Karnataka : ಇನ್ನು ಕೆಲವೇ ದಿನಗಳಲ್ಲಿ ಎಸ್. ಎಸ್. ಎಲ್. ಸಿ (SSLC) ಪರೀಕ್ಷೆ ಆರಂಭವಾಗುತ್ತಿದೆ. ಪರೀಕ್ಷೆಯ ಪ್ರವೇಶ ಪತ್ರಗಳನ್ನು ಆನ್‌ಲೈನ್ ಪಡೆಯುವುದು ಹೇಗೆ ಅನ್ನೋ ಕನ್‌ಫ್ಯೂಷನ್ ಇರುತ್ತೆ. ಈ ಗೊಂದಲ ನಿವಾರಣೆಗಾಗಿ (SSLC Annual Examination) ವಿದ್ಯಾರ್ಥಿಗಳಿಗೆ ಇಲ್ಲಿದೆ ಸಂಪೂರ್ಣ ಮಾಹಿತಿ.

2023 ಮಾರ್ಚ್ ಅಥವಾ ಏಪ್ರಿಲ್ ತಿಂಗಳಿನಲ್ಲಿ ನಡೆಯಲಿರುವ ಎಸ್. ಎಸ್. ಎಲ್. ಸಿ ಮಹತ್ವದ ಪರೀಕ್ಷೆಗೆ ಹಾಜರುಗುತ್ತಿರುವ ವಿದ್ಯಾರ್ಥಿಗಳಿಗೆ ಪ್ರವೇಶ ಪತ್ರಗಳನ್ನು ಕರ್ನಾಟಕ ಪರೀಕ್ಷಾ ಮಂಡಳಿಯ (Karnataka Examination Board) ವೆಬ್ ಸೈಟ್ ನಲ್ಲಿ ಅಪ್ಲೋಡ್ ಮಾಡಲಾಗುತ್ತಿದೆ.
ಆಯಾ ಶಾಲಾ ಮುಖ್ಯಶಿಕ್ಷಕರು ವಿದ್ಯಾರ್ಥಿಗಳ ಪ್ರವೇಶ ಪತ್ರಗಳನ್ನು ಶಾಲಾ ಲಾಗಿನ್ ಐಡಿ ಮುಖೇನ ಡೌನ್ ಲೋಡ್ ಮಾಡಿಕೊಂಡು ವಿದ್ಯಾರ್ಥಿಗಳಿಗೆ ನಿಗದಿತ ಸಮಯಕ್ಕೆ ಹಂಚುವಂತೆ ಮಂಡಳಿ ಸುತ್ತೋಲೆಯನ್ನು ಹೊರಡಿಸಿದೆ.
ತಮ್ಮ ಶಾಲೆಯ ಮುಖಾಂತರ ಸೇರ್ಪಡೆಯಾದ ವಿದ್ಯಾರ್ಥಿಗಳ ಸಂಖ್ಯೆ, ಡೌನಲೋಡ್ ಮಾಡಿಕೊಂಡು, ಪ್ರವೇಶ ಪತ್ರಗಳ ಸಂಖ್ಯೆಗೆ ಸರಿಹೊಂದುತ್ತಿದೆಯೇ ಎಂದು ಗಮನಿಸಿಕೊಳ್ಳುವುದು ಅಗತ್ಯವಾಗಿದೆ.
ಇದನ್ನೂ ಓದಿ : https://vijayatimes.com/amit-shah-vs-rahul-gandhi/
ಒಂದು ವೇಳೆ ಯಾವುದಾದರು ವಿದ್ಯಾರ್ಥಿಯ ಪ್ರವೇಶ ಪತ್ರ ಬಂದಿಲ್ಲವೆಂದರೆ ಸದರಿ ವಿದ್ಯಾರ್ಥಿಯ ವಿವರವನ್ನು ಸರಿಯಾದ ದಾಖಲಾತಿಗಳೊಂದಿಗೆ ಮಂಡಳಿಗೆ ಆದಷ್ಟು ಬೇಗ ಕಳುಹಿಸಿಕೊಡುವಂತೆ ಸೂಚಿಸಿದೆ.
