Bengaluru : ರಾಜ್ಯ ವಿಧಾನಸಭಾ ಚುನಾವಣೆಗೆ (State Assembly Elections) ದಿನಗಣನೆ ಆರಂಭವಾಗಿದೆ. ಮತದಾನಕ್ಕೆ ಕೆಲವೇ ದಿನಗಳಿರುವಾಗ ಕಾಂಗ್ರೆಸ್ (state Assembly election 2023) ಮಾಡಿಕೊಂಡಿರುವ ಸ್ವಯಂಕೃತ ಅವಾಂತರಗಳು ಮತದಾರರ ಮೇಲೆ ಗಂಭೀರ ಪರಿಣಾಮ ಬೀರಲಿದ್ಯಾ ಎಂಬ ಚರ್ಚೆ ಎಲ್ಲೆಡೆ ಜೋರಾಗಿದೆ.
ಇಷ್ಟು ದಿನಗಳ ಕಾಲ ಭರ್ಜರಿ ಪ್ರಚಾರ ನಡೆಸಿ, ಭಾರೀ ಉತ್ಸಾಹದಲ್ಲಿದ್ದ ಕಾಂಗ್ರೆಸ್ (Congress) ನಾಯಕರಿಗೆ ಇದೀಗ ತಳಮಳ ಶುರುವಾಗಿದೆ.
ಕೊನೆಕ್ಷಣದಲ್ಲಿ ಮಾಡಿಕೊಂಡಿರುವ ಅವಾಂತರಗಳ ಪರಿಣಾಮ ಏನಾಗಲಿದೆ ಎಂಬ ಲೆಕ್ಕಾಚಾರ ಮೂರು ಪಕ್ಷಗಳಲ್ಲಿ ನಡೆಯುತ್ತಿದೆ.
ಕಾಂಗ್ರೆಸ್ಮಾಡಿಕೊಂಡಿರುವ ಅವಾಂತರಗಳ ಪರಿಣಾಮ ಏನಾಗಲಿದೆ..?
ಪ್ರಧಾನಿ ನರೇಂದ್ರ ಮೋದಿ (Prime Minister Narendra Modi) ವಿರುದ್ದ ಕಾಂಗ್ರೆಸ್ ರಾಷ್ಟ್ರೀಯ ಅಧ್ಯಕ್ಷ ಮಲ್ಲಿಕಾರ್ಜುನ್ ಖರ್ಗೆ (Congress National President Mallikarjun Kharge) ಮಾಡಿರುವ “ವಿಷಸರ್ಪ” ಎಂಬ ಟೀಕೆ ಭಾರೀ ವಿವಾದಕ್ಕೆ ಕಾರಣವಾಗಿತ್ತು.
ರಾಜ್ಯ ಬಿಜೆಪಿ ನಾಯಕರು ಖರ್ಗೆ ವಿರುದ್ದ ತೀವ್ರ ಟೀಕಾಪ್ರಹಾರ ನಡೆಸಿದ್ದರು.
ಇದನ್ನೂ ಓದಿ : https://vijayatimes.com/kempegowda-international-airport-bengaluru/
ತಮ್ಮ ಹೇಳಿಕೆ ವಿವಾದದ ಸ್ವರೂಪ ಪಡೆಯುತ್ತಲೇ, ಮಲ್ಲಿಕಾರ್ಜುನ್ಖರ್ಗೆ ಅವರು ವಿಷಾದ ವ್ಯಕ್ತಪಡಿಸಿದ್ದರು.
ಆದರೂ ಖರ್ಗೆ ಅವರು ನೀಡಿದ ಹೇಳಿಕೆ ಬಿಜೆಪಿ (BJP) ಕಾರ್ಯಕರ್ತರು ಮತ್ತು ಮೋದಿ ಅಭಿಮಾನಿಗಳ ಮೇಲೆ ಗಂಭೀರ ಪರಿಣಾಮ ಬೀರಿದೆ.
