vijaya times advertisements
Visit Channel

ಸಿದ್ದರಾಮಯ್ಯರೇ ವಾಸ್ತವ ಕೇಳಿಸಿಕೊಳ್ಳಿ ; ರಾಜ್ಯಕ್ಕೆ 5278 ಕೋಟಿ ರೂ. ನೆರೆ ಪರಿಹಾರ ದೊರಕಿದೆ : ಬಿಜೆಪಿ

Congress

Karnataka : ಸಿದ್ದರಾಮಯ್ಯ(Siddaramaiah) ಅವರು, ನಮ್ಮ ರಾಜ್ಯಕ್ಕೆ ಕೇಂದ್ರ ಸರ್ಕಾರ(Central Government) 1200 ಕೋಟಿ ರೂ. ನೆರೆ ಪರಿಹಾರ(Relief Fund) ನೀಡಿದೆ ಎಂದು ಸುಳ್ಳು ಆರೋಪಿಸಿದ್ದಾರೆ.

siddaramaiah

ನಮ್ಮ ರಾಜ್ಯಕ್ಕೆ 5278 ಕೋಟಿ ರೂ. ನೆರೆ ಪರಿಹಾರ ದೊರಕಿದೆ ಎಂದು ರಾಜ್ಯ ಬಿಜೆಪಿ(State BJP) ವಿಪಕ್ಷ ನಾಯಕ ಸಿದ್ದರಾಮಯ್ಯನವರ(Siddaramaiah) ಆರೋಪಕ್ಕೆ ಉತ್ತರ ನೀಡಿದೆ. ಈ ಕುರಿತು ಟ್ವೀಟ್‌(Tweet) ಮಾಡಿರುವ ಬಿಜೆಪಿ, ಸಿದ್ದರಾಮಯ್ಯ ಅವರು, ನಮ್ಮ ರಾಜ್ಯಕ್ಕೆ ಕೇಂದ್ರ ಸರ್ಕಾರ 1200 ಕೋಟಿ ರೂ. ನೆರೆ ಪರಿಹಾರ ನೀಡಿದೆ ಎಂದು ಸುಳ್ಳು ಆರೋಪಿಸಿದ್ದಾರೆ.

ಇದನ್ನೂ ಓದಿ : https://vijayatimes.com/why-cardiac-happens-to-youth-the-most/

ನಮ್ಮ ರಾಜ್ಯಕ್ಕೆ 5278 ಕೋಟಿ ರೂ. ನೆರೆ ಪರಿಹಾರ ದೊರಕಿದ್ದು, 3965.42 ಕೋಟಿ ರೂ ಮಂಜೂರಾತಿ ಬಗ್ಗೆ ಖುದ್ದು ಸಿದ್ದರಾಮಯ್ಯ ಅವರು ಪ್ರಕಟಿಸಿದ ಪಟ್ಟಿಯಲ್ಲೆ ಇರುವುದು ಬುರುಡೆರಾಮಯ್ಯಗೆ ಹಿಡಿದ ಕೈಗನ್ನಡಿ. ಸುಳ್ಳನ್ನೆ ಸಿದ್ದಾಂತವಾಗಿ ಕಾಂಗ್ರೆಸ್ ನಂಬಿದೆ.

BJP

ತೆರಿಗೆ ಆದಾಯ(Tax) ಹರಿವಿನಲ್ಲಿ ರಾಜ್ಯಕ್ಕೆ ಕೇಂದ್ರದಿಂದ 3 ಲಕ್ಷ ಕೋಟಿ ರೂ ಪಾವತಿಯಾಗಿದೆ, 47 ಸಾವಿರ ಕೋಟಿ ರೂ. ವಾಪಸಾತಿಯಾಗಿದೆ ಎಂದು ಆರೋಪಿಸಿದ ಸಿದ್ದರಾಮಯ್ಯರೇ ವಾಸ್ತವ ಕೇಳಿಸಿಕೊಳ್ಳಿ, ರಾಜ್ಯ 2,24,404 ಕೋಟಿ ರೂ. ಪಾವತಿಸಿದ್ದು, 1,29,639 ಕೋಟಿ ರೂ. ವಾಪಸಾತಿಯಾಗಿದೆ ಎಂದಿದೆ.

