Guwahati : ಬಾಲಿವುಡ್(Bollywood) ನಟ ಶಾರುಖ್ ಖಾನ್(Shah Rukh khan) ನಟನೆಯ ʼಪಠಾಣ್ʼ ಚಿತ್ರ ಪ್ರದರ್ಶನಕ್ಕೆ ಅಸ್ಸಾಂನ ಗುವಾಹಟಿಯಲ್ಲಿ ತೀವ್ರ ವಿರೋಧ ವ್ಯಕ್ತವಾದ ಹಿನ್ನಲೆಯಲ್ಲಿ ನಟ ಶಾರುಖ್ ಖಾನ್ ಅಸ್ಸಾಂ ಮುಖ್ಯಮಂತ್ರಿ(SRK called Assam CM) ಹಿಮಂತ ಬಿಸ್ವಾ ಶರ್ಮಾ ಅವರಿಗೆ ದೂರವಾಣಿ ಕರೆ ಮಾಡಿದ್ದಾರೆ.
ಈ ಮಾಹಿತಿಯನ್ನು ಸ್ವತಃ ಹಿಮಂತ ಬಿಸ್ವಾ ಶರ್ಮಾ ಅವರು ಟ್ವೀಟರ್‌ನಲ್ಲಿ ಹಂಚಿಕೊಂಡಿದ್ದಾರೆ.

“ನನಗೆ ನನ್ನ ಕಾಲದ ಚಲನಚಿತ್ರ ತಾರೆಯರು ಗೊತ್ತು. ನನಗೆ ಶಾರುಖ್ ಪರಿಚಯವಿರಲಿಲ್ಲ. ಅವರು ನನಗೆ ‘ನಾನು ಶಾರುಖ್ ಖಾನ್.
ನಾನು ನಿಮ್ಮೊಂದಿಗೆ ಮಾತನಾಡಬೇಕಿದೆʼ ಎಂದು ಸಂದೇಶವನ್ನು ಕಳುಹಿಸಿದರು ಮತ್ತು ತಮ್ಮನ್ನು ಪರಿಚಯಿಸಿಕೊಂಡರು.
ಆಗ ನನಗೆ ಸಮಯವಿರಲಿಲ್ಲ. ಆದ್ದರಿಂದ ನಂತರ 2 ಗಂಟೆಗೆ, ನಾವು ಮಾತನಾಡಿದೆವು.
ಅಸ್ಸಾಂನಲ್ಲಿ(SRK called Assam CM) ಪಠಾಣ್(Pathan) ಚಲನಚಿತ್ರಕ್ಕೆ ಸಂಬಂಧಿಸಿದಂತೆ ಯಾವುದೇ ಗೊಂದಲವಿಲ್ಲ ಎಂದು ನಾನು ಅವರಿಗೆ ಹೇಳಿದೆ.
ಗುವಾಹಟಿಯಲ್ಲಿ(Guwahati) ಪಠಾಣ್ ಚಿತ್ರದ ವಿರುದ್ಧದ ಪ್ರತಿಭಟನೆಯ ಬಗ್ಗೆ ಅವರು ತೀವ್ರ ಕಳವಳ ವ್ಯಕ್ತಪಡಿಸಿದ್ದಾರೆ.
ಚಲನಚಿತ್ರದ ವಿರುದ್ಧದ ಪ್ರದರ್ಶನದ ಬಗ್ಗೆ ತಮ್ಮ ಸರ್ಕಾರವು ವಿಚಾರಣೆ ನಡೆಸುತ್ತದೆ ಮತ್ತು ಇಂತಹ ಅಹಿತಕರ ಘಟನೆಗಳು ಮತ್ತೆ ಸಂಭವಿಸದಂತೆ ನೋಡಿಕೊಳ್ಳುತ್ತದೆ ಎಂದು ನಟನಿಗೆ ಭರವಸೆ ನೀಡಿದ್ದೇನೆ.

ಕಾನೂನು ಮತ್ತು ಸುವ್ಯವಸ್ಥೆ ಕಾಪಾಡುವುದು ರಾಜ್ಯ ಸರ್ಕಾರದ ಕರ್ತವ್ಯ ಎಂದು ನಾನು ಅವರಿಗೆ ಭರವಸೆ ನೀಡಿದ್ದೇನೆ ಎಂದು ಹಿಮಂತ ಬಿಸ್ವಾ ಶರ್ಮಾ(Himantha Biswa sharma) ಟ್ವಿಟರ್‌ನಲ್ಲಿ(Twitter) ತಿಳಿಸಿದ್ದಾರೆ.
ಇನ್ನು ಇತ್ತೀಚೆಗಷ್ಟೇ ಸಿಎಂ ಹಿಮಂತ ಬಿಸ್ವಾ ಶರ್ಮಾ ಅವರು “ಶಾರುಖ್ ಖಾನ್ ಯಾರು? ಅವರ ಬಗ್ಗೆ ಅಥವಾ ಅವರ ಪಠಾಣ್ ಚಿತ್ರದ ಬಗ್ಗೆ ನನಗೆ ಏನೂ ತಿಳಿದಿಲ್ಲ” ಎಂದು ಹೇಳಿದ್ದರು.
ಶಾರುಖ್‌ಖಾನ್ ನಟನೆಯ ಪಠಾಣ್ ಚಿತ್ರ ಪ್ರದರ್ಶನಗೊಳ್ಳಲಿರುವ ನರೇಂಗಿಯಲ್ಲಿ ಕಳೆದ ವಾರ ಥಿಯೇಟರ್ ಎದುರು ನಡೆದ ಹಿಂಸಾತ್ಮಕ ಪ್ರತಿಭಟನೆಯ ಕುರಿತು ಸುದ್ದಿಗಾರರ ಪ್ರಶ್ನೆಗೆ ಅವರು ಹೀಗೆ ಉತ್ತರಿಸಿದ್ದರು.
ಸಿದ್ಧಾರ್ಥ್ ಆನಂದ್(Siddarth Anand) ನಿರ್ದೇಶನದ ಪಠಾಣ್ ಚಿತ್ರ ಜನವರಿ 25 ರಂದು ಬಿಡುಗಡೆಯಾಗಲಿದೆ.
ಈ ಚಿತ್ರವು ಆದಿತ್ಯ ಚೋಪ್ರಾ(Aditya chopra) ಅವರ ಮಹತ್ವಾಕಾಂಕ್ಷೆಯ ಪತ್ತೇದಾರಿ ಬ್ರಹ್ಮಾಂಡದ ಒಂದು ಭಾಗವಾಗಿದೆ. ಚಿತ್ರದಲ್ಲಿ ಶಾರುಖ್ ಖಾನ್,
ದೀಪಿಕಾ ಪಡುಕೋಣೆ(Deepika padukone), ಜಾನ್ ಅಬ್ರಹಾಂ, ಡಿಂಪಲ್ ಕಪಾಡಿಯಾ ಮತ್ತು ಅಶುತೋಷ್ ರಾಣಾ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ. ಇದು ಹಿಂದಿ, ತಮಿಳು ಮತ್ತು ತೆಲುಗು ಭಾಷೆಗಳಲ್ಲಿ ಬಿಡುಗಡೆಗೆ ಸಿದ್ಧವಾಗಿದೆ.