Bengaluru : ಪಾರ್ಟಿಗಳಿಗಾಗಿ ನಿರಂತರವಾಗಿ ವಿದೇಶಗಳಿಗೆ ಭೇಟಿ ಕೊಡುವ ರಾಹುಲ್ ಗಾಂಧಿ(Rahul Gandhi) ಅವರಿಗೆ ನಮ್ಮ ರಾಷ್ಟ್ರಗೀತೆಯೇ(State BJP Allegation) ಮರೆತು ಹೋಗಿದೆ. ಹಾಗಾಗಿ “ಈಗ ರಾಷ್ಟ್ರಗೀತೆ” ಎಂದ ನಂತರ ಭಾರತ್ ತೋಡೋ ಯಾತ್ರೆಯಲ್ಲಿ ನೆರೆಯ ದೇಶದ ರಾಷ್ಟ್ರಗೀತೆ ಮೊಳಗಿದೆ.

ರಾಷ್ಟ್ರಗೀತೆಯೇ ತಿಳಿಯದವರಿಗೆ ರಾಷ್ಟ್ರದ ಚುಕ್ಕಾಣಿ ಬೇಕಂತೆ ಎಂದು ರಾಜ್ಯ ಬಿಜೆಪಿ ರಾಹುಲ್ ಗಾಂಧಿ ಅವರನ್ನು ಟ್ವೀಟ್(State BJP Allegation) ಮೂಲಕ ಲೇವಡಿ ಮಾಡಿದೆ.
ಇನ್ನೊಂದು ಟ್ವೀಟ್‌ನಲ್ಲಿ ಮುಂಬರುವ ವಿಧಾನಸಭಾ ಟಿಕೆಟ್‌ಗಾಗಿ ಅರ್ಜಿ ಸಲ್ಲಿಸುವ ಕಾಂಗ್ರೆಸ್ ಪಕ್ಷದ ನಿಯಮವನ್ನು ಲೇವಡಿ ಮಾಡಿದ್ದು,
ಕಾಂಗ್ರೆಸ್ ಟಿಕೇಟಿಗಾಗಿ ಒಂದೇ ಕ್ಷೇತ್ರದಲ್ಲಿ ಐದಾರು ಅರ್ಜಿಗಳು ಬಂದಿವೆ. ಇಲ್ಲಿ ಸಿದ್ದರಾಮಯ್ಯ(Siddaramaiah) ಬಣ ಮತ್ತು ಡಿ.ಕೆ.ಶಿವಕುಮಾರ ಬಣದವರ ಪೈಪೋಟಿ ತೀವ್ರವಾಗಿದೆ.
ಆದರೆ ಸಿದ್ದರಾಮಯ್ಯನವರು ಅರ್ಜಿ ಸಲ್ಲಿಸದೇ ಇರುವುದು, ಮೂಲ ಕಾಂಗ್ರೆಸ್‌ನವರಿಗೆ ಒಂದು ನಿಯಮ, ವಲಸೆ ಕಾಂಗ್ರೆಸ್‌ನವರಿಗೆ ಒಂದು ನಿಯಮ ಎಂಬಂತಾಗಿದೆ.
ಇದನ್ನೂ ಓದಿ : https://vijayatimes.com/dog-saved-his-owner/
ಬಾಡಿಗೆ ಪ್ರಚಾರ ಮಾಡುವ ಸಿದ್ದರಾಮಯ್ಯನವರಿಗೆ ಕೋಲಾರದಲ್ಲಿ ಭವಿಷ್ಯವಿಲ್ಲ. ‘ಸಮಾಜವಾದಿ’ ಸಿದ್ದರಾಮಯ್ಯನವರ ಕೋಲಾರದ ಆಡಂಬರದ ಪ್ರವಾಸ ಠುಸ್ ಪಠಾಕಿ ಆಗಿದೆ.
ಕೋಲಾರದ ಕನಸನ್ನು ಬಿಟ್ಟು ಆಗುವ ಕೆಲಸದ ಬಗ್ಗೆ ಗಂಭೀರವಾಗಿ ಕುಳಿತು ಚಿಂತಿಸುವುದು ಆರೋಗ್ಯಕ್ಕೆ ಒಳಿತು.
ಅರ್ಜಿ ಸಲ್ಲಿಸಲು ದಿನಾಂಕ ನಿಗದಿ ಪಡಿಸಿರುವ ಕೆಪಿಸಿಸಿ ಅಧ್ಯಕ್ಷರು ಅರ್ಜಿ ಸಲ್ಲಿಸದವರಿಗೆ ಟಿಕೆಟ್ ಇಲ್ಲ ಎಂದು ಈಗಲೇ ಘೋಷಣೆ ಮಾಡುವರೇ? ಅಥವಾ ಹೆಚ್ಚಿನ ದುಡ್ಡು ಕೊಡುವವರಿಗೆ ಬ್ಲಾಕ್‌ನಲ್ಲಿ ಮಾರಿಕೊಳ್ಳುವರೇ? ಎಂದು ವ್ಯಂಗ್ಯವಾಡಿದೆ.
ಕಾಂಗ್ರೆಸ್ ಪಕ್ಷದ ಟಿಕೆಟ್‌ಗೆ ಅರ್ಜಿ ಸಲ್ಲಿಸಲು ಲಕ್ಷಾಂತರ ಕಟ್ಟಬೇಕೆಂಬ ಕಟ್ಟಪ್ಪಣೆ ಮಾಡುವ ಮೂಲಕ ಸಾಮಾನ್ಯ ಕಾರ್ಯಕರ್ತರಿಗೆ ಟಿಕೆಟ್ ಇಲ್ಲ ಎನ್ನುವ ಸಂದೇಶ ಸಾರಿದೆ.

ಸಾಮಾನ್ಯ ಕಾರ್ಯಕರ್ತರು ಪೋಸ್ಟರ್ ಅಂಟಿಸಲು ಮಾತ್ರವೇ? ಕಾಂಗ್ರೆಸ್ ಅಭ್ಯರ್ಥಿಯಾಗಲು ಅಧಿಕೃತ ಟಿಕೆಟ್ ಹರಾಜಿಗಿಟ್ಟಿರುವ ಕೆಪಿಸಿಸಿ ಅಧ್ಯಕ್ಷರು,
ಟಿಕೆಟ್ ಗಾಗಿಯೇ ಲಕ್ಷಾಂತರ ಕಟ್ಟಿಸಿಕೊಳ್ಳುವ ಮೂಲಕ ಸ್ಥಿತಿವಂತರಿಗೆ ಮಾತ್ರ ಟಿಕೆಟ್ ಎನ್ನುವ ನಿಯಮ ಜಾರಿಗೆ ತಂದಂತಿದೆ. ಸಾಮಾನ್ಯ ಕಾರ್ಯಕರ್ತರ ಪಾಡೇನು? ಎಂದು “ಕಾಂಗ್ರೆಸ್ ಟಿಕೆಟ್ ಬಿಸಿನೆಸ್” ಎಂಬ ಹ್ಯಾಷ್‌ಟ್ಯಾಗ್(Hashtag) ಬಳಸಿಕ ಟೀಕಿಸಿದೆ.
- ಮಹೇಶ್.ಪಿ.ಎಚ್