Karnataka : ಮಾನ್ಯ ಭ್ರಷ್ಟರಾಮಯ್ಯ ಅವರೇ, ನಿಮ್ಮ ಅವಧಿಯಲ್ಲಿ ನಡೆದ 2014-15ರ ಸಾಲಿನ ಶಿಕ್ಷಕರ ನೇಮಕಾತಿಯಲ್ಲಿ(Teachers Scam) ನಡೆದ ಹಗರಣ ಒಂದೊಂದಾಗಿಯೇ ಹೊರಬೀಳುತ್ತಿದೆ.
ಕಾಂಗ್ರೆಸ್ ಸರ್ಕಾರ(Congress Government) 100% ಕಮಿಷನ್ ಸರ್ಕಾರ ಎಂಬ ನಮ್ಮ ವಾದದಲ್ಲಿ ಏನು ತಪ್ಪಿದೆ? ಎಂದು ರಾಜ್ಯ ಬಿಜೆಪಿ(State BJP) ಸಿದ್ದರಾಮಯ್ಯ(Siddaramaiah) ವಿರುದ್ದ ವಾಗ್ದಾಳಿ ನಡೆಸಿದೆ. ‘ಭ್ರಷ್ಟಕಾಂಗ್ರೆಸ್ʼ ಎಂಬ ಹ್ಯಾಷ್ಟ್ಯಾಗ್(Hashtag) ಬಳಸಿ ಸರಣಿ ಟ್ವೀಟ್(Tweet) ಮಾಡಿರುವ ಬಿಜೆಪಿ, ಕಾಂಗ್ರೆಸ್ ಸರ್ಕಾರದ ಅವಧಿಯಲ್ಲಿ ಅರ್ಜಿಯೇ ಹಾಕದೆ ಸರ್ಕಾರಿ ಉದ್ಯೋಗಿಯಾಗಬಹುದಿತ್ತು.
ಇದನ್ನೂ ಓದಿ : https://vijayatimes.com/nithish-kumar-jdu-gets-shock/
ಭ್ರಷ್ಟರಾಮಯ್ಯ ಸಿಎಂ ಆಗಿದ್ದಾಗ 14 ಜನರು ಅಕ್ರಮವಾಗಿ ಶಿಕ್ಷಕರಾಗಿ ನೇಮಕಾತಿಯಾಗಿದ್ದರು. ಈ ಅಕ್ರಮ ನೇಮಕಾತಿಗೆ ಕಾಂಗ್ರೆಸ್ ಫಿಕ್ಸ್ ಮಾಡಿದ ಕಮಿಷನ್ ಪರ್ಸಂಟೇಜ್ ಎಷ್ಟು? ಎಂದು ಪ್ರಶ್ನಿಸಿದೆ. ತಾಕತ್ತಿದ್ದರೆ ನಮ್ಮ ಹಗರಣಗಳನ್ನು ಬಯಲಿಗೆಳೆಯಿರಿ ಎನ್ನುವ ಭ್ರಷ್ಟರಾಮಯ್ಯ ಅವರೇ, ಹಗರಣ ಮಾಡಿ,
ತನಿಖೆಗೆ ಹೆದರಿ ತನಿಖಾ ಸಂಸ್ಥೆಗಳನ್ನು ಮುಚ್ಚುವಾಗ ನಿಮ್ಮ ಧಮ್ ಎಲ್ಲಿ ಹೋಗಿತ್ತು? ಶಿಕ್ಷಕರ ನೇಮಕಾತಿ ಹಗರಣ, ಅರ್ಕಾವತಿ ರೀಡೂ ಹಗರಣ, ಇಂಧನ ಇಲಾಖೆ ಹಗರಣ ಒಂದೇ ಎರಡೇ, ಕಾಂಗ್ರೆಸ್ ಮಾಡಿದ್ದೆಲ್ಲವೂ ಹಗರಣವೇ. ಬಿಜೆಪಿ ಸರ್ಕಾರದ ಮೇಲೆ ಪೊಳ್ಳು ಆರೋಪ ಮಾಡುವ ಭ್ರಷ್ಟರಾಮಯ್ಯ ಅವರೇ,
ಪಿಎಸ್ಐ ನೇಮಕಾತಿಯಲ್ಲಿ ಅಕ್ರಮ ನಡೆದಿದ್ದು, ಗಮನಕ್ಕೆ ಬಂದಾಕ್ಷಣ ಬಿಜೆಪಿ ಸರ್ಕಾರ ತನಿಖೆಗೆ ಒಪ್ಪಿಸಿದೆ. ಶಿಕ್ಷಕರ ನೇಮಕಾತಿ ಹಗರಣ ಮುಚ್ಚಿಹಾಕುವ ಹುನ್ನಾರ ನಡೆಸಿದ್ದು ಏಕೆ? ಎಂದು ಪ್ರಶ್ನಿಸಿದೆ. ಇನ್ನು ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರದ ಅವಧಿಯಲ್ಲಿ ನಡೆದಿರುವ ನೇಮಕಾತಿ ಅಕ್ರಮಗಳ ಬಗ್ಗೆ ತನಿಖೆ ನಡೆಸಲಾಗುತ್ತಿದ್ದು,
14 ಜನರು ಅರ್ಜಿಯನ್ನು ಹಾಕದೇ ನೌಕರಿ ಪಡೆದುಕೊಂಡಿದ್ದಾರೆ ಎನ್ನಲಾಗಿದೆ. 2014-15ರ ಸಾಲಿನ ಶಿಕ್ಷಕರ ನೇಮಕಾತಿಯಲ್ಲಿ ಭಾರೀ ಅಕ್ರಮ ನಡೆದಿದೆ ಎಂದು ಬಿಜೆಪಿ ಆರೋಪಿಸಿದ್ದು, ಇದನ್ನೇ ಇಟ್ಟುಕೊಂಡು ಮುಂಬರುವ ಅಧಿವೇಶನದಲ್ಲಿ ಮಾಜಿ ಸಿಎಂ ಸಿದ್ದರಾಮಯ್ಯ ಅವರನ್ನು ಎದುರಿಸಲು ಬಿಜೆಪಿ ಸಿದ್ದತೆ ನಡೆಸಿದೆ.
ಇದನ್ನೂ ಓದಿ : https://vijayatimes.com/aravind-kejrival-had-dinner-at-auto-driver-house/
ಇನ್ನೊಂದೆಡೆ ತಮ್ಮ ಸರ್ಕಾರದ ಅವಧಿಯಲ್ಲೇ ನಡೆದಿರುವ ನೇಮಕಾತಿ ಹಗರಣಗಳ ಕುರಿತು ಉತ್ತರಿಸಬೇಕಾದ ಸಂದಿಗ್ದತೆಯಲ್ಲಿ ಸಿದ್ದರಾಮಯ್ಯ ಸಿಲುಕಿದ್ದಾರೆ. ಇಷ್ಟು ದಿನಗಳ ಕಾಲ ಬಿಜೆಪಿ ಮೇಲೆ ವಾಗ್ದಾಳಿ ನಡೆಸುತ್ತಿದ್ದ ಸಿದ್ದರಾಮಯ್ಯನವರು ಇದೀಗ ಈ ಆರೋಪಗಳಿಗೆ ಉತ್ತರಿಸಬೇಕಿದೆ.
- ಮಹೇಶ್ ಪಿ.ಎಚ್