North Tanzenia : ಪ್ರಾಣಿ-ಪಕ್ಷಿ ಹಾಗೂ ಮಾನವರಿಗೆ ಪ್ರಕೃತಿಯೇ(Special Facts about Lake Natron) ಜೀವಾಳ. ಅದರಲ್ಲೂ ಪ್ರಾಣಿ ಹಾಗೂ ಪಕ್ಷಿಗಳು ಗಿಡ ಮರ ಕಾಡಿನ ಸಾಂಗತ್ಯವಿಲ್ಲದೇ ಬದುಕುವುದೇ ಅಸಾಧ್ಯ. ಆದರೆ ಮಾನವರು ಪ್ರಕೃತಿಯ ನಾಶದಲ್ಲಿ ತೊಡಗಿರುವ ಕಾರಣ, ಹಲವಾರು ಪ್ರಾಣಿ ಪಕ್ಷಿಗಳು ಅಳಿವಿನಂಚಿಗೆ ಸರಿಯುತ್ತಿವೆ.

ಪ್ರಾಣಿ ಪಕ್ಷಿಗಳು ಮಾತ್ರವಲ್ಲ ಮಾನವರ ಮೇಲೂ ಇದು ಪರಿಣಾಮ ಬೀರುತ್ತದೆ(Special Facts about Lake Natron) ಎನ್ನುವುದನ್ನು ಅರಿತು, ಪ್ರಕೃತಿಯನ್ನು ಉಳಿಸುವುದು ನಮ್ಮ ಕರ್ತವ್ಯ. ಇನ್ನು, ಇಂತಹ ಪ್ರಕೃತಿಯ ಒಡನಾಟದೊಂದಿಗೆ ಜೀವಿಸುವ ಪ್ರಾಣಿ-ಪಕ್ಷಿಗಳು ನೀರನ್ನು ಮುಟ್ಟಿ ಕಲ್ಲಾಗಿರುವುದನ್ನು ಕೇಳಿದ್ದೀರಾ?
ಇದನ್ನೂ ಓದಿ : https://vijayatimes.com/simple-health-tips-for-heart
ಇದನ್ನು ಕೇಳಿದರೆ ಒಂದು ಕ್ಷಣ ಆಶ್ಚರ್ಯವಾಗದೇ ಇರದು. ಆದರೆ ಉತ್ತರ ತಾಂಜಾನಿಯಾದಲ್ಲಿ ಪಕ್ಷಿಗಳು ನೀರಿನಿಂದ ಕಲ್ಲಾಗಿರುವ ವಿಚಿತ್ರ(Weird) ಘಟನೆ ನಡೆದಿದೆ. ಹೌದು, ನಿಕ್ ಬ್ರಾಂಟ್ ಎಂಬುವವರು ತಮ್ಮ ‘ಅಕ್ರಾಸ್ ದಿ ರ್ಯಾವೇಜ್ಡ್ ಲ್ಯಾಂಡ್’ ಎಂಬ ಪುಸ್ತಕದಲ್ಲಿ ಕಲ್ಲಾಗಿರುವ ಪಕ್ಷಿಗಳ ಚಿತ್ರಗಳನ್ನು ದಾಖಲಿಸಿದ್ದಾರೆ. ಅವರು ಫೋಟೋಗ್ರಫಿಗೆಂದು ಉತ್ತರ ತಾಂಜಾನಿಯಾದ ನಾರ್ಟಾನ್ ನದಿಯ(Lake Natron) ಬಳಿ ಹೋದಾಗ ಎಷ್ಟು ಹೊತ್ತಾದರೂ ಅಲುಗಾಡದೇ ತಟಸ್ಥವಾಗಿ ಕುಳಿತ ಪಕ್ಷಿಗಳನ್ನು ನೋಡಿ ನಿಬ್ಬೆರಗಾಗಿದ್ದಾರೆ.

ಕುತೂಹಲದಿಂದ ಹತ್ತಿರ ಹೋಗಿ ನೋಡಿದಾಗ ಅನೇಕ ಪಕ್ಷಿಗಳು ಮತ್ತು ಬಾವಲಿಗಳು ಕಲ್ಲಿನಂತಾಗಿರುವುದು ಕಂಡು ಬಂದಿದೆ. ಅವುಗಳನ್ನು ಮತ್ತೆ ಜೀವಂತ ಸ್ಥಿತಿಯಲ್ಲಿರುವಂತೆ ಕೂರಿಸಿ ಫೋಟೋ ಕ್ಲಿಕ್ಕಿಸಿದ್ದಾರೆ ಬ್ರಾಂಟ್. ಆದರೆ, ಇಲ್ಲಿ ಜೀವಿಗಳು ಹೀಗೆ ನಿಗೂಢವಾಗಿ ಸಾಯುತ್ತಿರುವುದಕ್ಕೆ ಕಾರಣವೇನು ಎಂಬುದು ಯಾರಿಗೂ ಸ್ಪಷ್ಟವಾಗಿ ತಿಳಿದಿಲ್ಲ.
ಆದರೆ ನೀರಿನಲ್ಲಿರುವ ಅತಿಯಾದ ಉಪ್ಪು ಮತ್ತು ಸೋಡಿಯಂ ಅಂಶವೇ ಇದಕ್ಕೆ ಕಾರಣವಿರಬಹುದು ಎಂದು ಅಂದಾಜಿಸಲಾಗಿದೆ. ಸೋಡಿಯಂ ಮತ್ತು ಉಪ್ಪಿನ ಪ್ರಮಾಣ ಹೆಚ್ಚಾಗಿರುವುದರಿಂದ ನೀರಿನ ಪಿಹೆಚ್ ಮಟ್ಟ 10.5 ರಷ್ಟು ಹೆಚ್ಚಾಗಿದ್ದು, ಪಕ್ಷಿಗಳು ನೀರನ್ನು ಸ್ಪರ್ಶಿಸಿದ ನಂತರ ಅವು ಕಲ್ಲಾಗುತ್ತವೆ ಎಂದು ಹೇಳಲಾಗುತ್ತಿದೆ.
ಈ ಅತಿಯಾದ ಶುಷ್ಕತೆಯಿಂದಲೇ ಪಕ್ಷಿಗಳು ಉಪ್ಪು ಹಾಕಿ ಸಂರಕ್ಷಿಸಲ್ಪಟ್ಟ ಒಣ ಮೀನಿನಂತೆ ಕಾಣುತ್ತಿರುವುದು ಅಚ್ಚರಿ ಮೂಡಿಸಿದೆ.
- ಪವಿತ್ರ