Visit Channel

ವಿಚಾರಣೆಯನ್ನು ಮುಂದೂಡುವಂತೆ ಇ.ಡಿಗೆ ಮನವಿ ಮಾಡಿದ ಕಾಂಗ್ರೆಸ್ ‘ಅಧಿನಾಯಕಿ’

congress

ನ್ಯಾಷನಲ್ ಹೆರಾಲ್ಡ್(National Herald Case) ಪತ್ರಿಕೆಗೆ ಸಂಬಂಧಿಸಿದ ಆಪಾದಿತ ಅಕ್ರಮ ಹಣ(Illegal Money) ವರ್ಗಾವಣೆ ಪ್ರಕರಣದಲ್ಲಿ ವಿಚಾರಣೆಗಾಗಿ ಜಾರಿ ನಿರ್ದೇಶನಾಲಯದ(ED) ಮುಂದೆ ಹಾಜರಾಗಲು ಕಾಂಗ್ರೆಸ್ ಮುಖ್ಯಸ್ಥೆ(Congress) ಸೋನಿಯಾ ಗಾಂಧಿ(Sonia Gandhi) ಈ ಹಿಂದೆಯೇ ಸಮನ್ಸ್ ನೀಡಲಾಗಿತ್ತು. ಆದ್ರೆ, ಅನಾರೋಗ್ಯದ ಕಾರಣ ಇ.ಡಿ ಸೋನಿಯಾ ಗಾಂಧಿ ಅವರಿಗೆ ಹೆಚ್ಚಿನ ಸಮಯ ನೀಡಿತ್ತು. ಸೋನಿಯಾ ಗಾಂಧಿಯವರು ಕೋವಿಡ್‌ ಪರೀಕ್ಷೆ ಮಾಡಿಸಿದ ಬಳಿಕ ಅವರಿಗೆ ಪಾಸಿಟಿವ್ ಇರುವುದು ದೃಢವಾಯಿತು ಮತ್ತು ಸಂಬಂಧಿತ ಆರೋಗ್ಯ ಸಮಸ್ಯೆಗಳಿಗಾಗಿ ಆಸ್ಪತ್ರೆಗೆ ದಾಖಲಾಗಿದ್ದರು.

Sonia Gandhi

ಒಂದು ವಾರಕ್ಕೂ ಹೆಚ್ಚು ಕಾಲ ಆಸ್ಪತ್ರೆಯಲ್ಲಿದ್ದ ಅವರನ್ನು ಎರಡು ದಿನಗಳ ಹಿಂದೆ ಡಿಸ್ಚಾರ್ಜ್ ಮಾಡಲಾಗಿದೆ. ಜೂನ್ 2 ರಂದು ಸೋನಿಯಾ ಗಾಂಧಿಯವರು ಕರೋನ ವೈರಸ್ ಪರೀಕ್ಷೆಯಲ್ಲಿ ಪಾಸಿಟಿವ್ಗೆ ತುತ್ತಾಗಿದ್ದರು. ಈ ಕಾರಣದಿಂದ ವಿಚಾರಣೆಗೆ ಹಾಜರಾಗಲು ಜಾರಿ ನಿರ್ದೇಶನಾಲಯದಿಂದ ಹೆಚ್ಚಿನ ಸಮಯವನ್ನು ಕೋರಿದ್ದರು. ಇ.ಡಿ ಪ್ರಕಾರ ಜೂನ್ 8 ರಂದು ಸೋನಿಯಾ ಗಾಂಧಿ ಅವರು ವಿಚಾರಣೆಗೆ ಹಾಜರಾಗಬೇಕಿತ್ತು. ಆದ್ರೆ ಸೋನಿಯಾ ಗಾಂಧಿ ಅವರ ಮನವಿಗೆ ಸಮ್ಮತಿಸಿದ ಇ.ಡಿ, ಜೂನ್ 23 ರವರೆಗೆ ಕಾಲಾವಕಾಶ ನೀಡಿತ್ತು.

ಜೂನ್ 12 ರಂದು ಉಸಿರಾಟದ ತೊಂದರೆಯಿಂದ ಸೋನಿಯಾ ಗಾಂಧಿ ಅವರನ್ನು ಸರ್ ಗಂಗಾರಾಮ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಚಿಕಿತ್ಸೆ ಮುಗಿದು, ಹೊರಬಂದ ಬಳಿಕ ಸೋನಿಯಾ ಗಾಂಧಿ ಅವರನ್ನು ಇ.ಡಿ ವಿಚಾರಣೆಗೆ ಹಾಜರಾಗಲು ತಿಳಿಸಿದೆ. ಇ.ಡಿ ಕೊಟ್ಟ ಕಾಲಾವಕಾಶ ಮೀರಿದ್ದು, ನಾಳೆ ಜೂನ್ 24 ರಂದು ವಿಚಾರಣೆಗೆ ಹಾಜರಾಗಬೇಕಿದೆ. ಆದ್ರೆ, ಈಗ ಮತ್ತೊಮ್ಮೆ ಸೋನಿಯಾ ಗಾಂಧಿ ಅವರು ಇ.ಡಿಗೆ ಮತ್ತಷ್ಟು ಕಾಲಾವಕಾಶ ಬೇಕಿದೆ ಎಂದು ಮನವಿ ಮಾಡಿದ್ದಾರೆ ಎನ್ನಲಾಗಿದೆ.

Latest News

E-Shram Card
ಪ್ರಮುಖ ಸುದ್ದಿ

ಇ-ಶ್ರಮ ಕಾರ್ಡ್ ಉಪಯೋಗದ ಬಗ್ಗೆ ನಿಮಗೆ ತಿಳಿದಿಲ್ಲವೆ ?  

ಅಸಂಘಟಿತ ವಲಯದ ಕಾರ್ಮಿಕರಿಗೆ  ಸಂಪೂರ್ಣವಾಗಿ  ವೃತ್ತಿ ಮಾಹಿತಿ  ಮತ್ತು   ಸರ್ಕಾರದ  ಯೋಜನೆಗಳು  ಕಾರ್ಮಿಕರಿಗೆ ನೇರವಾಗಿ ತಲುಪಿಸುವ ,ಹಾಗೂ ದತ್ತಾಂಶ ಸಂಗ್ರಹಿಸುವ ಉದ್ದೇಶದಿಂದ 26  ಆಗಸ್ಟ್‌  2021 ರಂದು  ಕೇಂದ್ರ ಸರ್ಕಾರವು ಈ ಯೋಜನೆಯನ್ನು  ಜಾರಿಗೊಳಿಸಿದೆ. 

inflation
ದೇಶ-ವಿದೇಶ

ಅಗತ್ಯ ವಸ್ತುಗಳ ಬೆಲೆ ತಗ್ಗಿದ ಪರಿಣಾಮ: ಜುಲೈನಲ್ಲಿ ಚಿಲ್ಲರೆ ಹಣದುಬ್ಬರ ಶೇ.6.7 ಇಳಿಕೆ ನಿರೀಕ್ಷೆ

ಅಂದು 100 ರೂಪಾಯಿಗೆ ಖರೀದಿಸುವ ಸಾಮಾನು ಈಗ 500 ಕೊಟ್ಟರು ಬರುವುದಿಲ್ಲ. ಕಾರಣ ಹಣದ ಮೌಲ್ಯ ಕಡಿಮೆಯಾಗಿದೆ, ಈ ಹಣದ ಮೌಲ್ಯ ಕಡಿಮೆಯಾಗಿರುವುದನ್ನೇ ನಾವು ಹಣದುಬ್ಬರ ಎನ್ನುತ್ತೇವೆ.