ಆರ್ಥಿಕ ದಿವಾಳಿತನದತ್ತ ಶ್ರೀಲಂಕಾ : ಒಂದು ಕೆಜಿ ಟೊಮೆಟೊ ಬೆಲೆ 200

ಕೊಲಂಬೊ  ಜ 12 : ಭಾರತದ ನೆರೆಯ ರಾಷ್ಟ್ರ ಶ್ರೀಲಂಕಾದ ಆರ್ಥಿಕ ಪರಿಸ್ಥಿತಿ ತೀವ್ರ ಹದಗೆಟ್ಟಿದ್ದು ಪ್ರಸ್ತುತ  ದಿವಾಳಿ ಅಂಚಿನಲ್ಲಿದೆ.  ಕೊಲಂಬೊ ಗೆಜೆಟ್ನ ವರದಿಯ ಪ್ರಕಾರ, ಕಳೆದ ದಶಕದ ಬಹುಪಾಲು ಅವಧಿಯಲ್ಲಿ ಶ್ರೀಲಂಕಾ ದುಪ್ಪಟ್ಟು ನಷ್ಟವನ್ನು ಎದುರಿಸುತ್ತಿದೆ. ಒಂದು ವಿತ್ತೀಯ ಕೊರತೆ ಮತ್ತು ಇನ್ನೊಂದು ವ್ಯಾಪಾರ ಕೊರತೆ. 2014 ರಿಂದ, ಶ್ರೀಲಂಕಾದ ಮೇಲಿನ ವಿದೇಶಿ ಸಾಲದ ಮಟ್ಟವು ನಿರಂತರವಾಗಿ ಹೆಚ್ಚುತ್ತಿದೆ. 2019 ರಲ್ಲಿ, ಈ ಸಾಲವು ದೇಶದ GDP ಯ 42.6 ಪ್ರತಿಶತವನ್ನು ತಲುಪಿದೆ.

ಅಪ್ಘಾನಿಸ್ತಾನದ ಜೊತೆಗೆ ಶ್ರೀಲಂಕಾ ದೇಶ ಕೂಡ ಸಂಕಷ್ಟದಲ್ಲಿದೆ. ಅದರಲ್ಲೂ ಈ ಆರ್ಥಿಕ ನಷ್ಟದಿಂದ ಅಲ್ಲಿನ ಜನರಿಗೆ ಬದುಹುಕಲು ಕಷ್ಟವಾಗಿದೆ. ಜೊತೆಗೆ ಮಾಡಿದ ಸಾಲವನ್ನು ತೀರಿಸಲು ಹವಣಿಸುತ್ತಿದ್ದಾರೆ. ಆಹರ ಸಾಮಾಗ್ರಿಗಳ ಬೆಲೆ ಏರಿಕೆಯನ್ನು ಗಮನಿಸಿದಾಗ ಮುಂದಿನ ದಿನಗಳಳ್ಲಿ ದಿನಸಿ ಸಾಮಾಗ್ರಿಗಳಲ್ಲೂ ಬೆಲೆ ಏರಿಕೆ ಕಾಣುವ ಸಾಧ್ಯತೆ ಹೆಚ್ಚಿದೆ. ಮುಂದಬರುವ ದಿನಗಳಲ್ಲಿ ಆಹಾರದ ಕೊರತೆಯು ಎದುರಿಸುವ ಸಾಧ್ಯತೆ ಹೆಚ್ಚಾಗಿ ಕಾಣುತ್ತಿದೆ.

ಕಳೆದ ವರ್ಷ ಆಗಸ್ಟ್ 30 ರಂದು, ಕರೆನ್ಸಿ ಮೌಲ್ಯದಲ್ಲಿ ತೀವ್ರ ಕುಸಿತದ ನಂತರ ಶ್ರೀಲಂಕಾ ಸರ್ಕಾರವು ರಾಷ್ಟ್ರೀಯ ಆರ್ಥಿಕ ತುರ್ತು ಪರಿಸ್ಥಿತಿಯನ್ನು ಘೋಷಿಸಿತು ಮತ್ತು ಅದರ ನಂತರ ಆಹಾರದ ಬೆಲೆಗಳಲ್ಲಿ ತೀವ್ರ ಏರಿಕೆಯಾಯಿತು. ಚೀನಾ ಸೇರಿದಂತೆ ಹಲವು ದೇಶಗಳಿಂದ ಪಡೆದ ಸಾಲವನ್ನು ಮರುಪಾವತಿಸಲು ಶ್ರೀಲಂಕಾ ಭಾರಿ ತೊಂದರೆ ಎದುರಿಸುತ್ತಿದೆ.