ವಿದ್ಯಾರ್ಥಿಯ ಭಾವಚಿತ್ರ, ಮೊಹರು ಮತ್ತು ಇತರೆ ತಿದ್ದು ಪಡೆಗಳಲ್ಲಿ ಏನಾದರು ದೋಷಗಳಿದ್ದಲ್ಲಿ ಸರಿಯಾದ ದಾಖಲೆಗಳೊಂದಿಗೆ ಮಂಡಳಿಗೆ ಸಲ್ಲಿಸಿ ಸರಿಪಡಿಸಿಕೊಳ್ಳಬೇಕು.
ಇದರಿಂದ ವಿದ್ಯಾರ್ಥಿಗೆ ಮುಂದೆ ಅಂಕಪಟ್ಟಿಯಲ್ಲಾಗುವ ತೊಂದರೆಗೆ ಶಾಲಾ ಮುಖ್ಯೋಪಾಧ್ಯಾಯರೇ ನೇರ ಹೊಣೆಗಾರರಾಗುತ್ತಾರೆ.
ಮಂಡಳಿ ಇದರ ಯಾವುದೇ ಜವಾಬ್ದಾರಿಯನ್ನು ವಹಿಸುವುದಿಲ್ಲ ಎಂದು ಬಹು ಸ್ಪಷ್ಟಪಡಿಸಿದೆ. ವಿದ್ಯಾರ್ಥಿಗಳ ಅಂತಿಮ ಅಥವಾ ಕೊನೆಯ ಪ್ರವೇಶ ಪತ್ರಗಳಲ್ಲಿ ವಿದ್ಯಾರ್ಥಿಯ ಹೆಸರು, ತಾಯಿ ಹೆಸರು, ಭಾವಚಿತ್ರ ,

ಸಹಿ ಇತರೆ ತಿದ್ದುಪಡಿಗಳಲ್ಲಿ ಸಿಸಿಇಆರ್ ಎಪ್ ವಿದ್ಯಾರ್ಥಿಗಳಿಗೆ ಎಸ್. ಎ. ಟಿ. ಎಸ್ (SATS) ನಲ್ಲಿ ತಿದ್ದುಪಡೇ ಮಾಡಿದ ಪ್ರತಿಯೊಂದಿಗೆ ಹಾಗೂ ಇತರ ದಾಖಲೆಗಳೊಂದಿಗೆ ತಲಾ
ಒಂದು ತಿದ್ದು ಪಡೆಗೆ ರೂ 100 ದಂಡ ಶುಲ್ಕವನ್ನು ನೆಪ್ಟ್ ಚಲನ್ (Neft Challan) ಮೂಲಕ ಪಾವತಿಸಿ 24/ 03/ 2023ರೊಳಗೆ ಮಂಡಳಿಗೆ ತಲುಪುವಂತೆ(SSLC Annual Examination) ಪ್ರಸ್ತಾವನೆಯನ್ನು ಸಲ್ಲಿಸುವಂತೆ ಸೂಚಿಸಿದೆ.
ಇನ್ನೂ ಹೆಚ್ಚಿನ ಮಾಹಿತಿಗಾಗಿ ವಿದ್ಯಾರ್ಥಿಗಳು, ಪೋಷಕರು ಮತ್ತು ಶಾಲಾ ಮುಖ್ಯಸ್ಥರು ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯ ನಿರ್ಣಯ ಮಂಡಳಿಯ ಅಧಿಕೃತ ವೆಬ್ ಸೈಟ್ https:// kseab. Karnatakara. gov. in/ ಗೆ ಭೇಟಿ ನೀಡಿ. ನಿಮಗೆ ಬೇಕಾದ ಮಾಹಿತಿಯನ್ನು ಪಡೆಯಬಹುದಾಗಿದೆ.
- ರುಕ್ಮಿಣಿ