ಕಾಂಗ್ರೆಸ್(Congress) ಹಂಗಾಮಿ ಅಧ್ಯಕ್ಷೆ(President) ಸೋನಿಯಾ ಗಾಂಧಿ(Sonia Gandhi) ಅವರು ನ್ಯಾಷನಲ್ ಹೆರಾಲ್ಡ್(National Herald Case) ಪ್ರಕರಣದಲ್ಲಿ ವಿಚಾರಣೆಗಾಗಿ ಇಡಿ(ED) ಮುಂದೆ ಹಾಜರಾಗುವ ಕೆಲವೇ ದಿನಗಳ ಮುನ್ನವೇ ಕೋವಿಡ್ ಪಾಸಿಟಿವ್(Covid Positive) ಸೊಂಕು ದೃಢವಾಗಿದೆ.

ಜೂನ್ 8 ರಂದು ತನಿಖಾ ಸಂಸ್ಥೆಯ ಮುಂದೆ ಹಾಜರಾಗಬೇಕು ಎಂದು ಇಡಿ ಸೂಚನೆ ನೀಡಿತ್ತು. ಕಾಂಗ್ರೆಸ್ ನಾಯಕ ರಣದೀಪ್ ಸಿಂಗ್ ಸುರ್ಜೆವಾಲಾ(Randeep Singh Surjewala) ಅವರು ಸೋನಿಯಾ ಗಾಂಧಿ ಅವರು ಕಳೆದ ವಾರದಿಂದ ನಾಯಕರು ಮತ್ತು ಕಾರ್ಯಕರ್ತರೊಂದಿಗೆ ಸರಣಿ ಸಭೆಗಳನ್ನು ನಡೆಸುತ್ತಿದ್ದಾರೆ ಎಂದು ಹೇಳಿದರು. ಬುಧವಾರ ಸಂಜೆ, ಅವರು ಕೋವಿಡ್ -19 ಪರೀಕ್ಷೆ ಮಾಡಿಸಿದರು. ಸೋನಿಯಾ ಗಾಂಧಿ ಅವರಿಗೆ ಕೊರೊನಾ ಪಾಸಿಟಿವ್ ಧೃಡವಾಗಿದ್ದು, ಮನೆಯಲ್ಲೇ ವಿಶ್ರಾಂತಿ ಪಡೆಯಲಿದ್ದಾರೆ ಎಂಬುದು ತಿಳಿದುಬಂದಿದೆ.
ಕಳೆದ ಸಂಜೆ ಸೋನಿಯಾ ಗಾಂಧಿಗೆ ಅವರಿಗೆ ಜ್ವರ ಕಾಣಿಸಿಕೊಂಡಿತ್ತು, ಅವರು ಅದು ಕೋವಿಡ್ ಪಾಸಿಟಿವ್ ಇರಬೇಕು ಎಂದು ಪರೀಕ್ಷಿಸಿಕೊಂಡರು. ಬಳಿಕ ತಮ್ಮನ್ನು ತಾವೇ ಐಸಾಲೇಟ್ ಮಾಡಿಕೊಂಡಿದ್ದಾರೆ. ವೈದ್ಯಕೀಯ ಸಮಾಲೋಚನೆ ನಡೆದಿದೆ ಮತ್ತು ಅವರು ಚೇತರಿಸಿಕೊಳ್ಳುತ್ತಿದ್ದಾರೆ ಎಂದು ಹೇಳಿದ್ದಾರೆ. ಈಗಾಗಲೇ ನ್ಯಾಷನಲ್ ಹೆರಾಲ್ಡ್ ಪ್ರಕರಣಕ್ಕೆ ಸಂಬಂಧಿಸಿದಂತೆ ಕಾಂಗ್ರೆಸ್ ನಾಯಕ ರಾಹುಲ್ ಮತ್ತು ಅಧ್ಯಕ್ಷೆ ಸೋನಿಯಾ ಗಾಂಧಿ ಅವರಿಗೆ ಇಡಿ ಬುಧವಾರ ಸಮನ್ಸ್ ಜಾರಿ ಮಾಡಿದೆ.