ಇದನ್ನೂ ಓದಿ : https://vijayatimes.com/ed-raid-multiple-places-over-liqour-policy/

ಬುರುಡೆರಾಮಯ್ಯ ಬಿಜೆಪಿ ವಿರುದ್ಧ ಸುಳ್ಳು ಆರೋಪಗಳನ್ನು ಮಾಡುವುದು ಹೊಸತೇನಲ್ಲ. ಅದನ್ನೆ ಮುಂದುವರಿಸಿಕೊಂಡ ಬಂದ ಸಿದ್ದರಾಮಯ್ಯ 30 ಸಾವಿರ ಕೋಟಿ ನೆರೆ ಪರಿಹಾರವನ್ನು ನಮ್ಮ ಸರ್ಕಾರವು ಕೇಂದ್ರದಿಂದ ಬಯಸಿತ್ತು ಎಂದಿದ್ದಾರೆ. ಅಸಲಿಗೆ ನಮ್ಮ ಸರ್ಕಾರ ಬಯಸಿದ್ದು 8281.8 ಕೋಟಿ ರೂ. ಇಂತಹ ಸುಳ್ಳುಗಳಿಗೆ ಜನರೇ ಉತ್ತರ ನೀಡಲಿದ್ದಾರೆ ಎಂದಿದೆ.

  • ಮಹೇಶ್‌ ಪಿ.ಎಚ್

Latest News

ಮನರಂಜನೆ

ನೆಟ್ ಫ್ಲಿಕ್ಸ್ ನಲ್ಲಿ ಕಾಂತಾರ ಹಿಂದಿ, ಇಂಗ್ಲೀಷ್ ಭಾಷೆಯಲ್ಲಿ ಲಭ್ಯವಾಗಲಿದೆ : ರಿಷಬ್ ಶೆಟ್ಟಿ

ಕಾಂತಾರ ಓಟಿಟಿಯಲ್ಲಿ ಮೊದಲ ಬಾರಿಗೆ ಬಿಡುಗಡೆಯಾದ ವೇಳೆ ಕಾಂತಾರ ಚಿತ್ರದ ಅಸಲಿ ವರಾಹ ರೂಪಂ ಹಾಡು ತೆಗೆದು ಹಾಕಲಾಗಿತ್ತು.

ಪ್ರಮುಖ ಸುದ್ದಿ

ದೆಹಲಿ ಮಹಾನಗರ ಪಾಲಿಕೆ ಚುನಾವಣೆ: ಜಯದ ಹಾದಿಯಲ್ಲಿ ಆಪ್

ಆಕ್ಸಿಸ್ ಮೈ ಇಂಡಿಯಾ ಎಕ್ಸಿಟ್ ಪೋಲೋ ಪ್ರಕಾರ ಬಿಜೆಪಿ 69 ರಿಂದ 91 ವಾರ್ಡ್ ಗಳಲ್ಲಿ ಗೆಲುವು ಸಾಧ್ಯತೆ ಹಾಗೂ ಕಾಂಗ್ರೆಸ್ 3 ರಿಂದ 7 ವಾರ್ಡ್ ಗಳಲ್ಲಿ ಗೆಲ್ಲುತ್ತದೆ ಎಂದು ಸಮೀಕ್ಷೆ ತಿಳಿಸಿದೆ

ಪ್ರಮುಖ ಸುದ್ದಿ

ಬೆಳಗಾವಿಯಲ್ಲಿ ಕಲ್ಲು ತೂರಾಟ ; ಪುಣೆಯಲ್ಲಿ ಕರ್ನಾಟಕ ಬಸ್‌ಗಳಿಗೆ ಮಸಿ ಬಳಿದ ಶಿವಸೇನಾ!

ಕರ್ನಾಟಕ-ಮಹಾರಾಷ್ಟ್ರ ಮುಖ್ಯಮಂತ್ರಿಗಳ ನಡುವಿನ ವಾಗ್ಸಮರ ಗಡಿ ಭಾಗದಲ್ಲಿ ಘರ್ಷಣಗೆ ಪ್ರಮುಖವಾಗಿದೆ. ಎಂ.ಇ.ಎಸ್ (M.E.S) ಪುಂಡರ ಹಾವಳಿ ಹೆಚ್ಚಾಗಿದ್ದು, ಕರ್ನಾಟಕ ರಾಜ್ಯದ ಬಸ್‌ಗಳನ್ನು ಅಡಗಟ್ಟಿ ಮಸಿ ಹಚ್ಚಿ ಆಕ್ರೋಶ ಹೊರಹಾಕಿದ್ದರು