Bellary : ಬಳ್ಳಾರಿ(Bellary) ಜಿಲ್ಲೆಯ ಬೈರದೇವನಹಳ್ಳಿ ಎಲ್.ಎಲ್.ಸಿ ಕಾಲುವೆಯನ್ನು ದುರಸ್ತಿ ಮಾಡಿ, ರೈತರಿಗೆ ನೀರು ಹರಿಸುವಂತೆ ಸಚಿವ ಶ್ರೀರಾಮುಲು(Sri Ramulu Efforts Win) ಎರಡು ದಿನಗಳಿಂದ ಸ್ಥಳದಲ್ಲೇ ಮೊಕ್ಕಾಂ ಹೂಡಿ ನಡೆಸಿದ ಪ್ರತಿಭಟನೆಗೆ ಕೊನೆಗೂ ಪ್ರತಿಫಲ ದೊರೆತಿದೆ.
ನಿಗಧಿತ ಅವಧಿಗಿಂತ ಮೊದಲೇ ದುರಸ್ತಿ ಕಾರ್ಯ ಪೂರ್ಣಗೊಂಡಿದೆ.

ಈ ಕುರಿತು ಟ್ವೀಟ್(Tweet) ಮಾಡಿ ಸಂತಸ ಹಂಚಿಕೊಂಡಿರುವ ಸಚಿವ ಶ್ರೀರಾಮುಲು, ನೀರು ಹರಿಸಿ ನಿಮ್ಮ ಬೆಳೆಗಳನ್ನು ರಕ್ಷಣೆ ಮಾಡುವುದಾಗಿ ನಾನು ರೈತರಿಗೆ ವಾಗ್ದಾನ ಮಾಡಿದ್ದೆ.
ಎಲ್ಲರ ಸಹಕಾರದಿಂದ ಇದು ಸಾಧ್ಯವಾಗಿದ್ದು, ಮುಂದೆಯೂ ಕೂಡ ಈ ಭಾಗದ ರೈತರ ಹಿತಕಾಪಾಡಲು ನಾನು ಸದಾ ಸಿದ್ದನಿದ್ದೇನೆ.
ಇದನ್ನೂ ಓದಿ : https://vijayatimes.com/nurul-hasan-strikes-virat/
ಅಧಿಕಾರ ಇರಲಿ, ಇಲ್ಲದಿರಲಿ, ನಿಮ್ಮ ರಕ್ಷಣೆಗೆ ನಾನು ಬದ್ದನಾಗಿರುವೆ. ಕಳೆದ 20 ದಿನಗಳಿಂದ ನೀರು ಹರಿಯದ ಪರಿಣಾಮ ಈ ಭಾಗದ ರೈತರು ಬೆಳೆದಿದ್ದ ಬೆಳೆಗಳು ಒಣಗಿ ಹೋಗುವ ಆತಂಕ ಎದುರಾಗಿತ್ತು.
ಅಧಿಕಾರಿಗಳ ಇಚ್ಛಾಶಕ್ತಿ, ಕಾರ್ಮಿಕರ ಸತತ ಪರಿಶ್ರಮದಿಂದ ಕಾಲುವೆಯ ದುರಸ್ತಿ ಕಾರ್ಯವನ್ನು ಮುಗಿಸಿಕೊಟ್ಡಿದ್ದಕ್ಕೆ ಅಭಿನಂದನೆಗಳನ್ನು ಸಲ್ಲಿಸುವೆ.

ಎರಡು ದಿನಗಳಿಂದ ಖುದ್ದು ನಾನೇ ಸ್ಥಳದಲ್ಲೇ ಮೊಕ್ಕಾಂ ಹೂಡಿದ್ದರಿಂದ ಕಾಲುವೆಯ ದುರಸ್ತಿ ಕಾರ್ಯ ನಿಗಧಿತ ಅವಧಿಗಿಂತ ಮೊದಲೇ ಪೂರ್ಣಗೊಂಡಿದ್ದು,
ಇದರಿಂದಾಗಿ ಈ ಭಾಗದ ಸಾವಿರಾರು ರೈತರ ಮೊಗದಲ್ಲಿ ಮಂದಹಾಸ ಮೂಡಿರುವುದು ವೈಯಕ್ತಿಕವಾಗಿ ನನಗೂ ತುಂಬಾ ಖುಷಿ ತಂದಿದೆ.
ಕೊನೆಗೂ ಬಳ್ಳಾರಿ ಗ್ರಾಮಾಂತರ ವಿಧಾನಸಭೆ ಕ್ಷೇತ್ರದ ಬೈರದೇವನಹಳ್ಳಿ ಎಲ್ ಎಲ್ ಸಿ ಕಾಲುವೆಯ ದುರಸ್ತಿ ಕಾರ್ಯ ಪೂರ್ಣಗೊಂಡಿದ್ದು, ಭವಿಷ್ಯದಲ್ಲಿ ಯಾವುದೇ ಅಡ್ಡಿ,
ಆತಂಕಗಳು ಎದುರಾಗದಂತೆ ಪೂಜಾ ವಿಧಿವಿಧಾನಗಳನ್ನು ನೆರವೇರಿಸಲಾಯಿತು ಎಂದು ತಿಳಿಸಿದ್ದಾರೆ.

ಇನ್ನು ಸಚಿವ ಶ್ರೀರಾಮುಲು ಅವರ ಪ್ರತಿಭಟನೆಯನ್ನು ರಾಜ್ಯ ಕಾಂಗ್ರೆಸ್(State Congress) ಟೀಕಿಸಿದ್ದು, ಶ್ರೀರಾಮುಲು ಅವರೇ,
ತಾವು ಧರಣಿ ನಡೆಸಿದ್ದು ಯಾರ ವಿರುದ್ಧ? ನಿಮ್ಮದೇ ಸರ್ಕಾರದ ವಿರುದ್ಧವೇ? ನಿಮ್ಮದೇ ಸಿಎಂ ವಿರುದ್ಧವೇ? ನಿಮ್ಮದೇ ಪ್ರಧಾನಿ ವಿರುದ್ಧವೇ?
https://fb.watch/gz8nviElx9/ ಹುಳ ಬಿದ್ದಿರುವ ಗೋಧಿ ಬಳಸಿ ಕೊಡ್ತಾರೆ ಮಕ್ಕಳಿಗೆ ಊಟ!
ಕ್ಯಾಬಿನೆಟ್ ಸಚಿವರು ತಮ್ಮದೇ ಡಬಲ್ ಇಂಜಿನ್ ಸರ್ಕಾರದ ವಿರುದ್ಧ ಪ್ರತಿಭಟಿಸುವ ಸ್ಥಿತಿ ಒದಗಿದ್ದೇಕೆ? ತಮ್ಮ ಮಾತನ್ನು ಯಾರೂ ಕೇಳ್ತಿಲ್ಲವೇ? ಅಥವಾ ಇದು ಕೇವಲ ತಳ್ಳುವ ಸರ್ಕಾರವೇ? ಎಂದು ಪ್ರಶ್ನಿಸಿದೆ.
- ಮಹೇಶ್.ಪಿ.ಎಚ್