• ಹೋಮ್
  • ವಿಜಯ ಟೈಮ್ಸ್‌
    • ಪ್ರಮುಖ ಸುದ್ದಿ
    • ರಾಜ್ಯ
    • ದೇಶ-ವಿದೇಶ
    • ರಾಜಕೀಯ
  • ಕವರ್‌ ಸ್ಟೋರಿ
  • ಲೈಫ್ ಸ್ಟೈಲ್
    • ಆರೋಗ್ಯ
  • ಕ್ರೀಡೆ
  • ಮನರಂಜನೆ
    • ವೈರಲ್ ಸುದ್ದಿ
Menu
  • ಹೋಮ್
  • ವಿಜಯ ಟೈಮ್ಸ್‌
    • ಪ್ರಮುಖ ಸುದ್ದಿ
    • ರಾಜ್ಯ
    • ದೇಶ-ವಿದೇಶ
    • ರಾಜಕೀಯ
  • ಕವರ್‌ ಸ್ಟೋರಿ
  • ಲೈಫ್ ಸ್ಟೈಲ್
    • ಆರೋಗ್ಯ
  • ಕ್ರೀಡೆ
  • ಮನರಂಜನೆ
    • ವೈರಲ್ ಸುದ್ದಿ
Vijaya Times logo
  • ಹೋಮ್
  • ವಿಜಯ ಟೈಮ್ಸ್‌
    • ಪ್ರಮುಖ ಸುದ್ದಿ
    • ರಾಜ್ಯ
    • ದೇಶ-ವಿದೇಶ
    • ರಾಜಕೀಯ
  • ಕವರ್‌ ಸ್ಟೋರಿ
  • ಲೈಫ್ ಸ್ಟೈಲ್
    • ಆರೋಗ್ಯ
  • ಕ್ರೀಡೆ
  • ಮನರಂಜನೆ
    • ವೈರಲ್ ಸುದ್ದಿ
Menu
  • ಹೋಮ್
  • ವಿಜಯ ಟೈಮ್ಸ್‌
    • ಪ್ರಮುಖ ಸುದ್ದಿ
    • ರಾಜ್ಯ
    • ದೇಶ-ವಿದೇಶ
    • ರಾಜಕೀಯ
  • ಕವರ್‌ ಸ್ಟೋರಿ
  • ಲೈಫ್ ಸ್ಟೈಲ್
    • ಆರೋಗ್ಯ
  • ಕ್ರೀಡೆ
  • ಮನರಂಜನೆ
    • ವೈರಲ್ ಸುದ್ದಿ
Visit Channel
Home ಲೈಫ್ ಸ್ಟೈಲ್

ಹೆಸರಿನ ಮೊಳಕೆ ಕಾಳಿನಲ್ಲಿ ಎಷ್ಟೊಂದು ಸತ್ವ ಇದೆ ಗೊತ್ತಾ?

Mohan Shetty by Mohan Shetty
in ಲೈಫ್ ಸ್ಟೈಲ್
ಹೆಸರಿನ ಮೊಳಕೆ ಕಾಳಿನಲ್ಲಿ ಎಷ್ಟೊಂದು ಸತ್ವ ಇದೆ ಗೊತ್ತಾ?
0
SHARES
0
VIEWS
Share on FacebookShare on Twitter

