Bengaluru: ರಾಷ್ಟ್ರಮಟ್ಟದಲ್ಲಿ ಬಹಳ ಚರ್ಚೆಗೆ ಗ್ರಾಸವಾಗಿದ್ದಂತಹ ದಕ್ಷಿಣ ಕನ್ನಡ ಜಿಲ್ಲೆ ಉಜಿರೆಯ (Soujanya case re investigation) ಎಸ್.ಡಿ.ಎಂ ಕಾಲೇಜು ವಿದ್ಯಾರ್ಥಿನಿಯಾದ ಸೌಜನ್ಯ
ಅತ್ಯಾಚಾರ ಮತ್ತು ಕೊಲೆ ಪ್ರಕರಣವನ್ನು ಮರು ತನಿಖೆ ಮಾಡುವ ಕುರಿತು ಗೃಹ ಇಲಾಖೆಯು ಕಾನೂನು ಇಲಾಖೆಯ ಅಭಿಪ್ರಾಯ ಕೇಳಿದೆ.

ಹೈಕೋರ್ಟ್ (Highcourt) ಈ ಪ್ರಕರಣದಲ್ಲಿ ಮರು ತನಿಖೆ ನಡೆಸಲು ಸಿಬಿಐಗೆ (CBI) ನಿರ್ದೇಶನ ನೀಡಲು ನಿರಾಕರಿಸಿರುವ ಬೆನ್ನಲ್ಲೇ ಗೃಹ ಇಲಾಖೆಯು ಕಾನೂನು ಇಲಾಖೆಯ
ಅಭಿಪ್ರಾಯ ಕೋರಿರುವುದು ಕಂಡುಬಂದಿದ್ದು, ಈ ಪ್ರಕರಣದ ಕುರಿತು ಗ್ರಹ ಇಲಾಖೆಯ ಮೇಲೆ ಒತ್ತಡ ಹೆಚ್ಚುತ್ತಿರುವ ನಡುವೆಯೇ ಗೃಹ ಇಲಾಖೆಯು ಕಾನೂನು ಇಲಾಖೆಯ ಮೊರೆ
ಹೋಗುತ್ತಿರುವುದು ಚರ್ಚೆಗೆ (Soujanya case re investigation) ಎಡೆಮಾಡಿಕೊಟ್ಟಿದೆ.
ಮುಖ್ಯಮಂತ್ರಿ ಸಿದ್ದರಾಮಯ್ಯ (Siddaramaiah) ನವರಿಗೆ ಮತ್ತು ಸರ್ಕಾರಕ್ಕೆ ಈ ಪ್ರಕರಣದ ಕುರಿತು ಬೆಳ್ತಂಗಡಿ ಶಾಸಕ ಹರೀಶ್ ಪೂಂಜಾ (Harish Punja), ವಿಧಾನ ಪರಿಷತ್ ಸದಸ್ಯ ಕೆ
ಪ್ರತಾಪ್ ಸಿಂಹ ನಾಯಕ್ ಅವರು ಮರು ತನಿಖೆ ನಡೆಸಬೇಕೆಂದು ಮನವಿ ಸಲ್ಲಿಸಿದ್ದರು. ಹಾಗಾಗಿ ಗೃಹ ಇಲಾಖೆಯು ಈ ಮನವಿಯನ್ನು ಆಧರಿಸಿ ಮರು ತನಿಖೆ ನಡೆಸಲು ಅವಕಾಶವಿದೆಯೇ ಎಂಬ
ಬಗ್ಗೆ ಕಾನೂನು ಇಲಾಕೆಯ ಮೊರೆ ಹೋಗಿದೆ. ಅಲ್ಲದೆ ಸಾರ್ವಜನಿಕರ ಭಾವನೆಗಳನ್ನು ಗಂಭೀರವಾಗಿ ಪರಿಗಣಿಸಿ ಸೌಜನ್ಯಳ (Soujanya) ಅತ್ಯಾಚಾರ ಮತ್ತು ಹತ್ಯೆ ಪ್ರಕರಣವನ್ನು ಮರು ತನಿಖೆ
ನಡೆಸಿ ಅವಳಿಗೆ ಮತ್ತು ಅವಳ ಕುಟುಂಬಕ್ಕೂ ನ್ಯಾಯ ದೊರಕಿಸಿಕೊಡಲು ಸರ್ಕಾರಕ್ಕೆ ಕೋರಿಕೆ ಸಲ್ಲಿಸಿರುವುದರಿಂದ ಆಡಳಿತ ಇಲಾಖೆಯವರು ಈ ವಿಷಯಕ್ಕೆ ಸಂಬಂಧಿಸಿದಂತೆ ಸಿಬಿಐನಲ್ಲಿ
ಮುಕ್ತಾಯಗೊಂಡಿರುವ ಈ ಕೇಸನ್ನು ಮರು ತನಿಖೆಗೆ ಒಳಪಡಿಸಲು ಅವಕಾಶವಿದೆಯೇ ಅಂತ ಕೋರಿ ಕಡತವನ್ನು ಸಲ್ಲಿಸಲಾಗಿದೆ ಎಂದು ಟಿಪ್ಪಣಿ ಹಾಳೆಯಲ್ಲಿ ಉಲ್ಲೇಖಿಸಲಾಗಿದೆ.

ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಕಾನೂನು ಇಲಾಖೆಯು ಅಭಿಪ್ರಾಯ ನೀಡುವ ಸಲುವಾಗಿ ಸಾಕ್ಷಿಗಳು ನೀಡಿರುವ ಹೇಳಿಕೆಯ ಪ್ರತಿ ಮತ್ತು ಬೆಂಗಳೂರಿನಲ್ಲಿರುವ ಹೆಚ್ಚುವರಿ ಸಿಟಿ ಸಿವಿಲ್ ಸೆಷನ್ಸ್
(City Civil Sessions) ನ್ಯಾಯಾಲಯದಲ್ಲಿ ಅಂದರೆ (Children’s Court Special Bengaluru) ದಾಖಲಾಗಿರುವ ಪ್ರಕರಣವನ್ನು 2021ರ ಅಕ್ಟೋಬರ್ 4 ರಂದು ನೀಡಿರುವ ಆದೇಶದ
ಪ್ರತಿಗಳನ್ನು ಪರಿಶೀಲಿಸುವುದ್ ಅವಶ್ಯಕವಾಗಿದೆ ಎಂದು ಅಭಿಪ್ರಾಯಿಸಿರುವುದು ಗೊತ್ತಾಗಿದೆ.
ಚಂದಪ್ಪಗೌಡ (Chandappagowda) ಇವರು ಮೃತ ವಿದ್ಯಾರ್ಥಿನಿ ತಂದೆಯಾಗಿದ್ದು , 2018 ರಲ್ಲಿ ಪ್ರಕರಣದ ಮರು ತನಿಖೆಗೆ ಸಿಬಿಐಗೆ ನಿರ್ದೇಶನ ನೀಡಬೇಕೆಂದು ಕೋರಿ ಸಲ್ಲಿಸಿದ್ದ ಅರ್ಜಿ ಕುರಿತು
ಸುಧೀರ್ಘ ವಾದ-ಪ್ರತಿವಾದ ಆಲಿಸಿದ್ದ ಏಕಸದಸ್ಯ ಪೀಠ ಅರ್ಜಿಯನ್ನು ಈಗಾಗಲೇ ವಜಾಗೊಳಿಸಿದ್ದು, ಪ್ರಕರಣವನ್ನು ಮೊದಲಿಗೆ ಸಿಐಡಿ (CID) ತದ ನಂತರ ಸಿಬಿಐ ತನಿಖೆ ಮಾಡಿತ್ತು.
ಈ ಪ್ರಕರಣ ಸಂಭವಿಸಿದ ಮೊದಲಿಗೆ ಬೆಳ್ತಂಗಡಿ (Belthangadi) ಪೊಲೀಸರು ತನಿಖೆ ನಡೆಸಿದ್ದರು ಇದಾದ ಬಳಿಕ ತನಿಖೆಯನ್ನು ಸಿಐಡಿಗೆ ವರ್ಗಾಯಿಸಲಾಗಿತ್ತು. ಆ ಬಳಿಕ ಸರ್ಕಾರ ತನಿಖೆಯನ್ನು
ಸಿಬಿಐಗೆ ಹಸ್ತಾಂತರಿಸಿತ್ತು.2016ರಲ್ಲಿ ತನಿಖೆ ಪೂರ್ಣಗೊಳಿಸಿದ ಸಿಬಿಐ ಆರೋಪ ಪಟ್ಟಿ ಸಲ್ಲಿಸಿದ್ದು, ಆ ಆರೋಪ ಪಟ್ಟಿ ಸರಿಯಾಗಿಲ್ಲ ಎಂದು ಆರೋಪಿಸಿದ್ದ ಸೌಜನ್ಯ ತಂದೆ ಹೆಚ್ಚಿನ ತನಿಖೆಗೆ ಕೋರಿದ್ದರು.
ಇದನ್ನು ಓದಿ: ಆರೋಗ್ಯಕರವಾದ ಹೀರೆಕಾಯಿ ಚಟ್ನಿ
- ಭವ್ಯಶ್ರೀ ಆರ್.ಜೆ