ಹೊಸದಿಲ್ಲಿ : 8.5 ಲಕ್ಷಕ್ಕೂ ಹೆಚ್ಚು ಪರೀಕ್ಷೆ ಬರೆದ ವಿದ್ಯಾರ್ಥಿಗಳು ಮೇ 19 ಗುರುವಾರ ಪ್ರಕಟವಾಗುವ ತಮ್ಮ ಫಲಿತಾಂಶಗಳತ್ತ ಕಾಯುತ್ತಿದ್ದಾರೆ. 10 ನೇ ತರಗತಿಯ ಫಲಿತಾಂಶವನ್ನು ನಾಳೆ, ಮೇ 19 ರಂದು ಪ್ರಕಟಿಸಲಾಗುವುದು ಎಂದು ಅಧಿಕೃತ ಘೋಷಣೆ ಹೊರಬಂದಿದೆ.

ಕರ್ನಾಟಕ SSLC 2022 ಫಲಿತಾಂಶವನ್ನು sslc.karnataka.gov.in ನಲ್ಲಿ ಘೋಷಿಸಲಾಗುತ್ತದೆ. ಮಾರ್ಚ್ 28 ರಿಂದ ಏಪ್ರಿಲ್ 11 ರವರೆಗೆ ಪರೀಕ್ಷೆಗಳು ಪೂರ್ಣಗೊಂಡಿತು. ಕರ್ನಾಟಕ 10ನೇ ತರಗತಿಯ ಬೋರ್ಡ್ ಪರೀಕ್ಷೆ 2022 ರಲ್ಲಿ ಅರ್ಹತೆ ಪಡೆಯಲು ಎಂದಿನಂತೆ ಇರುವ ನಿಯಮಾವಳಿಗಳ ಅನುಸಾರ ವಿದ್ಯಾರ್ಥಿಗಳು ಕನಿಷ್ಠ ಶೇಕಡಾ 35 ಅಂಕಗಳನ್ನು ಗಳಿಸಬೇಕಾಗುತ್ತದೆ. ಕಡ್ಡಾಯವಾಗಿ ಒಟ್ಟಾರೆ 35 ಶೇಕಡಾ ಅಂಕಗಳನ್ನು ಹೊರತುಪಡಿಸಿ, ವಿದ್ಯಾರ್ಥಿಗಳು ಸ್ಕೋರ್ ಮಾಡಬೇಕಾಗುತ್ತದೆ.
ಎಲ್ಲಾ ವಿಷಯಗಳಲ್ಲಿ ಕನಿಷ್ಠ ಉತ್ತೀರ್ಣ ಅಂಕಗಳು ಪಡೆದಿರಬೇಕು. ಎಸ್‌ಎಸ್‌ಎಲ್‌ಸಿ 10ನೇ ತರಗತಿ ಪರೀಕ್ಷಾ ಆಡಳಿತ ಮಂಡಳಿ, ಕರ್ನಾಟಕ ಪ್ರೌಢ ಶಿಕ್ಷಣ ಪರೀಕ್ಷಾ ಮಂಡಳಿ (ಕೆಎಸ್‌ಇಇಬಿ) ಈಗಾಗಲೇ 10ನೇ ತರಗತಿಯ ಉತ್ತರದ ಕೀಗಳನ್ನು ಬಿಡುಗಡೆ ಮಾಡಿದೆ. ಕರ್ನಾಟಕ ಎಸ್‌ಎಸ್‌ಎಲ್‌ಸಿ 10ನೇ ತರಗತಿ ಫಲಿತಾಂಶ ಕಳೆದ ವರ್ಷ ಕೋವಿಡ್ ಕಾರಣ ಆಗಸ್ಟ್ 9ರಂದು ಪ್ರಕಟವಾಗಿತ್ತು. ಕಳೆದ ವರ್ಷ ಎಸ್‌ಎಸ್‌ಎಲ್‌ಸಿ 10ನೇ ಫಲಿತಾಂಶ ಕರ್ನಾಟಕ ಬೋರ್ಡ್‌ನಲ್ಲಿ ಒಟ್ಟಾರೆ ಉತ್ತೀರ್ಣ ಶೇಕಡಾ 99.9 ರಷ್ಟಿತ್ತು.

ಕಳೆದ ವರ್ಷ ಕರ್ನಾಟಕ 10 ನೇ ತರಗತಿಯ ಎಸ್‌ಎಸ್‌ಎಲ್‌ಸಿ ಫಲಿತಾಂಶದಲ್ಲಿ 157 ವಿದ್ಯಾರ್ಥಿಗಳು 625 ಅಂಕಗಳಿಗೆ 625 ಅಂಕಗಳನ್ನು ಗಳಿಸಿದ್ದರು. ಆದ್ರೆ, ಈ ಬಾರಿ ಎಷ್ಟು ಫಲಿತಾಂಶ ಹೊರಬರಲಿದೆ ಎಂಬುದನ್ನು ಕಾದುನೋಡಬೇಕಿದೆ. ಕರ್ನಾಟಕ 10ನೇ SSLC ಫಲಿತಾಂಶ 2022 : ಪ್ರಮಾಣ ಪತ್ರ ಡೌನ್‌ಲೋಡ್ ಮಾಡಲು
ಅಧಿಕೃತ ವೆಬ್‌ಸೈಟ್‌ಗಳಿಗೆ ಹೋಗಿ,
sslc.karnataka.gov.in ಮತ್ತು karresults.nic.in. ಕ್ಲಿಕ್ ಮಾಡಿ, ನಿಮ್ಮ
ನೋಂದಣಿ ಸಂಖ್ಯೆಗಳು ಮತ್ತು ರೋಲ್ ಸಂಖ್ಯೆಯನ್ನು ಹಾಕಿ ಲಾಗಿನ್ ಮಾಡಿ. SSLC 10ನೇ ಫಲಿತಾಂಶ 2022 ಪರದೆಯ ಮೇಲೆ ಕಾಣಿಸುತ್ತದೆ. ಕಾಣಿಸಿದ ತದನಂತರ ಕರ್ನಾಟಕ 10 ನೇ ಫಲಿತಾಂಶ 2022 ಪ್ರಮಾಣ ಪತ್ರವನ್ನು ಡೌನ್‌ಲೋಡ್ ಮಾಡಿಕೊಳ್ಳಿ.