ನಾವು ಆರೋಗ್ಯವಾಗಿರಬೇಕಾದರೆ ಮೊಳಕೆ ಕಾಳುಗಳನ್ನು ತಿನ್ನುವುದು ಬಹಳ ಮುಖ್ಯ. ಅದರಲ್ಲೂ ಮೊಳಕೆ ಹೆಸರು ಕಾಳನ್ನು ತಿನ್ನುವುದರಿಂದ ಎಷ್ಟೆಲ್ಲಾ ಉಪಯೋಗಗಳಿವೆ ಅಂತ ನೀವೂ ತಿಳಿದುಕೊಳ್ಳಬೇಕಾದರೆ ಇದನ್ನು ಸಂಪೂರ್ಣವಾಗಿ ಓದಿ. ಆರೋಗ್ಯಕ್ಕೆ ಮಾರಕವಾದ ಜೀವನ ಶೈಲಿಯ ಮಧ್ಯೆ ಆರೋಗ್ಯಕರ ಆಹಾರಗಳನ್ನು ಜನ ಮರೆತಿದ್ದಾರೆ. ಸೊಪ್ಪು, ತರಕಾರಿ, ಕಾಳುಗಳು ಆರೋಗ್ಯ ವೃದ್ಧಿಸುವಲ್ಲಿ ತುಂಬಾ ಉಪಯುಕ್ತ. ಅದರಲ್ಲೂ ಮೊಳಕೆ ಬಂದ ಕಾಳುಗಳ ಸೇವನೆಯಿಂದ ಎಷ್ಟು ಲಾಭ ಎನ್ನುವುದು ಹಲವರಿಗೆ ಗೊತ್ತಿರಲ್ಲ. ಕಾಳುಗಳನ್ನು ಹಾಗೆಯೇ ತಿನ್ನುವುದಕ್ಕಿಂತ ಅದನ್ನು ನೀರಲ್ಲಿ ನೆನಸಿಟ್ಟು, ಮೊಳಕೆ ಬಂದ ಮೇಲೆ ತಿಂದ್ರೆ ಅದರಲ್ಲಿ ಪೌಷ್ಟಿಕಾಂಶ ಜಾಸ್ತಿ ಇರುತ್ತದೆ.

ಮೊಳಕೆ ಒಡೆದ ಕಾಳುಗಳನ್ನು ಬೇಯಿಸಿ ತಿನ್ನುವುದಕ್ಕಿಂತ ಹಸಿಯಾಗಿಯೇ ಸೇವಿಸುವುದು ಉತ್ತಮ. ಯಾಕೆಂದರೆ ಮೊಳಕೆ ಕಾಳುಗಳನ್ನು ಬೇಯಿಸಿದಾಗ ಅದರ ಪೌಷ್ಟಿಕತೆ ದೇಹಕ್ಕೆ ಸಿಗಲ್ಲ. ಮೊಳಕೆ ಕಾಳಲ್ಲಿ ಪ್ರೋಟಿನ್, ಫೈಬರ್, ವಿಟಮಿನ್ಸ್, ಕಬ್ಬಿಣದ ಅಂಶ, ಕ್ಯಾಲ್ಸಿಯಂ ಹೀಗೆ ದೇಹಕ್ಕೆ ಬೇಕಾದ ಆರೋಗ್ಯಕರ ಅಂಶಗಳು ಇರುತ್ತದೆ. ಆದ್ದರಿಂದ ಮೊಳಕೆ ಕಾಳು ದೇಹಕ್ಕೆ ಒಳ್ಳೆಯದು. ಅನೇಕ ಅದ್ಭುತ ಲಾಭಗಳನ್ನು ತನ್ನೊಳಗೆ ಅಡಗಿಸಿಕೊಂಡಿರೋ ಮೊಳಕೆ ಕಾಳುಗಳಲ್ಲಿ ಮೊಳಕೆ ಒಡೆದ ಹೆಸರು ಕಾಳು ಒಂದು. ಈ ಮೊಳಕೆ ಒಡೆದ ಹೆಸರು ಕಾಳು ಆರೋಗ್ಯಕ್ಕೆ ಎಷ್ಟು ಉಪಯುಕ್ತ? ಅದರ ಲಾಭಗಳೇನು? ಅದನ್ನು ಯಾಕೆ ಸೇವಿಸಬೇಕು ಅನ್ನೋದರ ಸಂಪೂರ್ಣ ಮಾಹಿತಿ ಇಲ್ಲಿದೆ.

ಮೊಳಕೆ ಬಂದ ಹೆಸರು ಕಾಳನ್ನು ತಿನ್ನುವುದರಿಂದ ಎಷ್ಟೆಲ್ಲಾ ಲಾಭಗಳಿವೆ ಗೊತ್ತಾ ?

