Mysore : ಉತ್ತರ ಪ್ರದೇಶದ ಪ್ರಯಾಗ್ ರಾಜ್ನಲ್ಲಿ (Prayag Raj) ನಡೆಯಲಿರುವ ಕುಂಭಮೇಳಕ್ಕಾಗಿ (Kumbh Mela) ಕರ್ನಾಟಕದ ಮೈಸೂರಿನಿಂದ ಲಕ್ನೋ ವಿಶೇಷ ರೈಲು ವ್ಯವಸ್ಥೆ (Lucknow Special Train System) ಮಾಡಲಾಗಿದೆ. ಕುಂಭಮೇಳಕ್ಕಾಗಿ ಕರ್ನಾಟಕದಿಂದ (Karnataka) ಅಧಿಕ ಸಂಖ್ಯೆಯಲ್ಲಿ ಭಕ್ತಾಧಿಗಳು ತೆರಳಲಿದ್ದು, ಅದಕ್ಕಾಗಿ ಈ ವಿಶೇಷ ವ್ಯವಸ್ಥೆ (Special system) ಕಲ್ಪಿಸಲಾಗಿದ್ದು, ನೈರುತ್ಯ ರೈಲ್ವೆಯಿಂದ ಏಕಮುಖ ವಿಶೇಷ ರೈಲು ಸಂಚರಿಸಲಿದೆ ಎಂದು ರೈಲ್ವೆ ಇಲಾಖೆ ಹೇಳಿದೆ.

ಗಂಗಾ, ಯಮುನಾ ಹಾಗೂ ಸರಸ್ವತಿ ನದಿಗಳ (Ganga, Yamuna and Saraswati rivers) ಸಂಗಮ ಕ್ಷೇತ್ರವಾದ ತ್ರಿವೇಣಿ ಸಂಗಮದಲ್ಲಿ ನಡೆಯಲಿರುವ ಕುಂಭಮೇಳಕ್ಕೆ ದೇಶ-ವಿದೇಶಗಳಿಂದ ಅಪಾರ ಸಂಖ್ಯೆಯಲ್ಲಿ ಭಕ್ತಾಧಿಗಳು ಆಗಮಿಸುತ್ತಾರೆ (Devotees arrive). ಹೀಗಾಗಿ ಸಂಚಾರ ದಟ್ಟಣೆಯನ್ನು ನಿಯಂತ್ರಿಸುವ ದೃಷ್ಟಿಯಿಂದ ರೈಲ್ವೆ ಇಲಾಖೆ ವಿಶೇಷ ರೈಲುಗಳ ವ್ಯವಸ್ಥೆಯನ್ನು ಕಲ್ಪಿಸಿದೆ.
ರೈಲು ಸಂಖ್ಯೆ 06216 ಮೈಸೂರು-ಲಕ್ನೋ ಜಂಕ್ಷನ್ ಏಕಮುಖ ಸ್ಪೆಷಲ್ (Mysore-Lucknow Junction One Way Special) ಎಕ್ಸ್ಪ್ರೆಸ್ ಡಿಸೆಂಬರ್ 29 ರ ರಾತ್ರಿ 12:30 ಕ್ಕೆ ಮೈಸೂರಿನಿಂದ ಹೊರಟು ಡಿಸೆಂಬರ್ 31 ರ ಮಂಗಳವಾರ ಮುಂಜಾನೆ 4 ಗಂಟೆಗೆ ಲಕ್ನೋ ತಲುಪಲಿದೆ.ಈ ರೈಲು ಮೈಸೂರಿನಿಂದ ಹೊರಟು ಮಂಡ್ಯ, ಬೆಂಗಳೂರು, ತುಮಕೂರು, ಅರಸೀಕೆರೆ, ಕಡೂರು, , ದಾವಣಗೆರೆ, ಹಾವೇರಿ, ಹುಬ್ಬಳ್ಳಿ, ಧಾರವಾಡ, ಬೆಳಗಾವಿ, ಮಿರಜ್ ಜಂಕ್ಷನ್, ಸಾಂಗ್ಲಿ, ಕರಡ್, ಪುಣೆ, ದೌಂಡ್ ಕಾರ್ಡ್ ಲೈನ್, ಅಹ್ಮದ್ನಗರ, ಮನ್ಮಾಡ್ ಜಂಕ್ಷನ್, ಖಾಂಡ್ವಾ, ತಲ್ವಾಡಿಯಾ, ಭೋಪಾಲ್, ತಲ್ವಾಡಿಯಾ, ಚನೇರಾ, ತಲ್ವಾಡ್ಯ, ನಿಲ್ದಾಣಗಳ ಮೂಲಕ ಸಾಗಲಿದೆ.
ಈ ವಿಶೇಷ ರೈಲು 11 ಸೆಕೆಂಡ್ ಜನರಲ್ ಕ್ಲಾಸ್ ಬೋಗಿಗಳು, 7 ಸ್ಲೀಪರ್ ಕ್ಲಾಸ್ ಬೋಗಿಗಳು ಮತ್ತು SLRD ಸೇರಿದಂತೆ 20 ಬೋಗಿಗಳನ್ನು ಒಳಗೊಂಡಿರುತ್ತದೆ. ಹೆಚ್ಚಿನ ಮಾಹಿತಿಗಾಗಿ ಭಾರತೀಯ ರೈಲ್ವೆಯ ವೆಬ್ಸೈಟ್ www.enquiry.indianrail.gov.in ಭೇಟಿ ನೀಡಿ.