ರಾಜ್ಯಾದ್ಯಂತ ಎಸ್.ಎಸ್.ಎಲ್ಸಿ ಪರೀಕ್ಷೆ ಪ್ರಾರಂಭಗೊಂಡು ಒಂದು ದಿನ ಕಳೆದಿದೆ. ಇಂದು ಎರಡನೇ ದಿನ ನಡೆಯುತ್ತಿದೆ. ಈ ಮಧ್ಯೆ ದುರಂತ ಒಂದು ಸಂಭವಿಸಿದೆ. ಹೌದು, ಎಸ್.ಎಸ್.ಎಲ್ಸಿ ಪರೀಕ್ಷೆ ಬರೆಯುತ್ತಿದ್ದ ಮೈಸೂರು ಜಿಲ್ಲೆಯ ಟಿ.ನರಸೀಪುರ ತಾಲೂಕಿನ ಅನುಶ್ರೀ ಎಂಬ ವಿದ್ಯಾರ್ಥಿಗೆ ಹೃದಯಾಘಾತವಾಗಿದ್ದು, ಸ್ಥಳದಲ್ಲೇ ಮೃತಪಟ್ಟಿದ್ದಾಳೆ. ಟಿ. ನರಸೀಪುರ ತಾಲೂಕಿನ ವಿದ್ಯೋದಯ ಪರೀಕ್ಷಾ ಕೇಂದ್ರದಲ್ಲಿ ಈ ದುರ್ಘಟನೆ ಸಂಭವಿಸಿದೆ.

ಅನುಶ್ರೀ ಎಂಬ 16 ವರ್ಷದ ವಿದ್ಯಾರ್ಥಿನಿ ಮೃತ ದುರ್ದೈವಿ. ಪರೀಕ್ಷೆಗೆ ತಯಾರಾಗಿ ಬಂದಿದ್ದ ಅನುಶ್ರೀ ಎಲ್ಲರಂತೆ ಪರೀಕ್ಷೆಗೆ ಹಾಜರಾಗಿದ್ದಾಳೆ. ಪರೀಕ್ಷೆ ಪ್ರಾರಂಭವಾದ ಬಳಿಕ ಪರೀಕ್ಷೆ ಬರೆಯುತ್ತಿದ್ದ ಅನುಶ್ರೀಗೆ ಎದೆ ನೋವು ಕಾಣಿಸಿಕೊಂಡಿದೆ. ಈ ವೇಳೆ ದಿಢೀರ್ ಸ್ಥಳದಲ್ಲೇ ಕುಸಿದು ಬಿದ್ದಿದ್ದಾಳೆ. ತಕ್ಷಣವೇ ಪರೀಕ್ಷಾ ಕೊಠಡಿ ಸಮೀಪದಲ್ಲಿದ್ದ ಸಿಬ್ಬಂದಿಗಳು ಆಕೆಯನ್ನು ಶೀಘ್ರವೇ ಟಿ.ನರಸಿಪುರದ ಸಾರ್ವಜನಿಕ ಆಸ್ಪತ್ರೆಗೆ ದಾಖಲಿಸಲಾಯಿತು. ದಾಖಲಿಸಿದ ಬಳಿಕ ಚಿಕಿತ್ಸೆ ಫಲಕಾರಿಯಾಗದೇ ಸಾವನಪ್ಪಿದ್ದಾಳೆ ಎಂಬುದು ವೈದ್ಯರಿಂದ ತಿಳಿದುಬಂದಿದೆ.