ತೂಕ ಕಡಿಮೆ ಮಾಡುತ್ತದೆ ಹಾಗೂ ತ್ವಚೆಯ ಆರೋಗ್ಯ ಕಾಪಾಡುತ್ತದೆ.
ಮೊಳಕೆ ಬಂದ ಹೆಸರು ಕಾಳಿನಲ್ಲಿ ಕ್ಯಾಲೋರೀಸ್ ಇಲ್ಲದ ಕಾರಣ ಇದನ್ನು ಎಷ್ಟು ತಿಂದರೂ ತೂಕ ಹೆಚ್ಚಾಗಲ್ಲ. ಬದಲಾಗಿ ತೂಕ ಕಡಿಮೆ ಆಗುತ್ತೆ. ಮೊಳಕೆ ಬಂದ ಹೆಸರು ಕಾಳನ್ನು ತಿನ್ನುವುದರಿಂದ ಇದರಲ್ಲಿರೋ ಫೈಬರ್ ನಿಮ್ಮ ದೇಹಕ್ಕೆ ಸೇರಿ ಹೊಟ್ಟೆ ತುಂಬುವ ಹಾಗೆ ಮಾಡುತ್ತೆ. ಆದರ ಜೊತೆ ಪದೇ ಪದೇ ಹಸಿವಾಗದ ರೀತಿ ನೋಡಿಕೊಳ್ಳುತ್ತದೆ. ಹಾಗೆಯೇ ಸ್ಥೂಲಕಾಯ ಮತ್ತು ಮಧುಮೇಹ ಕಾಯಿಲೆ ಬಾರದಂತೆ ನೋಡಿಕೊಳ್ಳುತ್ತದೆ. ಪ್ರತಿನಿತ್ಯ ಹೆಸರು ಕಾಳನ್ನು ತಿನ್ನುವುದರಿಂದ ತ್ವಚೆಯ ಆರೋಗ್ಯ ಕೂಡ ಚೆನ್ನಾಗಿರುತ್ತದೆ. ಅಲ್ಲದೆ ತ್ವಚೆಗೆ ಕಾಂತಿಯನ್ನು ನೀಡುತ್ತದೆ. ಇದರಿಂದ ಆಕರ್ಷಕ ಸೌಂದರ್ಯವನ್ನು ಕೂಡ ನೀವು ಪಡೆಯಬಹುದು.

ರೋಗ ನಿರೋಧಕ ಶಕ್ತಿ ಹೆಚ್ಚಿಸುತ್ತದೆ :
ಇದರಲ್ಲಿರುವ ವಿಟಮಿನ್ ಸಿ ದೇಹಕ್ಕೆ ಇನ್ಫೆಕ್ಷನ್ ಆಗೋದನ್ನ ತಡೆಯುತ್ತದೆ. ಇದರ ಜೊತೆ ವಿಟಮಿನ್ ಎ ಅಂಶ ಕೂಡ ಹೆಚ್ಚಾಗಿ ಇರೋದ್ರಿಂದ ದೇಹಕ್ಕೆ ಹೆಚ್ಚಿನ ಆಂಟಿ ಆಕ್ಸಿಡೆಂಟ್ಸ್ ಸಿಗುವ ರೀತಿ ನಿಗಾವಹಿಸಿ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ. ಕ್ಯಾನ್ಸರ್ ಬಾರದ ಹಾಗೆ ನೋಡಿಕೊಳ್ಳುತ್ತದೆ. ವಿಟಮಿನ್ ಎ, ಸಿ, ಅಮಿನೋ ಆಸಿಡ್ಸ್ ಹಾಗೂ ಪ್ರೋಟಿನ್ ಅಂಶ ದೇಹದಲ್ಲಿ ಫ್ರೀ ರಾಡಿಕಲ್ಸ್ ಸೇರದ ಹಾಗೆ ನೋಡಿಕೊಳ್ಳುತ್ತದೆ. ದೇಹದಲ್ಲಿ ಆಗುವ ಹಲವಾರು ಕ್ರಿಯೆಗಳ ಪರಿಣಾಮವಾಗಿ ಫ್ರೀ ರಾಡಿಕಲ್ಸ್ ಉತ್ಪತ್ತಿ ಆಗುತ್ತದೆ. ಇದರಿಂದ ದೇಹಕ್ಕೆ ಕ್ಯಾನ್ಸರ್ ಸೆಲ್ಸ್ ಸೇರುತ್ತದೆ. ಬೇಗ ಸುಸ್ತಾಗೋದು, ಕಣ್ಣು ಮಂಜಾಗುವುದು, ಹೃದಯಕ್ಕೆ ಸಂಬಂಧ ಪಟ್ಟ ತೊಂದರೆ ಕಾಣಿಸಿಕೊಳ್ಳುತ್ತದೆ. ಆದ್ದರಿಂದ ಇಂತಹ ತೊಂದರೆಗಳಿಂದ ದೂರವಿರಲು ಮೊಳಕೆ ಬಂದ ಹೆಸರು ಕಾಳನ್ನು ಸೇವಿಸಬೇಕು.