ಬಿಜೆಪಿಯಿಂದ ದೂರವಾಗಿದ್ದ ಅನೇಕ ಬಿಜೆಪಿ ಕಾರ್ಯಕರ್ತರು ಮತ್ತೇ ಬಿಜೆಪಿ ಪರವಾಗಿ ಮತದಾನ ಮಾಡಲು ಮತಗಟ್ಟೆಗೆ ಬರುವ ಸಾಧ್ಯತೆ ಹೆಚ್ಚಾಗಲಿದೆ.
ಇನ್ನು ಕಾಂಗ್ರೆಸ್ ಪ್ರಣಾಳಿಕೆ ರಾಜ್ಯದಲ್ಲಿ ಭಾರೀ ಚರ್ಚೆಯಾಗುತ್ತಿದೆ. ಭಜರಂಗದಳವನ್ನು ನಿಷೇಧ ಮಾಡುತ್ತೇವೆ ಎಂದು ಘೋಷಣೆ ಮಾಡಿರುವ (state Assembly election 2023) ಕಾಂಗ್ರೆಸ್ ಪಕ್ಷದ ವಿರುದ್ದ ರಾಜ್ಯಾದ್ಯಂತ ಭಾರೀ ಆಕ್ರೋಶ ವ್ಯಕ್ತವಾಗುತ್ತಿದೆ.
ಹನುಮಭಕ್ತರ ಮೇಲೆ ಕಾಂಗ್ರೆಸ್ ನಿಷೇಧ ಹೇರಲು ಹೊರಟಿದೆ ಎಂದು ಬಿಜೆಪಿ ನಾಯಕರು ಕಾಂಗ್ರೆಸ್ ವಿರುದ್ದ ವಾಗ್ದಾಳಿ ನಡೆಸುತ್ತಿದ್ದಾರೆ.
ಈಗಾಗಲೇ ಹಿಂದೂ ವಿರೋಧಿ ಎಂಬ ಹಣೆಪಟ್ಟಿ ಹೊತ್ತುಕೊಂಡಿರುವ ಕಾಂಗ್ರೆಸ್ ಪಕ್ಷಕ್ಕೆ ಭಜರಂಗದಳ (Bajrang Dal) ನಿಷೇಧ ವಿಷಯ ಬಿಸಿತುಪ್ಪವಾಗಿ ಪರಿಣಮಿಸಿದೆ.
ಭಜರಂಗದಳವನ್ನು ನಿಷೇಧಿಸುವ ವಿಚಾರ ಕರಾವಳಿ ಭಾಗದಲ್ಲಿ ಬಿಜೆಪಿಗೆ ವರವಾಗಲಿದೆ ಎಂಬುದು ರಾಜಕೀಯ ಪರಿಣಿತರ ಲೆಕ್ಕಾಚಾರ.
ಕರಾವಳಿ ಭಾಗದ ಹಿಂದೂ ಸಂಘಟನೆಗಳು ಈ ವಿವಾದದಿಂದಾಗಿ ಒಗ್ಗೂಡಿ, ಚುನಾವಣೆಯಲ್ಲಿ ಬಿಜೆಪಿ ಪರವಾಗಿ ಕೆಲಸ ಮಾಡಲು ನಿರ್ಧರಿಸಿರುವುದು ಕಾಂಗ್ರೆಸ್ ಪಕ್ಷಕ್ಕೆ ಸ್ವಲ್ಪ ಹಿನ್ನಡೆಯುಂಟು ಮಾಡಲಿದೆ.
ಒಟ್ಟಾರೆಯಾಗಿ ಕೊನೆಕ್ಷಣದಲ್ಲಿ ಕಾಂಗ್ರೆಸ್ ಮಾಡಿಕೊಂಡಿರುವ ಅವಾಂತರಗಳು ಬಿಜೆಪಿಗೆ ವರವಾಗುತ್ತಾ..? ಎಂಬುದನ್ನು ಮೇ 13ರಂದು ಹೊರಬೀಳಲಿರುವ ಫಲಿತಾಂಶದಲ್ಲಿ ತಿಳಿಯಲಿದೆ.