ಚಾಮರಾಜನಗರ : ಸಿದ್ದರಾಮಯ್ಯ(Siddaramaiah) ಅವರಿಗೆ ಮುಂದಿನ ದಿನಗಳಲ್ಲಿ `ಉತ್ಸವಮೂರ್ತಿʼ ಪರಿಸ್ಥಿತಿ ಬರುತ್ತದೆ. ಊರ ಜಾತ್ರೆ ಮುಗಿದ ತಕ್ಷಣ ಉತ್ಸವ ಮೂರ್ತಿ ಹೊರಗೆ ಇರುತ್ತದೆ. ಅದೇ ರೀತಿ ಮುಂದಿನ ವಿಧಾನಸಭಾ ಚುನಾವಣೆ(Vidhanasabha Election) ಮುಗಿದ ತಕ್ಷಣ ಸಿದ್ದರಾಮಯ್ಯ ಕೂಡಾ ಪಕ್ಷದಿಂದ ಹೊರಗೆ ಇರುವ ಪರಿಸ್ಥಿತಿ ಬರುತ್ತದೆ ಎಂದು ಸಚಿವ ಶ್ರೀರಾಮುಲು(Sri Rammulu) ಲೇವಡಿ ಮಾಡಿದ್ದಾರೆ.

ಚಾಮರಾಜನಗರದ(Chamrajnagar) ಕೊಳ್ಳೇಗಾಲದಲ್ಲಿ(Kollegal) ಮಾದ್ಯಮಗಳೊಂದಿಗೆ ಮಾತನಾಡಿದ ಅವರು, ದಾವಣಗೆರೆಯಲ್ಲಿ(Davanagere) ನಡೆಯುತ್ತಿರುವ `ಸಿದ್ದರಾಮೋತ್ಸವʼ ಕಾರ್ಯಕ್ರಮದ ನಂತರ ಸಿದ್ದರಾಮಯ್ಯ ಅವರು ಕೇವಲ ಉತ್ಸವ ಮೂರ್ತಿಯಾಗಿಯೇ ಉಳಿಯುತ್ತಾರೆ. ಉತ್ಸವ ಮೂರ್ತಿಯ ಪರಿಸ್ಥಿತಿಯೇ ಅವರಿಗೆ ಬರಲಿದೆ ಎಂದು ವ್ಯಂಗ್ಯವಾಡಿದರು. ಇದೇ ಸಂದರ್ಭದಲ್ಲಿ ಎಸ್‌ಸಿ(SC) ಮತ್ತು ಎಸ್‌ಟಿ(ST) ಸಮುದಾಯಗಳ ಮೀಸಲಾತಿ ಹೆಚ್ಚಳಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿದ ಅವರು, ಎಸ್‌ಸಿ ಮತ್ತು ಎಸ್‌ಟಿ ಸಮುದಾಯಗಳ ಮೀಸಲಾತಿ ಹೆಚ್ಚಳಕ್ಕೆ ನಮ್ಮ ಸರ್ಕಾರ ಈಗಲೂ ಸಿದ್ದವಿದೆ.
ನಾನು ಈ ಹಿಂದೆ ಹೇಳಿದಂತೆ ಮೀಸಲಾತಿ ಹೆಚ್ಚಳ ಮಾಡಿಸದಿದ್ದರೆ ರಾಜಕೀಯ ನಿವೃತ್ತಿ ತೆಗೆದುಕೊಳ್ಳುತ್ತೇನೆ ಎಂಬ ಮಾತಿಗೆ ಈಗಲೂ ಬದ್ದನಾಗಿದ್ದೇನೆ. ಮೀಸಲಾತಿ ಹೆಚ್ಚಳ ಮಾಡುವ ಸಂಬಂಧ ಈಗಾಗಲೇ ಎಲ್ಲ ಪ್ರಯತ್ನಗಳನ್ನು ಮಾಡುತ್ತಿದ್ದೇನೆ. ಕೆಲವು ಕಾನೂನು ಮತ್ತು ತಾಂತ್ರಿಕ ಕಾರಣಗಳಿಂದ ವಿಳಂಬವಾಗುತ್ತಿದೆ. ಆದರೆ ಅದೆಲ್ಲವನ್ನೂ ನಿವಾರಿಸಿಕೊಂಡು ಶೀಘ್ರದಲ್ಲೇ ಎಸ್‌ಸಿ ಮತ್ತು ಎಸ್‌ಟಿ ಸಮುದಾಯಗಳಿಗೆ ಸಿಹಿಸುದ್ದಿ ಕೋಡುತ್ತೇವೆ ಎಂದು ಭರವಸೆ ನೀಡಿದರು. ಇನ್ನು ಮೀಸಲಾತಿ ಹೆಚ್ಚಳದ ಕುರಿತು ಸುಭಾಷ್ ಅಡಿ ಸಮಿತಿಯ ವರದಿ ಸರ್ಕಾರಕ್ಕೆ ಸಲ್ಲಿಕೆಯಾಗಿದೆ.

ಎಸ್ಸಿಗೆ 17%, ಎಸ್ಟಿಗೆ 7.5% ರಷ್ಟು ಮೀಸಲಾತಿ ಕೊಡುತ್ತೇವೆ ಎಂಬ ನಮ್ಮ ಮಾತನ್ನು ನಾವು ಉಳಿಸಿಕೊಳ್ಳುತ್ತೇವೆ. ಎಸ್ಸಿ, ಎಸ್ಟಿ ಸಮುದಾಯಗಳನ್ನು ಕಳೆದ ೭೦ ವರ್ಷಗಳಿಂದ ವೋಟ್ ಬ್ಯಾಂಕ್(Vote Bank) ಆಗಿ ಬಳಸಿಕೊಂಡ ಕಾಂಗ್ರೆಸ್ ಅವರಿಗಾಗಿ ಏನು ಮಾಡಿದೆ ಎಂದು ಪ್ರಶ್ನಿಸಿದರು.