ಜೀರ್ಣಶಕ್ತಿ ವೃದ್ಧಿಸುತ್ತದೆ :
ಹೆಸರು ಕಾಳನ್ನು ನೀರಿನಲ್ಲಿ ನೆನಸಿಟ್ಟು, ಬಳಿಕ ಮೊಳಕೆ ಬಂದ ಮೇಲೆ ಸೇವಿಸುವುದರಿಂದ ಜೀರ್ಣಶಕ್ತಿ ಉತ್ತಮವಾಗುತ್ತೆ. ಇದರಲ್ಲಿರೋ ಪೌಷ್ಟಿಕಾಂಶ ಜೀರ್ಣಕ್ರಿಯೆಯನ್ನು ಸರಾಗ ಮಾಡುತ್ತದೆ. ಅಲ್ಲದೆ ಫೈಬರ್ ಅಂಶವು ದೇಹದಲ್ಲಿ ಆಹಾರದ ಸಂಚಾರ ಸರಿಯಾಗಿ ಆಗುವಂತೆ ನೋಡಿಕೊಂಡು ಮಲಬದ್ಧತೆ ತೊಂದರೆಯನ್ನು ನಿವಾರಿಸುತ್ತದೆ.

ಹೃದಯದ ಆರೋಗ್ಯ ಕಾಪಾಡುತ್ತದೆ :
ಮೊಳಕೆ ಬಂದ ಹೆಸರು ಕಾಳು ತಿನ್ನುವುದರಿಂದ, ಹೃದಯದ ಆರೋಗ್ಯ ಉತ್ತಮವಾಗುತ್ತದೆ. ಇದರಲ್ಲಿರೋ ಒಮೇಗಾ ಫ್ಯಾಟೀ ಆಸಿಡ್ ದೇಹಕ್ಕೆ ಬೇಕಾದ ಒಳ್ಳೆಯ ಕೊಬ್ಬಿನ ಅಂಶ ನೀಡಿ ರಕ್ತನಾಳದ ಆರೋಗ್ಯ ಕಾಪಾಡುತ್ತೆ. ಇದರಲ್ಲಿನ ಆಂಟಿ ಇನ್ಪ್ಲಮೇಟರಿ ಗುಣ ರಕ್ತನಾಳಗಳ ಮೇಲಿರೋ ಒತ್ತಡವನ್ನೂ ಕಡಿಮೆ ಮಾಡುತ್ತದೆ. ರಕ್ತದ ಸಂಚಾರ ಹೆಚ್ಚಿಸಿ ದೇಹಕ್ಕೆ ಹೆಚ್ಚು ಆಕ್ಸಿಜನ್ ಸಿಗುವ ಹಾಗೆ ಮಾಡಿ ಸ್ಟ್ರೋಕ್ ಹಾಗೂ ಹೃದಯಾಘಾತ ಆಗದಂತೆ ನೋಡಿಕೊಳ್ಳುತ್ತದೆ.

