ಲಕ್ನೋ : ಮೊಬೈಲ್ ಗೇಮ್(Mobile Game) ಆಡುವುದನ್ನು ತನ್ನ ತಾಯಿ ತಡೆದರು ಎಂಬ ಒಂದೇ ಒಂದು ಕಾರಣಕ್ಕೆ 16 ವರ್ಷದ ಬಾಲಕ ತನ್ನ ತಾಯಿಗೆ ಗನ್ ಬಳಸಿ ಹಣೆಗೆ ಗುಂಡಿಟ್ಟು ಹತ್ಯೆ(Murder) ಮಾಡಿರುವ ಘಟನೆ ಉತ್ತರ ಪ್ರದೇಶದ(Uttarpradesh) ಲಕ್ನೋದಲ್ಲಿ(Lucknow) ನಡೆದಿದೆ.
ಹದಿಹರೆಯದ 16 ವರ್ಷದ ಬಾಲಕ ಸೋಮವಾರ ಮುಂಜಾನೆ ತನ್ನ ತಂದೆಯ ಪರವಾನಗಿ ಪಡೆದ ರಿವಾಲ್ವರ್ನಿಂದ ತನ್ನ ತಾಯಿಗೆ ಗುಂಡು ಹಾರಿಸಿದ್ದಾನೆ. ತನ್ನ ತಾಯಿ ಗೇಮ್ ಆಡಲು ಬಿಡದೆ ಇದ್ದಾಗ, ಹಠ ಹಿಡಿದು ತಾಯಿಯೊಡನೆ ವಾಗ್ವಾದಕಿಳ್ಳಿದಿದ್ದಾನೆ. ಜಗಳ ತೀವ್ರ ಹಂತ ತಲುಪಿದ್ದೆ ತಡ, ತನ್ನ ತಂದೆಯ ಪರವಾನಿಗಿ ಪಡೆದ ಬಂದೂಕು ಬಳಸಿ ಹಣೆಗೆ ಗುಂಡಿಟ್ಟು ಹತ್ಯೆ ಮಾಡಿದ್ದಾನೆ ಎಂದು ಪೊಲೀಸರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ತಲೆಗೆ ಗುಂಡು ತಗುಲಿ ಕೆಲವೇ ನಿಮಿಷಗಳಲ್ಲಿ ಮಹಿಳೆ ಸಾವನ್ನಪ್ಪಿದ್ದಾಳೆ ಎಂದು ಅಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಮೃತದೇಹವನ್ನು ಮನೆಯಲ್ಲೆ ಬಚ್ಚಿಟ್ಟು ಎರಡು ದಿನ ತನ್ನ 9 ವರ್ಷದ ಸಹೋದರಿಯೊಂದಿಗೆ ಏನು ತಿಳಿಯದಂತೆ ಇದ್ದಾನೆ. ಮೃತ ದೇಹದಿಂದ ದುರ್ವಾಸನೆ ಬಾರದಿರಲು ಬಾಲಕ ರೂಮ್ ಫ್ರೆಶ್ನರ್ ಬಳಸಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ. ಆಪಾದಿತ ಅಪರಾಧದ ಬಗ್ಗೆ ಯಾರಿಗೂ ಹೇಳದಂತೆ ಬಾಲಕ ತನ್ನ ಸಹೋದರಿಗೆ ಬೆದರಿಕೆ ಹಾಕಿದ್ದ. ಕೇಳಿದಾಗ, ಹುಡುಗ ನಕಲಿ ಕಥೆಯನ್ನು ಸೃಷ್ಟಿಸಿ ನಂಬಿಸಲು ಪ್ರಯತ್ನಿಸಿದ್ದಾನೆ.
ಪೊಲೀಸರಿಗೆ ತನ್ನ ತಂದೆ ಆರ್ಮಿಮ್ಯಾನ್, ಯಾವುದೋ ಕೆಲಸದ ನಿಮಿತ್ತ ಮನೆಗೆ ಬಂದಿದ್ದ ಎಲೆಕ್ಟ್ರಿಷಿಯನ್ನಿಂದ ತಾಯಿಯನ್ನು ಗುಂಡಿಕ್ಕಿ ಕೊಲ್ಲಲಾಗಿದೆ ಎಂದು ಹೇಳಿದ್ದಾನೆ. ಆದ್ರೆ, ಪೊಲೀಸರು ಬಿಗಿ ವಿಚಾರಣೆ ನಡೆಸಿದ ಬಳಿಕ ಆತ ತಪ್ಪೊಪ್ಪಿಕೊಂಡಿದ್ದು, ಹೆಚ್ಚಿನ ತನಿಖೆ ನಡೆಯುತ್ತಿದೆ ಎಂದು ಅಧಿಕಾರಿಯೊಬ್ಬರು ಸ್ಥಳೀಯ ಸುದ್ದಿವಾಹಿನಿಗೆ ಮಾಹಿತಿ ನೀಡಿದ್ದಾರೆ.