಮಾಧಾನ ಮಾಡುವ ಬದಲು ಬಿಜೆಪಿ ಸೈಡ್ಲೈನ್ ಮಾಡಿದೆ ಅನ್ನೋ ಮಾತೂ ಕೇಳಿ ಬರುತ್ತಿದೆ.
ಇದಕ್ಕೆ ಸ್ಪಷ್ಟ ಸಾಕ್ಷಿ ಚಾಮರಾಜನಗರದಲ್ಲಿ ನಡೆದ ವಿಜಯ ಸಂಕಲ್ಪ ಯಾತ್ರೆಯ ಜವಾಬ್ದಾರಿಯನ್ನ ಕೆ.ಎಸ್.ಈಶ್ವರಪ್ಪ ಅವರಿಗೆ ನೀಡಿದ್ದು.
ಬೇರೆ ಜಿಲ್ಲೆಯ ನಾಯಕರಿಗೆ ಉಸ್ತುವಾರಿ ನೀಡಿದ್ದಕ್ಕೆ ಮೊದಲೇ ಮುನಿಸಿಕೊಂಡಿದ್ದ ಸೋಮಣ್ಣ ಅವರ ಅಸಮಾಧಾನ ಮತ್ತಷ್ಟು ಹೆಚ್ಚಾಗಿದೆ ಎನ್ನಲಾಗುತ್ತಿದೆ.