Tags: Healthhealthtipshealthupdatessproutveggie

Related News

2022ರಲ್ಲಿ ಅತಿ ಹೆಚ್ಚು ವಿವಾಹಗಳನ್ನು ಆಯೋಜಿಸಿದ ನಗರ ಯಾವುದು ಗೊತ್ತಾ ?
ಲೈಫ್ ಸ್ಟೈಲ್

2022ರಲ್ಲಿ ಅತಿ ಹೆಚ್ಚು ವಿವಾಹಗಳನ್ನು ಆಯೋಜಿಸಿದ ನಗರ ಯಾವುದು ಗೊತ್ತಾ ?

January 20, 2023
60 ವರ್ಷ ಪೂರೈಸಿದ್ದೇನೆ, ಈಗ ನಾನು ತಾತನಾಗಿರುವೆ : ಜಗ್ಗೇಶ್ ಪದವಿಪೂರ್ವ ಚಿತ್ರಕ್ಕೆ ಶುಭಹಾರೈಸಿ, ಹಳೆಯ ನೆನಪುಗಳ ಮೇಲುಕು
ಮನರಂಜನೆ

60 ವರ್ಷ ಪೂರೈಸಿದ್ದೇನೆ, ಈಗ ನಾನು ತಾತನಾಗಿರುವೆ : ಜಗ್ಗೇಶ್ ಪದವಿಪೂರ್ವ ಚಿತ್ರಕ್ಕೆ ಶುಭಹಾರೈಸಿ, ಹಳೆಯ ನೆನಪುಗಳ ಮೇಲುಕು

December 10, 2022
ಕಾಂತಾರ ನೋಡಿಲ್ಲ ಎಂದು ಟ್ರೋಲ್ ಮಾಡಿದವರಿಗೆ ನಾನು ನೋಡಿದ್ದೇನೆ ಎಂದ ನಟಿ ರಶ್ಮಿಕಾ ಮಂದಣ್ಣ!
Vijaya Time

ಕಾಂತಾರ ನೋಡಿಲ್ಲ ಎಂದು ಟ್ರೋಲ್ ಮಾಡಿದವರಿಗೆ ನಾನು ನೋಡಿದ್ದೇನೆ ಎಂದ ನಟಿ ರಶ್ಮಿಕಾ ಮಂದಣ್ಣ!

December 10, 2022
2022 ರಲ್ಲಿ ಗೂಗಲ್‌ನಲ್ಲಿ  ಅತಿಹೆಚ್ಚು ಹುಡುಕಿದ ಚಲನಚಿತ್ರಗಳ ಪಟ್ಟಿ ಬಿಡುಗಡೆ ; ಕಾಂತಾರ-ಕೆಜಿಎಫ್‌ಗೆ ಎಷ್ಟನೇ ಸ್ಥಾನ?
ಮನರಂಜನೆ

2022 ರಲ್ಲಿ ಗೂಗಲ್‌ನಲ್ಲಿ  ಅತಿಹೆಚ್ಚು ಹುಡುಕಿದ ಚಲನಚಿತ್ರಗಳ ಪಟ್ಟಿ ಬಿಡುಗಡೆ ; ಕಾಂತಾರ-ಕೆಜಿಎಫ್‌ಗೆ ಎಷ್ಟನೇ ಸ್ಥಾನ?

December 8, 2022

ವಿಜಯ ಟೈಮ್ಸ್‌ - ಬದಲಾವಣೆಯ ಹಾದಿ

Vijaya Times logo

ವಿಜಯ ಟೈಮ್ಸ್‌

  • ಪ್ರಮುಖ ಸುದ್ದಿ
  • ರಾಜಕೀಯ
  • ದೇಶ-ವಿದೇಶ
  • ಮನರಂಜನೆ
Menu
  • ಪ್ರಮುಖ ಸುದ್ದಿ
  • ರಾಜಕೀಯ
  • ದೇಶ-ವಿದೇಶ
  • ಮನರಂಜನೆ

Quick Links

  • About Us
  • Contact Us
  • For Advertisement
Menu
  • About Us
  • Contact Us
  • For Advertisement

Follow Us

Facebook Twitter Instagram Youtube

Download Vijaya Times App

Android
© 2022 Vijaya Times. All rights reserved.