Visit Channel

ಹ್ಯಾಕರ್‌ ಶ್ರೀಕಿ ಕಣ್ಮರೆ

ಬೆಂಗಳೂರು ನ 27 : ರಾಜ್ಯದಲ್ಲಿ ಬಿಟ್​ಕಾಯಿನ್​ ಆರೋಪ ಪ್ರತ್ಯಾರೋಪ ಸದ್ಯ ತಣ್ಣಗಾಗಿದೆ. ಇತ್ತ ಹ್ಯಾಕರ್​ ಶ್ರೀಕಿ ಕೂಡ ಕಣ್ಮರೆಯಾಗಿದ್ದಾನೆ.

ಈ ಹಿಂದೆ ಡ್ರಗ್ಸ್ ಸೇವನೆ ಪ್ರಕರಣದಲ್ಲಿ ಭಾಗಿಯಾಗಿದ್ದ ಶ್ರೀಕಿಯನ್ನು ಜೆ‌ಬಿ ನಗರ ಪೊಲೀಸರು ಬಂಧಿಸಿ ಜೈಲಿಗಟ್ಟಿದ್ದರು. ಬಳಿಕ ಷರತ್ತು ಬದ್ಧ ಜಾಮೀನನ ಮೂಲಕ ಹೊರಬಂದಿದ್ದ ಶ್ರೀಕಿ, ಪೊಲೀಸರ ಕಣ್ಣಿಗೂ ಕಾಣಿಸದೆ ಮರೆಯಾಗಿದ್ದಾನೆ.

ಈ ಹಿಂದೆ ಸಿಸಿಬಿ ಬಂಧಿಸಿ ಹೊರಬಂದಾಗಲೂ ಕೂಡ ಶ್ರೀಕಿ ಪೋಷಕರಿಗೂ ತಿಳಿಸದೆ ತಲೆಮರೆಸಿಕೊಂಡಿದ್ದ, ಇದೀಗ ಮತ್ತೆ ಶ್ರೀಕೃಷ್ಣ ತನ್ನ ಹಳೆ ಖಯಾಲಿಯನ್ನು ಮುಂದುವರಿಸಿದ್ದಾನೆ. ಕೋರ್ಟ್ ಷರತ್ತು ಬದ್ಧ ಜಾಮೀನಿನಲ್ಲಿ ಪ್ರತೀ ಶನಿವಾರ ತನಿಖಾಧಿಕಾರಿಯ ಮುಂದೆ ಹಾಜರಾಗುವಂತೆ ತಿಳಿಸಿತ್ತು. ಆದರೆ ಕಳೆದ ಶನಿವಾರ ಶ್ರೀಕಿ ತನಿಖಾಧಿಕಾರಿ ಮುಂದೆ ಹಾಜರಾಗಿಲ್ಲ. ಅಲ್ಲದೆ ಮೊಬೈಲ್​ ಸಂಪರ್ಕಕ್ಕೂ ಸಿಗುತ್ತಿಲ್ಲ ಎನ್ನಲಾಗಿದೆ. ಇನ್ನು ಪೊಲೀಸರು ಕೆಲ ದಿನಗಳ ಕಾಲ ಕಾದು ಕೋರ್ಟ್ ಮುಂದೆ ವರದಿ ನೀಡಲಿದ್ದಾರೆ. ಒಂದು ವೇಳೆ ಹಾಜರಾಗದೆ ಹೋದರೆ ಮತ್ತೆ ಅರೆಸ್ಟ್​ ಆಗುವ ಸಾಧ್ಯತೆಯಿದೆ.

Latest News

Russia
ದೇಶ-ವಿದೇಶ

ಜನಸಂಖ್ಯೆ ಹೆಚ್ಚಳಕ್ಕೆ 10 ಮಕ್ಕಳಿಗೆ ಜನ್ಮ ನೀಡಿದ್ರೆ 13 ಲಕ್ಷ ಬಹುಮಾನ : ರಷ್ಯಾ ಅಧ್ಯಕ್ಷ ಪುಟಿನ್‌ ಘೋಷಣೆ

ರಷ್ಯಾದ ರಾಜಕೀಯ(Russia Politics) ಮತ್ತು ಭದ್ರತಾ ತಜ್ಞ ಡಾ ಜೆನ್ನಿ ಮ್ಯಾಥರ್ಸ್, ಟೈಮ್ಸ್ ರೇಡಿಯೊದಲ್ಲಿ ಈ ಕುರಿತು ಮಾತನಾಡಿ, “ಮದರ್ ಹೀರೋಯಿನ್” ಎಂದು ಕರೆಯಲ್ಪಡುವ ಬಹುಮಾನ ಯೋಜನೆ

Dakshina Kannada
ರಾಜ್ಯ

ವಿಜಯಟೈಮ್ಸ್ ಇಂಪ್ಯಾಕ್ಟ್ ; ಬಂಟ್ವಾಳ ಸೇತುವೆಯ ದುಸ್ಥಿತಿ ನೋಡಲು ದಿಢೀರನೇ ಬಂದ ಅಧಿಕಾರಿಗಳು!

ಕಳಪೆ ಕಾಮಗಾರಿ ದುರಂತದ ಬಗ್ಗೆ ವಿಜಯಟೈಮ್ಸ್ ತಂಡ ಮಾಡಿದ್ದ ವರದಿಗೆ ಅಧಿಕಾರಿಗಳು ಈಗ ದಿಢೀರ್ ಎಚ್ಚೆತ್ತುಕೊಂಡಿದ್ದಾರೆ.

IT Minister
ದೇಶ-ವಿದೇಶ

5G ಬಿಡುಗಡೆಗೆ ತಯಾರಿ ಮಾಡಿಕೊಳ್ಳಿ : ಟೆಲಿಕಾಂ ಕಂಪನಿಗಳಿಗೆ ಐಟಿ ಸಚಿವ ಅಶ್ವಿನಿ ವೈಷ್ಣವ್ ಸೂಚನೆ

ಇನ್ನು ಏರ್ಟೆಲ್(Airtel) ಮತ್ತು ಜಿಯೋ(Jio) ಈ ತಿಂಗಳ ಕೊನೆಯಲ್ಲಿ ತಮ್ಮ 5G ಸೇವೆಗಳ ಮೊದಲ ಹಂತವನ್ನು ಬಿಡುಗಡೆಗೊಳಿಸುವ ನಿರೀಕ್ಷೆಯಿದೆ.