ಪ್ರಸ್ತುತ ತರಕಾರಿ ಬೆಲೆಗಳು

1ಕೆಜಿ ಟೊಮೆಟೊ – 200 ರೂ
1ಕೆಜಿ ಬದನೆಕಾಯಿ – 160 ರೂ
1ಕೆಜಿ ಬೆಂಡೆಕಾಯಿ – 200 ರೂ
1ಕೆಜಿ ಹಾಗಲಕಾಯಿ – 160 ರೂ
1ಕೆಜಿ ಬೀನ್ಸ್ – ರೂ 320 ರೂ
1ಕೆಜಿ ಎಲೆಕೋಸು – 240 ರೂ
1ಕೆಜಿ ಕ್ಯಾರೆಟ್ – 200 ರೂ
1ಕೆಜಿ ಬಾಳೆಕಾಯಿ – 120 ರೂ

Latest News

ಪ್ರಮುಖ ಸುದ್ದಿ

ತಾಜುದ್ದೀನ್ಜುನೈದೀ ಮತ್ತು  ಶಿವಮೊಗ್ಗ ಸುಬ್ಬಣ್ಣ ನಿಧನಕ್ಕೆ ಗಣ್ಯರ ಸಂತಾಪ

ಪ್ರಖ್ಯಾತ ಗಾಯಕರು, ತಮ್ಮ ಸುಸ್ವರದ ಮೂಲಕ ಕವಿ ಗೀತೆಗಳಿಗೆ ಮೆರುಗು ತಂದುಕೊಟ್ಟಿದ್ದ ಶ್ರೀ ಶಿವಮೊಗ್ಗ ಸುಬ್ಬಣ್ಣ ಅವರ ನಿಧನದ ಸುದ್ದಿ ಕೇಳಿ ಬಹಳ ದುಃಖವಾಗಿದೆ.

ದೇಶ-ವಿದೇಶ

ಒಡಿಶಾದಲ್ಲಿ ಆಘಾತಕಾರಿ ಘಟನೆ ; ಹಾಡಹಗಲೇ ವೃದ್ಧನನ್ನು ಕಂಬಕ್ಕೆ ಕಟ್ಟಿ, ಥಳಿಸಿ ಕೊಂದ ಕುಟುಂಬಸ್ಥರು!

ಕೊರಾಪುಟ್ ಜಿಲ್ಲೆಯ ಬುಡಕಟ್ಟು ಪ್ರದೇಶದಲ್ಲಿ ಹಾಡಹಗಲೇ ವೃದ್ಧನನ್ನು ವಿದ್ಯುತ್ ಕಂಬಕ್ಕೆ ಕಟ್ಟಿ ತಮ್ಮ ಕುಟುಂಬಸ್ಥರೇ ಥಳಿಸಿ ಕೊಂದಿರುವ ಆಘಾತಕಾರಿ ಘಟನೆ ಬೆಳಕಿಗೆ ಬಂದಿದೆ!

ಮಾಹಿತಿ

ಕಿಡ್ನಿ ಸ್ಟೋನ್‌ ಸಮಸ್ಯೆಗೆ ಇಲ್ಲಿದೆ ನೈಸರ್ಗಿಕ ಪರಿಹಾರ ; ಈ ಸರಳ ಪರಿಹಾರ ಪಾಲಿಸಿ

ಕೆಲವು ಮನೆಮದ್ದುಗಳು(Home Remedies) ಆರಂಭಿಕ ಹಂತದ ಕಿಡ್ನಿಸ್ಟೋನ್ ಸಮಸ್ಯೆಗೆ ಪರಿಹಾರ ನೀಡುತ್ತವೆ. ಅಂತಹ ಮನೆಮದ್ದುಗಳ ವಿವರ ಇಲ್ಲಿದೆ ನೋಡಿ.