Bengaluru : ಕನ್ನಡ ಚಿತ್ರರಂಗದಲ್ಲಿ ಚಂದ್ರ ಚಕೋರಿ, ಹುಡುಗರು, ಸಂಜು ವೆಡ್ಸ್ ಗೀತಾ (Srinagar kitty in gowli) ಚಿತ್ರದ ಮೂಲಕ ಜನರಿಗೆ ಚಿರಪರಿಚಯವಾದ ನಟ ಶ್ರೀನಗರ ಕಿಟ್ಟಿ ಅವರು ಇದೀಗ ಹಲವು ವರ್ಷಗಳ ನಂತರ ಮತ್ತೆ ಬೆಳ್ಳಿ ಪರದೆಯ ಮೇಲೆ ಕಾಣಿಸಿಕೊಳ್ಳಲು ಸಜ್ಜಾಗಿದ್ದಾರೆ.

ಕೆಲ ವರ್ಷಗಳಿಂದ ಚಿತ್ರರಂಗದಿಂದ ದೂರ ಉಳಿದಿದ್ದ ನಟ ಶ್ರೀನಗರ ಕಿಟ್ಟಿ ಅವರು ಇದೀಗ ಗೌಳಿ ಎಂಬ ಸಿನಿಮಾದ ಮುಖೇನ ಮತ್ತೆ ಚಿತ್ರರಂದತ್ತ ಮುಖ ಮಾಡಿದ್ದಾರೆ.
ಗೌಳಿ ಸಿನಿಮಾದ ತಯಾರಿ ನೋಡಿದ್ರೇ ಖಂಡಿತ ಈ ಬಾರಿ ನಟ ಶ್ರೀನಗರ ಕಿಟ್ಟಿ ಅವರು ಕನ್ನಡಿಗರನ್ನು ಸಂತಸ (Srinagar kitty in gowli) ಮೂಡಿಸುವುದು ಖಚಿತ ಎಂಬಂತಿದೆ.
ಚಿತ್ರದ ಟ್ರೇಲರ್ ವೀಕ್ಷಿಸಿದ ಬಳಿಕ ಹೇಳುವುದಾದರೇ, ಚಿತ್ರದ ತಯಾರಿ ಅದ್ದೂರಿಯಾಗಿದ್ದು, ನಟ ಶ್ರೀನಗರ ಕಿಟ್ಟಿ ಅವರ ಲುಕ್ ರಗಡ್ ಆಗಿದೆ! ಗೌಳಿ ಚಿತ್ರ ಮುಂದಿನ ವಾರ ಚಿತ್ರಮಂದಿರಗಳಲ್ಲಿ ಹಾಜರಾಗಲು ಸಜ್ಜಾಗಿದ್ದು, ಸದ್ಯ
ಚಿತ್ರದ ಟ್ರೈಲರ್ ರಿಲೀಸ್ ಆಗಿ ಸಿನಿ ಪ್ರೇಕ್ಷಕರ ಮನ ಗೆದ್ದು, ಉತ್ತಮ ಪ್ರಶಂಸೆ ಪಡೆದುಕೊಳ್ಳುತ್ತಿದೆ.
ಇದನ್ನು ಓದಿ: ನಟಿ ಊರ್ವಶಿ ರೌಟೇಲಾ ಕಾಂತಾರ 2 ಚಿತ್ರದ ನಾಯಕಿ ಎಂಬ ಗೊಂದಲದ ಬಗ್ಗೆ ಸ್ಪಷ್ಟನೆ ಇಲ್ಲಿದೆ ನೋಡಿ !
ಈ ಚಿತ್ರ ರಾಜ್ಯದ ಒಂದು ಭಾಗದ ಸಮುದಾಯವನ್ನು ಆಧರಿಸಿದ್ದು, ಉತ್ತರ ಕನ್ನಡದ ಸುತ್ತಾಮುತ್ತಾ ಇರುವ ‘ಗೌಳಿ’ ಸಮುದಾಯದ ಒಂದಿಷ್ಟು ನೈಜ ಘಟನೆಗಳನ್ನು ಒಳಗೊಂಡಿದೆ.
ಇದರ ಮೇಲೆ ಕಥೆ ಸಾಗಲಿದೆ ಎಂದು ಹೇಳಲಾಗಿದೆ.

ಗೌಳಿ ಚಿತ್ರವನ್ನು ಸೂರ ಅವರು ನಿರ್ದೇಶನ ಮಾಡಿದ್ದು, ರಘು ಸಿಂಗಂ ಅವರು ಬಂಡವಾಳ ಹೂಡಿದ್ದಾರೆ. ಚಿತ್ರದಲ್ಲಿ ನಾಯಕನಾಗಿ ಶ್ರೀನಗರ ಕಿಟ್ಟಿ ಅವರು ಅಭಿನಯಿಸಿದರೇ, ನಾಯಕಿಯಾಗಿ ಪಾವನಾ ಗೌಡ ಕಾಣಿಸಿಕೊಂಡಿದ್ದಾರೆ.
ಗೌಳಿ ಚಿತ್ರದಲ್ಲಿ ದೊಡ್ಡ ತಾರಾಬಳಗವೇ ಇದ್ದು, ರಂಗಾಯಣ ರಘು, ಶರತ್ ಲೋಹಿತಾಶ್ವ, ಕಾಕ್ರೋಚ್ ಸುಧಿ, ಯಶ್ ಶೆಟ್ಟಿ, ಗೋಪಾಲ ದೇಶಪಾಂಡೆ ಪ್ರಮುಖ ಪಾತ್ರಗಳಲ್ಲಿ ಮಿಂಚಿದ್ದಾರೆ. ಗೌಳಿ ಚಿತ್ರದ ಟ್ರೇಲರ್ ವೀಕ್ಷಿಸಿದ ಬಳಿಕ
ಅನಿಸೋದು, ಈ ಚಿತ್ರ ಭರವಸೆ ಮೂಡಿಸುತ್ತಿದೆ!
ಇದರಲ್ಲಿ ಏನೋ ಒಂದು ವಿಶೇಷತೆ ಅಡಗಿದೆ. ಚಿತ್ರದಲ್ಲಿ ನಟ ಶ್ರೀನಗರ ಕಿಟ್ಟಿ ಅವರ ನಟನೆ ಯಾವುದೋ ಒಂದು ಅದ್ಭುತ ವಿಷಯವನ್ನು ಹೇಳಲು ಹೊರಟಿದೆ ಎಂಬುದನ್ನು ಸ್ಪಷ್ಟಪಡಿಸುತ್ತಿದೆ.
ಸದ್ಯ ಈ ಎಲ್ಲಾ ಪ್ರಶ್ನೆಗಳಿಗೆ ಉತ್ತರ ಹುಡುಕಲು ಚಿತ್ರ ಬಿಡುಗಡೆಯಾಗುವವರೆಗೂ ಕಾಯಬೇಕಿದೆ.