ಬೆಂಗಳೂರಿನ(Bengaluru)ಬಿಬಿಎಂಪಿ(BBMP) ಕಛೇರಿಯನ್ನು ಯಾಕೆ ಬಿಬಿಎಂಪಿ ಎಂದು ಹೆಸರಿಟ್ಟಿದ್ದಾರೆ? ಅದನ್ನು `ಬೃಹತ್ ಬಿಜೆಪಿ ಮಹಾನಗರ ಪಾಲಿಕೆ’ ಎಂದು ಮರುನಾಮಕರಣ ಮಾಡಿ ಎಂದು ಕಾಂಗ್ರೆಸ್(Congress) ಸದಸ್ಯೆ ಸೌಮ್ಯರೆಡ್ಡಿ(Sowmya Reddy) ಹೇಳಿದ್ದಾರೆ.

ಈ ಮೂಲಕ ಬಿಜೆಪಿ(BJP) ಅವರ ಕಾಲೆಳೆದು ಟೀಕಿಸಿದ್ದಾರೆ. ಜಯನಗರ ಕ್ಷೇತ್ರದ ಬಿಬಿಎಂಪಿ ತೆರಿಗೆ ಹಾಗೂ ಸಹಾಯಕ ತೆರಿಗೆ ಅಧಿಕಾರಿಗಳು ಬಿಬಿಎಂಪಿ ಕಛೇರಿಯಲ್ಲಿ ಕೆಲಸ ಮಾಡದೇ, ಕೆಲಸಕ್ಕೆ ನಿಯೋಜನೆ ಮಾಡಿರುವ ಅವಧಿಯಲ್ಲಿ ಬಿಜೆಪಿ ಕಾರ್ಯಕರ್ತರೊಬ್ಬರ ನಿವಾಸದಲ್ಲಿ ಮತದಾರರ ಪರಿಷ್ಕರಣೆ ಮಾಡುತ್ತಿರುವುದು ಕಂಡುಬಂದಿದೆ. ಈ ಬಗ್ಗೆ ಯಾರು ಮಾತಾಡೋದಿಲ್ಲ? ಯಾಕೆ ಇದು ತಪ್ಪಲ್ವಾ? ಯಾಕೆ ಯಾರು ಕೂಡ ಈ ಬಗ್ಗೆ ಕ್ರಮ ಕೈಗೊಂಡಿಲ್ಲ. ಇದರ ಬದಲು ಬಿಬಿಎಂಪಿ ಕಛೇರಿಯ ನಾಮಫಲಕದಲ್ಲಿ ಬೃಹತ್ ಬಿಜೆಪಿ ಮಹಾನಗರ ಪಾಲಿಕೆ ಎಂದು ಮರುನಾಮಕರಣ ಮಾಡಿ ಸರಿಯಾಗಿರುತ್ತದೆ ಎಂದು ಹೇಳುವ ಮೂಲಕ ತಮ್ಮ ಆಕ್ರೋಶವನ್ನು ಹೊರಹಾಕಿದ್ದಾರೆ.

ಈ ಮಧ್ಯೆ ಬಿಬಿಎಂಪಿ ಆಯುಕ್ತರು ಇದೇ ಪ್ರಥಮ ಬಾರಿಗೆ ಅಲ್ವಾ ಅಧಿಕಾರಿಗಳು ಸಿಕ್ಕಿಬಿದ್ದಿದ್ದು ಎಂದು ನಿರ್ಲಕ್ಷ್ಯ ಹೇಳಿಕೆ ನೀಡಿದ್ದಾರೆ. ಇದನ್ನು ತೀವ್ರ ಖಂಡಿಸಿ ಮಾತನಾಡಿದ ಸೌಮ್ಯ ರೆಡ್ಡಿ, ಬಿಬಿಎಂಪಿಯ ಮುಖ್ಯ ಆಯುಕ್ತರು ಪಕ್ಷಾತೀತವಾಗಿ ಕೆಲಸ ನಿರ್ವಹಿಸದೆ ಬಿಜೆಪಿ ಕಾರ್ಯಕರ್ತರಂತೆ ಕೆಲಸ ಮಾಡುತ್ತಿದ್ದಾರೆ? ಕೆಲಸ ಮಾಡಲು ಕಾರಣವೇನು? ಎಂದು ಗುಡುಗಿದರು. ಇದಕ್ಕೆ ಸ್ಪಂದಿಸಿದ ನಗರಾಭಿವೃದ್ದಿ ಸಚಿವ ಕೆ.ಎಸ್ ಈಶ್ವರಪ್ಪನವರು, ಬಿಬಿಎಂಪಿ ಕಂದಾಯ ಅಧಿಕಾರಿಗಳು ಬೆಂಗಳೂರು ನಗರಾಭಿವೃದ್ದಿ ಖಾತೆ ಅಡಿ ಬರುತ್ತಾರೆ.

ಈ ಪ್ರಮುಖ ಕಾರಣದಿಂದ ನಿಮಗೆ ಉತ್ತರ ದೊರೆಯುವುದಿಲ್ಲ. ಮುಖ್ಯಮಂತ್ರಿಗಳಿಂದ ಕೂಡ ಉತ್ತರ ಕೊಡಿಸಲು ಅಸಾಧ್ಯ ಎಂದು ಹೇಳುವ ಮೂಲಕ ಚರ್ಚೆಗೆ ಅಂತ್ಯ ಮಾಡಿದರು!